ಚಳ್ಳಕೆರೆ ಶಾಸಕರ ಭವನದಲ್ಲಿ : ಇಂದಿರಾ ಗಾಂಧಿ, ಪುಣ್ಯ ಸ್ಮರಣೆ
ಚಳ್ಳಕೆರೆ : ಶ್ರೀಮತಿ ಇಂದಿರಾ ಗಾಂಧಿ ಅವರು ಸ್ವಾತಂತ್ರ‍್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿ, ಅಸಹಕಾರ ಚಳುವಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಹಕಾರ ನೀಡಲು 1930ರಲ್ಲಿ ಅವರು ‘ಬಾಲ ಚರಕ ಸಂಘ’ವನ್ನು ಮತ್ತು ಮಕ್ಕಳ ‘ವಾನರ ಸೇನೆ’ಯನ್ನು ಸ್ಥಾಪಿಸಿದ್ದರು ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ ಹೇಳಿದ್ದಾರೆ.
ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಇಂದಿರಾ ಗಾಂಧಿ ಪುಣ್ಯ ಸ್ಮರಣೆಯಲ್ಲಿ ಭಾವಚಿತ್ರಕ್ಕೆ ಪುರ್ಷ್ಪಾಚನೆ ಮಾಡುವುದರ ಮೂಲಕ ಮಾತನಾಡಿದರು. ಮಹಾತ್ಮಾ ಗಾಂಧಿ ಅವರ ನೇತೃತ್ವದಲ್ಲಿ ಇಂದಿರಾ ಅವರು ದೆಹಲಿಯ ಕೋಮುಗಲಭೆ ಪೀಡಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಿದ್ದು, ಪ್ರಜಾಪ್ರಭುತ್ವದ ದೊಡ್ಡ ರಾಷ್ಟç ಭಾರತದಲ್ಲಿ ಮೊದಲ ಮಹಿಳಾ ಪ್ರಧಾನಿಯಾಗಿ ಮೂರು ಅವಧಿಗೆ ಅಧಿಕಾರ ನಡೆಸಿದ ಇಂದಿರಾಗಾAಧಿಗೆ ಸಲ್ಲುತ್ತದೆ ಎಂದರು.
ಇನ್ನೂ ಮಾಜಿ ಜಿಪಂ.ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ ಮಾತನಾಡಿ, ಮೈಸೂರಿಗೆ ಕರ್ನಾಟಕ ಎಂದು ನಾಮಕರಣ ಮಾಡಿದ್ದು ಕಾಂಗ್ರೇಸ್‌ನ ಡಿ.ದೇವರಾಜ್ ಅರಸು ಕನ್ನಡ ರಾಜ್ರೋತ್ಸವನ್ನು ನಾವುಗಳ ಹೆಚ್ಚು ವಿಜೃಂಭಣಿಯಿAದ ಆಚರಸಿಬೇಕು, ಬಡವರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದ ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದನ್ನು ಇಂದಿನ ಯುವ ಪೀಳಿಗೆಗೆ ಸ್ಮರಿಸಬೇಕು ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ನಗರಸಭಾ ಉಪಾಧ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್, ಸದಸ್ಯ ರಾಘವೇಂದ್ರ, ಬಿಟಿ.ರವೇಶ್, ಪರುಶುರಾಂಪುರ ಬ್ಲಾಕ್ ಅಧ್ಯಕ್ಷ ಕಿರಣ್ ಶಂಕರ್, ಖಾದರ್, ಪಾಪಣ್ಣ, ಸೈಪುಲ್ಲಾ, ಜೈತುನ್ ಬಿ, ಗೀತಾಬಾಯಿ, ಕೃಷ್ಣಾಮೂರ್ತಿ, ಹಳೆ ನಗರದ ವೀರಭದ್ರ, ಹಾಗೂ ಶಾಸಕರ ಭವನದ ಸಿಬ್ಬಂದಿ ಭೀಮಪ್ಪ, ಆಪ್ತ ಸಲಹೆಗಾರ ಗುರುಸ್ವಾಮಿ, ಶಾಸಕರ ಆಪ್ತರಕ್ಷಕ ಪ್ರೇಮ್‌ಕುಮಾರ್ ಇತರರು ಪಾಲ್ಗೊಂಡಿದ್ದರು.
ಇದೇ ಸಂಧರ್ಭದಲ್ಲಿ ಸೇವಾದಳದ ತಾಲೂಕು ಅಧ್ಯಕ್ಷ ರಾಮಾಂಜನೇಯ ಅಕಾಲಿಕ ಮರಣಕ್ಕೆ ಒಂದು ನಿಮಿಷಗಳ ಕಾಲ ಮೌನ ಆಚರಣೆ ಮಾಡಿ ನಂತರ ಸಂತಪ ಸೂಚಿಸಿದರು.