ಚಳ್ಳಕೆರೆ : ಉಪಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಪಾಲಮ್ಮ

ಚಳ್ಳಕೆರೆ : ತಾಲೂಕಿನ ನಾಯಕನಹಟ್ಟಿ ಹೋಬಳಿಯ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎನ್ ಉಪ್ಪಾರಹಟ್ಟಿಯ ಗ್ರಾಮದ ಸದಸ್ಯೆ ಉಮಾದೇವಿ ಇತ್ತೀಚಿಗೆ ಮೃತಪಟ್ಟ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಮತದಾನ ಜರುಗಿತು.
ತೆರವಾಗಿದ್ದ ಗ್ರಾಮ ಪಂಚಾಯತಿ ಸ್ಥಾನಕ್ಕೆ ನಡೆದ ಚುನಾವಣೆಗೆ ಪಾಲಮ್ಮ ಪೂರ್ಣ ಓಬಯ್ಯ ಮತ್ತು ಜಿ.ಆರ್.ಪವಿತ್ರ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಚುನಾವಣಾ ಕಣದಲ್ಲಿದ್ದರು.
ಗ್ರಾಮದಲ್ಲಿ ಒಟ್ಟು 758 ಮತದಾರರಿದ್ದು, ಈ ಪೈಕಿ 671 ಮತದಾರರು ತಮ್ಮ ಮತ ಚಲಾಯಿಸಿದರು.
ಅ.31ರಂದು ಫಲಿತಾಂಶ ಹೊರ ಬೀಳುತ್ತಿದ್ದಂತೆ ನಾಮಪತ್ರ ಸಲ್ಲಿಸಿದ ಜಿಆರ್.ಪವಿತ್ರ ರವರು 307 ಮತಗಳನ್ನು ಪಡೆದಿದ್ದಾರೆ ಇನ್ನು ಪಾಲಮ್ಮ ಪೂರ್ಣ ಓಬಯ್ಯ 354 ಮತಗಳ ಪಡೆದು 47 ಮತಗಳ ಅಂತರದಿAದ ಜಯಗಳಿಸಿದ್ದಾರೆ.
ಒಟ್ಟು ಹತ್ತು ಮತಗಳು ತಿರಸ್ಕೃತಗೊಂಡು, ಫಲಿತಾಂಶ ಹೊರ ಬೀಳುತ್ತಿದ್ದಂತೆ ನಲಗೇತನಹಟ್ಟಿ ಹಾಗೂ ಎನ್ ಉಪ್ಪಾರಹಟ್ಟಿ ಗ್ರಾಮಸ್ಥರು ಚಳ್ಳಕೆರೆಗೆ ಆಗಮಿಸಿ ಜಯಗಳಿಸಿದ ಪಾಲಮ್ಮ ಪೂರ್ಣಓಬಯ್ಯನವರಿಗೆ ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ
ಇನ್ನು ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಮೊದಲಿಗೆ ಒಳಮಠ ಮತ್ತು ಹೊರಮಠಗಳಲ್ಲಿ ವಿಶೇಷ ಪೂಜ್ಯ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಲಗೇತನಹಟ್ಟಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಉಪ್ಪಾರಟ್ಟಿ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮಸ್ಥರು ಮುಖಂಡರು ಅಭಿಮಾನಿಗಳು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!