ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ
ಎಲ್.ಸೋಮಣ್ಣ ಸ್ಪರ್ಧೆ
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಎಲ್.ಸೋಮಣ್ಣ ತಮ್ಮ ಹಿಂಗಿತವನ್ನು ವ್ಯಕ್ತಪಡಿಸಿದ್ದಾರೆ.
ನಾಯಕನಹಟ್ಟಿ ಪಟ್ಟಣದ ಹೊರಮಠದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು
ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಇನ್ನೂ ಯಾವ ಪಕ್ಷದಿಂದ ಎಂಬ ಸುಳಿವು ನೀಡದೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸ್ಥಳೀಯ ಮುಖಂಡರಿಗೆ ಕಾರ್ಯಕರ್ತರಿಗೆ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ನಲಗೇತನಹಟ್ಟಿ ಹಿರಿಯ ಮುಖಂಡ ಪಿಎಂ.ಪೂರ್ಣಓಬಯ್ಯ, ಡಿಬಿ.ಕರಿಬಸಪ್ಪಚೌಳಕೆರೆ, ವಸಂತ್ ಕುಮಾರ್, ಬೋಸೆದೇವರಹಟ್ಟಿ, ಮಲ್ಲೂರಹಳ್ಳಿ ತಿಪ್ಪೇಸ್ವಾಮಿ, ಪಿ ಸುರೇಂದ್ರ ಕೂರಡಿಹಳ್ಳಿ ,ಡಿ ಪಿ ಪಾಲಯ್ಯ ರಾಯಪುರ, ಧನಂಜಯ ಜಾಗನೂರಹಟ್ಟಿ, ಸಣ್ಣಕಾಮಯ್ಯ ಚಿನ್ನಮಲ್ಲಯ್ಯ ಬಲ್ಲನಾಯಕನಹಟ್ಟಿ, ಮಹೇಶ್ ಅಬ್ಬೇನಹಳ್ಳಿ, ಗುರು ಶಂಕರ್ ಗೌರಿಪುರ, ಉಪಸ್ಥಿತರಿದ್ದರು