ವಿದ್ಯಾರ್ಥಿನಿಗೆ-ಶಿಕ್ಷಕನಿಂದ ಹತ್ಯಚಾರ, ಕೊಲೆ : ಸಾಮಾಜಿಕ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
ಚಳ್ಳಕೆರೆ : ಮಂಡ್ಯ ಜಿಲ್ಲೆಯ ಮಳವಳ್ಳಿ ನಗರದಲ್ಲಿ ದಿವ್ಯ ಎಂಬಾ ಬಾಲಕಿಯ ಮೇಲೆ ಹತ್ಯಚಾರ ಎಸಗಿ ಕೊಲೆ ಮಾಡಿರುವುದು ವಿಷಾಧನೀಯ ಸಂಗತಿ, ಆರೋಪಿಯನ್ನು ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಾಮಾಜಿಕ ಸಂಘರ್ಷ ಸಮಿತಿ ಅಧ್ಯಕ್ಷ ಉಮೇಶ್ ಚಂದ್ರ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ತಾಲೂಕು ಕಚೇರಿ ಮುಂದೆ ದಿಕ್ಕಾರ ಕೂಗುತ್ತಾ ಶಿರಸ್ತೆದಾರ್ ಸದಾಶಿವಪ್ಪಗೆ ಮನವಿ ನೀಡಿ ಆಕ್ರೊಶ ವಕ್ತಪಡಿಸಿದರು. ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಹತ್ಯಚಾರಗಳು ನಡೆಯುತ್ತಿವೆ, ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರಕಾರ ಇಂತವರನ್ನು ಗಲ್ಲು ಶಿಕ್ಷೆಗೆ ಶಿಪರಾಸ್ಸು ಮಾಡಬೇಕು ಮತ್ತೆ ಇಂತಹ ಘಟನೆಗಳು ಮರುಕಳಿಸಬಾರದು ಎಂದರು.
ಇನ್ನೂ ಮೈತ್ರಿ ದ್ಯಾಮಣ್ಣ ಮಾತನಾಡಿ, ಇಂತಹ ಘಟನೆಗಳು ಮತ್ತೆ ಮತ್ತೆ ರಾಜ್ಯದಲ್ಲಿ ಮರುಕಳಿಸದಂತೆ ಸರಕಾರಗಳು ಕಠಿಣವಾದ ನಿಲುವು ತಾಳಬೇಕು, ಇನ್ನೂ ಕಾನೂನು ಸುವ್ಯವಸ್ಥೆಯನ್ನು ಭದ್ರಗೊಳಿಸಬೇಕು, ಹತ್ಯಚಾರ ಎಸಗಿ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಈ ಘಟನೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ಕರಿಬಸವೇಶ್ವರ, ಬಾಲು, ಹನುಮಂತ, ವಿರೇಶ್, ಇತರರು ಪ್ರತಿಭಟನೆಯಲ್ಲಿ ಇದ್ದರು.