ಶ್ರೀ ದುರ್ಗಾಂಬಿಕಾ ದೇವಿ ಗಂಗಾ ಪೂಜೆಗೆ ಹಿರೆಕೆರೆ ಸಾಕ್ಷಿ
ಶ್ರೀ ಗುರು ತಿಪ್ಪೇರುದ್ರಸ್ವಾಮಿ ನಿರ್ಮಿಸಿದಂತ ಹಿರೇಕೆರೆಗೆ ಪ್ರಥಮ ಬಾರಿಗೆ ಶ್ರೀ ದುರ್ಗಾಂಬಿಕಾ ದೇವಿ ಗಂಗೆ ಪೂಜೆಗೆ ಹೌದು ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ನೇರಲಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಟವ್ವನಹಳ್ಳಿ ಮತ್ತು ದಾಸರ ಗಿಡ್ಡಯ್ಯನಹಟ್ಟಿ ಎರಡು ಊರಿನ ಗ್ರಾಮಸ್ಥರ ಅಪ್ಪಣೆ ಮೇರೆಗೆ ಶ್ರೀ ದುರ್ಗಾಂಬಿಕ ದೇವಿಯ ಗಂಗೆ ಪೂಜೆಗೆ ಕರೆತರಲಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ವೀರಣ್ಣ ಹೇಳಿದ್ದಾರೆ.
ಶ್ರೀ ಗುರು ತಿಪ್ಪೇರುದ್ರಸ್ವಾಮಿ ನಿರ್ಮಿಸಿದಂತ ಹಿರೇಕೆರೆಯ ಕೆರೆ ಅಂಗಳದಲ್ಲಿ ಕಾಟವ್ವನಹಳ್ಳಿ ಮತ್ತು ದಾಸರಗಿಡ್ಡಾಯ್ಯನಹಟ್ಟಿ ಗ್ರಾಮದೇವತೆ ಶ್ರೀ ಶ್ರೀ ದುರ್ಗಾಂಬಿಕಾ ದೇವಿ ಗಂಗೆ ಪೂಜೆ ನೆರವೇರಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.
ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹಿರೆಕೆರೆಗೆ ಶ್ರೀ ದುರ್ಗಾಂಬಿಕ ದೇವಿ ಗಂಗೆ ಪೂಜೆಗೆ ಕರೆತ್ತಿರುವುದು ಸಂತಸ ತಂದಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ವೀರಣ್ಣ ತಿಳಿಸಿದ್ದಾರೆ.
ಈ ವೇಳೆ ಗ್ರಾಮದ ಮುಖಂಡ ಬೋರಯ್ಯ ಮಾತನಾಡಿ ಕಾಟವ್ಬನಹಳ್ಳಿ ಮತ್ತು ದಾಸರ ಗಿಡ್ಡಯ್ಯನಹಟ್ಟಿ ಎರಡು ಗ್ರಾಮಗಳಲ್ಲಿ ಶಾಂತಿ ಮತ್ತು ನೆಮ್ಮದಿ ಗ್ರಾಮದಲ್ಲಿ ನೆಲೆಸಿರುವಂತೆ, ಯಾವುದೇ ರೋಗಗಳು ಬಾರದಂತೆ ಶ್ರೀ ದುರ್ಗಾಂಬಿಕ ದೇವಿಯು ಗ್ರಾಮಕ್ಕೆ ಶಾಂತಿ ನೆಮ್ಮದಿಯನ್ನು ಕರುಣಿಸಲಿ ಎಂದು ಗಂಗೆ ಪೂಜೆಗೆ ಕರೆತರಲಾಗಿದೆ ಎಂದು ತಿಳಿಸಿದ್ದಾರೆ.
ನಂತರ ಶ್ರೀ ಅನ್ನಪೂರ್ಣೇಶ್ವರಿ ಡಾಬಾ ಮಾಲೀಕರಾದ ಡಿ ಸುರೇಶ್ ನಾಯಕ ಮಾತನಾಡಿ ನಮ್ಮ ಊರಿನ ಆರಾಧ್ಯ ದೇವತೆ ದುರ್ಗಾಂಬಿಕ ದೇವಿ ಗಂಗೆ ಪೂಜೆಗೆ ಕರೆ ತಂದಿರುವುದು ಸಂತಸ ತಂದಿದೆ
ನಾಯಕನಹಟ್ಟಿ ಹಿರೆಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಶ್ರೀ ದುರ್ಗಾಂಬಿಕ ದೇವಿ ಗಂಗೆಪೂಜೆ ನೆರವೇರಿಸಿರುವುದು ದಾಸರಗಿಡ್ಡಾಯ್ಯನಹಟ್ಟಿ ಗ್ರಾಮಸ್ಥರು ಹಬ್ಬದ ವಾತಾವರಣದಲ್ಲಿ ಸಂಭ್ರಮ ಸಡಗರದಿಂದ ಗಂಗೆ ಪೂಜೆಗೆ ಆಗಮಿಸಿದ್ದಾರೆ ಇನ್ನೂ ಭಕ್ತರಿಗೆ ಅನ್ನದಾಸೋಹವನ್ನು ಶ್ರೀ ಅನ್ನಪೂರ್ಣೇಶ್ವರಿ ಫ್ಯಾಮಿಲಿ ಡಾಬಾ ವತಿಯಿಂದ ಏರ್ಪಡಿಸಲಾಗಿದೆ ಎಂದು ಡಿ.ಸುರೇಶ್ ನಾಯಕ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗೌಡ್ರು ಪಾಲಯ್ಯ ಮಾತನಾಡಿದ್ದರು. ಗ್ರಾಮ ಪಂಚಾಯಿತಿ ಸದಸ್ಯೆ ಎಂ.ಸುಷ್ಮಾಸುರೇಶ್ ನಾಯಕ, ಕಾಟವ್ವನಹಳ್ಳಿ ಮತ್ತು ದಾಸರಗಿಡ್ಡಾಯ್ಯನಟ್ಟಿ ಎರಡು ಊರಿನ ಗ್ರಾಮಸ್ಥರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು