ಶ್ರೀಗುರು ತಿಪ್ಪೆಪರುದ್ರಸ್ವಾಮಿ ಸನ್ನಿಧಿಯಲ್ಲಿ ಗೋ-ಪೂಜೆ

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ದೀಪವಾಳಿ ಅಂಗವಾಗಿ ಹಮ್ಮಿಕೊಂಡಿದ್ದ ಗೋಪೂಜೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಭಾಗವಹಿಸಿ ಗೋವುಗಳಿಗೆ ಬೆಲ್ಲ ಅಕ್ಕಿ ತಿನಿಸಿ ಗೋವುಗಳಿಗೆ ಪೂಜೆ ಸಲ್ಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು.

ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನಿಗೂ ಗೋವುಗಳಿಗೂ ಅವಿನಾಭಾವ ಸಂಬAಧ ಆ ಗೋವು ನಾವು ಪಶುವಾಗಿ ಕಾಣಬಹುದು ಆದರೆ ಗೋವಿನಲ್ಲಿ ಮುಕ್ಕೋಟಿ ದೇವತೆಗಳು ಇದ್ದಾರೆ ಎಂಬುವುದು ಪುರಾಣಗಳಲ್ಲಿ ಉಲ್ಲೇಖವಿದೆ ದ್ವಾಪರ ಯುಗದಲ್ಲಿ ಶ್ರೀಕೃಷ್ಣರು ಗೋವುಗಳಿಗೆ ಪೂಜೆ ಮಾಡಲು ಹೇಳುತ್ತಾನೆ ಗೋವುಗಳನ್ನು ಪೂಜಿಸಿದರೆ ಪುಣ್ಯ ಪ್ರಾಪ್ತವಾಗುತ್ತೆ ಎಂದು ಶ್ರೀ ಕೃಷ್ಣನು ಇಂದ್ರನಿಗೆ ಹೇಳುತ್ತಾನೆ
ಆದರೆ ಇಂದ್ರ ಗೋವುಗಳನ್ನು ಪರ್ವತ ಪ್ರವಾಹದಂತೆ ಗೋವುಗಳನ್ನು ಬಿಡುತ್ತಾರೆ ಆದ್ದರಿಂದ ಹಲವಾರು ಜನರಿಗೆ ತೊಂದರೆಯಾಗುತ್ತದೆ ಆಗ ಶ್ರೀ ಕೃಷ್ಣನು ಕಿರು ಬೆರಳಲ್ಲಿ ಏಳು ದಿನಗಳ ಕಾಲ ಗೋವರ್ಧನಗಿರಿಯ ಎತ್ತಿ ಹಿಡಿಯುತ್ತಾನೆ ಎಂಟನೇ ದಿನಕ್ಕೆ ಇಂದ್ರ ಬಂದು ಶ್ರೀಕೃಷ್ಣನ ಹತ್ತಿರ ಕ್ಷಮೆ ಯಾಚಿಸುತ್ತಾನೆ ಎಂಬುವುದು ಪುರಾಣಗಳಲ್ಲಿ ಕೇಳಿದ್ದೇವೆ.

ಆದ್ದರಿಂದ ಗೋವುಗಳನ್ನು ಹೆಚ್ಚಾಗಿ ಪೂಜಿಸುವಂತೆ ಆಗಬೇಕು ಗೋವಿನಿಂದ ಬರುವ ಹಾಲು ತುಪ್ಪ ಮೊಸರು ಬೆಣ್ಣೆ ಗೋ ಮಂತ್ರ ಇವುಗಳು ಮನುಷ್ಯನಿಗೆ ಅತ್ಯಂತ ಅವಶ್ಯಕ ಎಂದು ತಹಸಿಲ್ದಾರ್ ಎನ್ ರಘುಮೂರ್ತಿ ತಿಳಿಸಿದ್ದಾರೆ.

ಈ ವೇಳೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕಾರ್ಯನಿರ್ವಾಣಧಿಕಾರಿ ಹೆಚ್ ಗಂಗಾಧರಪ್ಪ ಮಾತನಾಡಿ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಬಲಿಪಾಡ್ಯಮಿ ಗೋಧೂಳಿ ಲಗ್ನದಲ್ಲಿ ಸಂಜೆ 5:30 ರಿಂದ 6:30 ಗೋಪೂಜೆ ನೆರವೇರಿಸಲು ಜಿಲ್ಲಾಡಳಿತ ಆದೇಶವನ್ನು ನೀಡಿದೆ ಅದರಿಂದ ನಮ್ಮ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಧಾರ್ಮಿಕವಾಗಿ ಗೋಪೂಜೆ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ ಗೋವುಗಳು ಎಂದರೆ ಕಾಮಧೇನು ಇದ್ದಂತೆ ಆದ್ದರಿಂದ ಪ್ರತಿಯೊಬ್ಬರೂ ಗೋವುಗಳನ್ನು ಸಾಕಬೇಕು ನಮಗೆ ಯಾರಿಗಾದರೂ ಅಪವಿತ್ರವಾದರೆ ಅಥವಾ ಅಸೂಚಿ ಆದರೆ ಗೋ ಮಂತ್ರವನ್ನು ಹಾಕಿಕೊಳ್ಳುತ್ತೇವೆ ಮನುಷ್ಯ ಗೋವುಗಳ ಜೊತೆ ಜೀವಿಸಬೇಕು ಗೋಗಳನ್ನ ಸಂರಕ್ಷಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಕಾರ್ಯನಿರ್ವಣಧಿಕಾರಿ ಎಚ್ ಗಂಗಾಧರಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಎಂವೈಟಿ ಸ್ವಾಮಿ, ವಾಣಿಜ್ಯ ಉದ್ಯಮಿ ರುದ್ರಮುನಿಯಪ್ಪ ಚಳ್ಳಕೆರೆ, ಚಳ್ಳಕೆರೆ ಪ್ರಭುಸ್ವಾಮಿ, ಅರ್ಚಕರಾದ ಶಿವಲಿಂಗ ಮೂರ್ತಿ ,ರವಿ, ದೇವಸ್ಥಾನ ಸಿಬ್ಬಂದಿಗಳಾದ ಸತೀಶ್, ಮನು, ಪ್ರಕಾಶ್ ಕಿನ್ನಾರಿ ಮಂಜುನಾಥ್, ಬಿ ಟಿ ರುದ್ರೇಶ್, ಮಹದೇವ, ಎನ್ ಟಿ ತಿಪ್ಪೇಸ್ವಾಮಿ, ಶಿವರಾಜ್, ಶಿವಣ್ಣ, ತಿಪ್ಪಮ್ಮ, ಸೇರಿದಂತೆ ಉಪಸ್ಥಿತರಿದ್ದರು

About The Author

Namma Challakere Local News
error: Content is protected !!