ಉಪ್ಪಾರ ಸಮುದಾಯದ ಬೃಹತ್ ಪ್ರತಿಭಟನೆಗೆ ಕರೆ ನೀಡಿದ : ಜಿ.ಹೆಚ್.ಹನುಮಂತಪ್ಪ

ಚಳ್ಳಕೆರೆ : ಉಪ್ಪಾರ ಸಮುದಾಯದಿಂದ ನಾಳೆ ನಡೆಯುವ ಬೃಹತ್ ಪ್ರತಿಭಟನೆಗೆ ಪರಮ ಪೂಜ್ಯ ಗುರುಗಳಾದ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿಗಳ ಸಾರತ್ಯದಲ್ಲಿ ಬೃಹತ್ ಪ್ರತಿಭಟನೆಗೆ ತಾಲ್ಲೂಕು ಸಮುದಾದ ಬಾಂಧವರು ಪಾಲ್ಗೊಳ್ಳುವಂತೆ ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಜಿ.ಹೆಚ್.ಹನುಮಂತಪ್ಪ ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ಉಪ್ಪಾರ ಸಂಘದ ಜಿಲ್ಲಾ ಉಪಾದ್ಯಕ್ಷ ಎಲ್‌ಐಸಿ ರಂಗಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ ತಾಲೂಕಿನ ಸಮಸ್ತ ಕುಲಭಾಂಧವರು ಪಾಲ್ಗೊಳ್ಳಬೇಕು, ಅದರಂತೆ ಉಪ್ಪಾರ ಯುವಕ ಸಂಘ, ತಾಲ್ಲೂಕು ಉಪ್ಪಾರ ನೌಕರರ ಸಂಘ, ತಾಲ್ಲೂಕು ಉಪ್ಪಾರ ಯುವಕ ಸಂಘ ಹಾಗೂ ಉಪ್ಪಾರ ಸಮುದಾಯದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಾಳೆ ನಡೆಯುವ ಬೆಳಗ್ಗೆ 11 ಗಂಟೆಗೆ ಪ್ರವಾಸಿ ಮಂದಿರದಿAದ ಬೃಹತ್ ಪ್ರತಿಭಟನೆ ಮೆರವಣಿಗೆ ಮೂಲಕ ತೆರಳಿ ನೆಹರು ವೃತ್ತದಲ್ಲಿ ಮಾನವ ಸರಪಳಿ ಮಾಡಿ ನಂತರ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಉಪ್ಪಾರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.
ಇದೇ ಸಂಧರ್ಭದಲ್ಲಿ ಬೊಮ್ಮಸಮುದ್ರದ ಪಿ.ಚಂದ್ರಣ್ಣ ಹಾಜರಿದ್ದರು.

About The Author

Namma Challakere Local News
error: Content is protected !!