ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಬೃಹತ್ ಪ್ರತಿಭಟನೆ

ಚಳ್ಳಕೆರೆ : ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ (ಎಸ್.ಸಿ) ಗೆ ಸೇರಿಸುವ ಬಗ್ಗೆ ತಾಲೂಕಿನಲ್ಲಿ ಬೃಹತ್ ಪ್ರತಿಭಟನೆಯ ಮೂಲಕ ನಗರದ ಪ್ರವಾಸಿ ಮಂದಿರದಿAದ ಪ್ರಾರಂಭವಾದ ಪ್ರತಿಭಟನೆ ವಾಲ್ಮೀಕಿ ವೃತ್ತ ಹಾಗೂ ಅಂಬೇಡ್ಕರ್ ವೃತ್ತದಿಂದ ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ತಮ್ಮ ಮೀಸಲಾತಿ ಬೇಡಿಕೆಯನ್ನು ಒತ್ತಾಯಿಸಿದರು,
ನಂತರ ತಾಲೂಕು ಕಛೇರಿಗೆ ಆಗಮಿಸಿದ ಪ್ರತಿಭನಕಾರರು ಗ್ರೇಡ್ ತಹಶೀಲ್ದಾರ್ ಸಂಧ್ಯಾ ರವರಿಗೆ ಮನವಿ ಪತ್ರ ಸಲ್ಲಿಸಿ ನಮ್ಮ ಮನವಿಯನ್ನು ಸರಕಾರಕ್ಕೆ ರವಾನಿಸಬೇಕು ಎಂದು ಒತ್ತಾಯಿಸಿದರು.
ಇನ್ನೂ ಪ್ರತಿಭಟನೆ ಮೆರವಣೆಗೆಗೆ ಉಪ್ಪಾರ ಸಮಾಜದ ಸ್ವಾಮಿಜೀಯಾದ ಶ್ರೀ ಪುರೋಷತ್ತಮ ನಂದಪುರಿ ಮಾಹಾ ಸ್ವಾಮಿ ರವರ ಚಾಲನೆ ನೀಡಿದರು.
ನಂತರ ವಾಲ್ಮೀಕಿ ವೃತ್ತದ ಬಳಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಗೆ ಮೀಸಲಾತಿ ಸಂಬAದಿಸಿದ ಮನವಿ ಸಲ್ಲಿಸಿದರು.
ಇದರ ಬಗ್ಗೆ ಅಧಿವೇಶನದಲ್ಲಿ ಗಮನ ಸೇಳೆದು ಉಪ್ಪಾರ ಸಮಾಜದ ಬೇಡಿಕೆಗಳನ್ನು ಮಂಡಿಸಲಾಗುವುದು ಎಂದು ಭರವಸೆ ನೀಡಿದರು.
ಇನ್ನೂ ಪ್ರತಿಭಟನೆಯಲ್ಲಿ ಶ್ರೀ ಪುರೋಷತ್ತಮ ನಂದಪುರಿ ಮಾಹಾ ಸ್ವಾಮಿ ಮಾತನಾಡಿ, ಉಪ್ಪಾರ ಸಮಾಜ ಕರ್ನಾಟಕ ರಾಜ್ಯದಲ್ಲಿ ಸರಿಸುಮಾರು 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಔದ್ಯೋಗಿಕವಾಗಿ ಶೋಷಿತವಾದ ಅತೀ ಹಿಂದುಳಿದ ಸಮಾಜವಾಗಿದೆ.
ಈ ಸಮಾಜವನ್ನು ಸುಮಾರು ದಶಕಗಳಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಮಾಜದ ಪೂಜ್ಯ ಗುರುಗಳು ಹಾಗೂ ಹಿರಿಯರು ಬೃಹತ್ ಸಮಾವೇಶಗಳನ್ನು ಏರ್ಪಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿರುತ್ತಾರೆ. ಆದರೆ ಇಲ್ಲಿಯವರೆವಿಗೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನೂ ಉಪ್ಪಾರ ಸಂಘದ ಜಿಲ್ಲಾ ಅಧ್ಯಕ್ಷ ವೀರೇಶ್, ಗೌರವ ಅಧ್ಯಕ್ಷ ನಿವೃತ್ತ ಡಿವೈಎಸ್‌ಪಿ ಎಸ್.ನಾಗರಾಜ್, ತಾಲೂಕು ಅಧ್ಯಕ್ಷ ಜಿ.ಹೆಚ್.ಹನುಮಂತಪ್ಪ, ಜಿಲ್ಲಾ ಉಪಾಧ್ಯಕ್ಷ ಎಲ್.ಐ.ಸಿ.ರಂಗಸ್ವಾಮಿ, ಯಲ್ಲಪ್ಪ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಉಪಾಧ್ಯಕ್ಷ ನಾಗರಾಜ್, ನೀಲಕಂಠಪ್ಪ, ರವಿ, ಸಿದ್ದಪ್ಪ, ಆರ್.ಮೂರ್ತಿ, ಯುವ ಘಟಕ ಅಧ್ಯಕ್ಷ ಡಿಕೆ.ರವಿ, ಹೊಸಹಳ್ಳಿ ತಿಪ್ಪೆಸ್ವಾಮಿ, ಮೆದೆಹಳ್ಳಿ ಅಜ್ಜಪ್ಪ, ತಿಮ್ಮಣ್ಣ, ವೆಂಕಟೇಶ್, ಚಂದ್ರಣ್ಣ, ಲಕ್ಷಿö್ಮÃದೇವಿ, ರಂಗಸ್ವಾಮಿ, ರಾಜು, ಡಿ.ಎ.ನಾಗರಾಜ್‌ಶಿವಣ್ಣ, ಸಿದ್ದಲಿಂಗಮೂರ್ತಿ,ಮಹೇಶ್, ಬಸವರಾಜ್, ಇತರ ಮಹಿಳೆಯರು ಮುಖಂಡರು ಇನ್ನೂ ರಾಜ್ಯ ಹಾಗೂ ಜಿಲ್ಲಾ, ತಾಲೂಕು ಪದಾಧಿಕಾರಿಗಳೂ ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!