ಅಕ್ರಮ ಒತ್ತುವರಿದಾರರಿಗೆ ಎಡೆಮುರೆ ಕಟ್ಟುತ್ತಿರುವ ಕಂದಾಯ ಇಲಾಖೆ
ಚಳ್ಳಕೆರೆ : ತಾಲೂಕಿನಾದ್ಯಾಂತ ಅಕ್ರಮ ಒತ್ತುವಾರಿದಾರರಿಗೆ ಎಡೆಮುರಿ ಕಟ್ಟುತ್ತಿರುವ ಕಂದಾಯ ಇಲಾಕೆ ಪ್ರತಿ ನಿತ್ಯವೂ ಒಂದಿಲ್ಲೊAದು ವಿಷಯದಲ್ಲಿ ಮಹತ್ತರ ಸಾಧನೆ ಮಾಡುತ್ತಿದೆ.
ತಾಲೂಕಿನಲ್ಲಿ ಸುಮಾರು 120 ದಾರಿ ಸಮಸ್ಯೆಗಳಿಗೆ ತಿಲಾಂಜಲಿ ಹಾಡಿದ ಚಳ್ಳಕೆರೆ ಕಂದಾಯ ಇಲಾಖೆ ತುರ್ತ ಕಾರ್ಯಚರಣೆ ಮೂಲಕ ಈಡೀ ತಾಲೂಕಿನಲ್ಲಿ ಅಕ್ರಮ ಒತ್ತುವರಿದಾರರಿಗೆ ಎಚ್ಚರಿಕೆಯ ಗಂಟೆಯಾಗಿ ಕಾರ್ಯ ನಿರ್ವವಾಹಿಸುತ್ತಿದೆ.
ಅದರಂತೆ ಇಂದು ತಾಲೂಕಿನ ಕುರುಡಿಹಳ್ಳಿ ಗ್ರಾಮದ ಸರ್ವೆ ನಂಬರ್ 118 ರಲ್ಲಿ ಗೋಮಾಳದ ಜಮೀನನ್ನು ಅಕ್ರಮವಾಗಿ ಬೇಲಿ ಹಾಕಿಕೊಂಡು ಸಾರ್ವಜನಿಕರ ರಸ್ತೆಗೆ ಅಡ್ಡಿಪಡಿಸುತ್ತಿದ್ದ ಖಾಸಗಿ ವ್ಯಕ್ತಿಯ ಸ್ಥಳ ಪರಿಶೀಲನೆ ನಡೆಸಿ ಒತ್ತುವಾರಿ ದಾರರಿಂದ ಅಕ್ರಮ ಭೂಮಿಯನ್ನು ತೆರವು ಮಾಡಿದ್ದಾರೆ
ಈ ಕುರಿತು ತಹಶೀಲ್ದಾರ್ ಎನ್.ರಘುಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ ಸಾರ್ವಜನಿಕರ ಸೇವೆಗೆ ತಾಲೂಕು ಆಡಳಿತ ಸನ್ನದಾಗಿದೆ, ಅಕ್ರಮ ದಾರರು ಕುರುಡಿಹಳ್ಳಿ ಗ್ರಾಮದ ಸಾರ್ವಜನಿಕರಿಗೆ ಓಡಾಡಲು ಅಡ್ಡಿ ಮಾಡಿದ್ದು ರಸ್ತೆ ಬಿಡಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಈ ಕುರಿತು, ಜಿಲ್ಲಾಧಿಕಾರಿಗಳ ಸೂಚನೆಯಂತೆ ಇಂದು ಅಕ್ರಮವಾಗಿ ಕಂಡ ಬಂದ ಜಾಗವನನು ತೆರವುಗೊಳಿಸಿದೆ, ಸರ್ಕಾರಿ ಸ್ವಾಮ್ಯದ ಗೋಮಾಳ ಕೆರೆ ಕಾಲುದಾರಿ ಸ್ಮಶಾನ ಮುಂತಾದವುಗಳನ್ನು ಅತಿಕ್ರಮಿಸಿಕೊಳ್ಳದೆಂದು ಸಾರ್ವಜನಿಕರಿಗೆ ಮನವಿ ಮಾಡಿದರು
ಭೂ ಕಬಳಿಕೆ ಆರೋಪದಡಿ ಮುಂದಿನ ದಿನಗಳಲ್ಲಿ ಇಂಥ ಒತ್ತುವರಿದಾರರಿಗೆ ಬಿಸಿ ಮುಟ್ಟಿಸಿ ಸರ್ಕಾರಿ ಸ್ವಾಮ್ಯದ ಒಂದಿAಚು ಭೂಮಿಯನ್ನು ಬಿಡದೆ ವಶಪಡಿಸಿ ಕೊಳ್ಳುವುದಾಗಿ ಹೊತ್ತುವರಿದಾರರನ್ನು ಎಚ್ಚರಿಸಿದರು
ಇದೇ ಸಂದರ್ಭದಲ್ಲಿ ರಾಜ್ವಸ್ವ ನಿರೀಕ್ಷಕÀ ಲಿಂಗೇಗೌಡ, ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್, ಮತ್ತು ಸರ್ವೇ ಪ್ರಸನ್ನ ಕುಮಾರ್, ಇತರರು ಉಪಸ್ಥಿತರಿದ್ದರು