ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಜಾಥಕ್ಕೆ ಚಾಲನೆ ನೀಡಿದ : ತಹಶೀಲ್ದಾರ್ ಎನ್.ರಘುಮೂರ್ತಿ, ತಾಪಂ ಇಒ ಹೊನ್ನಯ್ಯ
ಚಳ್ಳಕೆರೆ : ಸ್ವೀಪ್ ಸಮಿತಿ, ಕಂದಾಯ ಇಲಾಕೆ, ಚುನಾವಣೆ ಶಾಖೆ, ಹಾಗೂ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಮ್ಮಿಕೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಕಾರ್ಯಕ್ರಮ ಜಾಗೃತಿ ಜಾಥದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಭಾಗವಹಿಸಿ ಮಾತನಾಡಿದರು. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲನೆ ಮಾಡಿ ಕೊಳ್ಳುವ ಜನರು 18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾರ ಪಟ್ಟಿಗೆ ಹೆಸರು ನೊಂದಾಯಿಸಿಕೊಳ್ಳುವAತೆ ಕರೆ ನೀಡಿದರು.
ಇನ್ನೂ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಇಒ ಹೊನ್ನಯ್ಯ ಮಾತನಾಡಿ, ತಾಲೂಕಿನ ನಲವತ್ತು ಗ್ರಾಪಂ ವ್ಯಾಪ್ತಿಯಲ್ಲಿ ಚುನಾವಣೆ ಮತದಾರರ ಪರಿಷ್ಕರಣೆ ಕಾರ್ಯಕ್ರಮ ಹಾಗೂ ನ್ಯಾಯಾಂಗ ಇಲಾಖೆಯಿಂದ ಕಾನೂನು ಅರಿವು ಕಾರ್ಯಕಮ ಹಮ್ಮಿಕೊಳ್ಳುವ ಜಾಗೃತಿ ಮೂಡಿಸಿದರು.
ಇದೇ ಸಂಧರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಜಿ.ಟಿ.ವೀರಭದ್ರ ನಾಯಕ ಮಾತನಾಡಿ, ಮೂಲಕ ಚುನಾವಣೆ ಸಂದರ್ಬದಲ್ಲಿ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಕೈಬಿಟ್ಟಿದ್ದರೆ ಬೇರೆ ಮತಗಟ್ಟೆ ಸೇರಿದ್ದರೆ ಮತದಾನ ದಿಂದ ವಂಚಿತನಾಗಿದ್ದೇನೆ ಎಂದು ದೂರು ಮಾಡುವ ಬದಲು ನಿಮ್ಮ ಹೆಸರು ಮರದಾರರ ಪಟ್ಟಿಯಲ್ಲಿ ಇದೆಯೇ ಎಂದು ಖಾತ್ರಿ ಪಡಿಸಿಕೊಂಡು ಈಗಲೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು.
ಇನ್ನೂ ಕ್ಷೇತ್ರದ ಶೀಕ್ಷಣಾಧಿಕಾರಿ ಕೆ.ಎಸ್.ಸುರೇಶ್, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿದರು
ನಗರದ ವಾಲ್ಮೀಕಿ ವೃತ್ತದಿಂದ ಪ್ರಾರಂಭವಾದ ಜಾಗೃತಿ ಜಾಥ ಸುಮಾರು ಮೂರು ಸಾವಿರ ವಿದ್ಯಾರ್ಥಿಗಳೋಂದಿಗೆ ಕಲಾ ತಂಡಗಳ ಮೂಲಕ ಘೊಷಣೆಗಳನ್ನು ಕೂಗತ್ತ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಛೇರಿಗೆ ದಾವಿಸಿ ಜಾಗೃತಿಯ ಹರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ. ಬಿಇಒ ಸುರೇಶ್. ನರೇಗಾ ಸಹಾಯಕ ನಿರ್ದೇಶಕ ಸಂಪತ್ .ಸಂತೋಷ್‌ಕುಮಾರ್, ಚುನಾವಣೆ ಶಾಖೆಯ ಶಿರಸ್ತೆಸಾರ್ ಶಕುಂತಲಾ, ಸೆೆÃರಿದಂತೆ ವಿವಿಧ ಶಾಲೆಯ ಮುಖ್ಯಶಿಕ್ಷರು. ಕಂದಾಯ ಇಲಾಖೆ ಸಿಬಂದಿ ಶಾಲಾ ಮಕ್ಕಳು ಜಾಗೃತಿ ಜಾಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.