ಮೂಲಭೂತ ಸೌಲಭ್ಯಗಳಿಂದ ವಂಚಿತವಾದ
ಕುದಾಪುರ ಲಂಬಾಣಿ ಹಟ್ಟಿ,
ಬಿ.ಓಬಣ್ಣ ಆರೋಪ
ಚಳ್ಳಕೆರೆ : ನಾಯಕನಹಟ್ಟಿ ಸಮೀಪದ ಎನ್ ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿ ಹಳ್ಳಿಗಳಾದ ಕುದಾಪುರ, ಮನಮೈನಹಟ್ಟಿ, ಕುದಾಪುರಲಂಬಾಣಿಹಟ್ಟಿ ಸೇರಿದಂತೆ ಹಲವು ಗ್ರಾಮಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ,
ಚರAಡಿ ವ್ಯವಸ್ಥೆ, ಕುಡಿಯುವ ನೀರು, ಸಿಸಿ ರಸ್ತೆ ಇವುಗಳಿಂದ ಈಗೇ ಅವಶ್ಯವಾದ ಸೌಲಭ್ಯ ಇಲ್ಲದೆ ಕುದಾಪುರ ಗ್ರಾಮ ವಂಚಿತವಾಗಿದೆ ಎಂದು ಬಿ ಓಬಣ್ಣ ಆರೋಪ ಮಾಡಿದ್ದಾರೆ.

ಕುದಾಪುರ ಗ್ರಾಮದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು
ತಮ್ಮ ಮನೆಯ ಮುಂದೆ ಪಾಚಿ ಕಟ್ಟಿರುವ ನೀರಿನಿಂದ ಮನೆಯಲ್ಲಿ ಮೂರ್ನಾಲ್ಕು ಜನ ಡೆಂಗ್ಯೂ ಕಾಯಿಲೆಯಿಂದ ದಿನಲೂ ಆಸ್ಪತ್ರೆಗೆ ಹೋಗುತ್ತಿದ್ದೆವೆ, ಆದರೆ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಒಂದು ದಿನವಾದರೂ ಗ್ರಾಮಕ್ಕೆ ಭೇಟಿ ನೀಡಿದೆ ನಿರ್ಲ್ಯಕ್ಷö್ಯ ವಹಿಸಿದ್ದಾರೆ,
ಇನ್ನೂ ಗ್ರಾಮ ಪಂಚಾಯತಿಯಲ್ಲಿ ಅನುದಾನವಿಲ್ಲವೆಂದು ಸಬೂಬು ಹೇಳುತ್ತಿದ್ದಾರೆ. ಸರ್ಕಾರ ಕುಡಿಯುವ ನೀರಿಗಾಗಿ, ಗ್ರಾಮದ ಸ್ವಚ್ಛತೆಗಾಗಿ ಪಂಚಾಯತಿಯಲ್ಲಿ ಸಾಕಷ್ಟು ಹಣವನ್ನು ನೀಡಿದೆ,
ಆದರೆ ಗ್ರಾಮಗಳ ಅಭಿವೃದ್ಧಿ ಮಾಡುವಂತಹ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕನಿಷ್ಠ ಜ್ಞಾನವಿಲ್ಲದ ರೀತಿಯಲ್ಲಿ ಮಾತನಾಡುತ್ತಿದ್ದಾರೆ

ಇನ್ನೂ ಗ್ರಾಮದಲ್ಲಿ ಕುಡಿಯುವ ನೀರಿನಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಗ್ರಾಮದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ ಅದರಿಂದ ತಾಲೂಕು ಪಂಚಾಯತಿ ಅಧಿಕಾರಿಗಳು ಇತ್ತ ಕಡೆ ಗಮನ ಆರಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಬಿ.ಓಬಣ್ಣ ರವರು ಮನವಿ ಮಾಡಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಇನ್ನೂ ಗ್ರಾಮದಲ್ಲಿ ಆರೋಗ್ಯ ಇಲಾಖೆಯವರು ಬೇಜವಾಬ್ದಾರಿತನದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೆ ಸ್ಥಳೀಯ ಆಶಾ ಕಾರ್ಯಕರ್ತೆಯರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಬಿ ಓಬಣ್ಣ ಆರೋಪ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಜಿಸಿ.ಶ್ರೀನಿವಾಸ್ ಕೆಜಿ .ಪ್ರಕಾಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

Namma Challakere Local News
error: Content is protected !!