ಚಳ್ಳಕೆರೆ : ಬೆಳೆ ಪರಿಹಾರಕ್ಕಾಗಿ ರಸ್ತೆ ತಡೆದು ಪ್ರತಿಭಟನೆ
ಚಳ್ಳಕೆರೆ : ಬೆಳೆಗಳು ಅತಿವೃಷ್ಠಿ-ಅನಾವೃಷ್ಠಿಗೆ ಸಿಲುಕಿ ಬೆಳೆ ನಷ್ಟದಿಂದ ಸಾಲದ ಸುಳಿಗೆ ಸಿಲುಕಿದ ಬೆನ್ನಲ್ಲೇ ಈ ಬಾರಿಯೂ ಕೂಡ ಬೆಳೆನಷ್ಟ ಪರಿಹಾರ ಘೊಷಣೆ ಮಾಡಬೇಕು ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಸೋಮುಗುದ್ದು ರಂಗಸ್ವಾಮಿ ರಸ್ತೆ ತಡೆದು ಪ್ರತಿಭಟನೆ ಮಾಡಿದರು.
ನಗರದ ನೆಹರು ವೃತ್ತದಲ್ಲಿ ವಿವಿಧ ಬೇಡಿಕೆಗಳು ಈಡೇರಿಸುವಂತೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪಾದಾಧಿಕಾರಿಗಳು ಆಮ್ಮಿಕೊಂಡ ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕಿನಾದ್ಯಂತ ಭಾರಿ ಮಳೆಯಾದ ಹಿನ್ನಲೆ ಶೇಂಗಾ ಬೆಳೆ ಹಾಗು ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಅವೈಜ್ಷಾನಿಕ ಬೆಳೆವಿಮೆಯಿಂದಾಗಿ ರೈತರು ಬೆಳೆ ವಿಮೆ ಕಟ್ಟಿದ್ದರೂ ಬೆಳೆ ನಷ್ಟವಾಗಿದ್ದು ಬೆಳೆವಿಮೆ ಬೆಳೆ ನಷ್ಟ ಪರಿಹಾರ ನೀಡಲು ಸರಕಾರ ಹಾಗೂ ಬೆಳೆವಿಮೆ ಕಂಪನಿಗಳು ಮೀನಾಮೇಷ ಎಣಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಕಳೆದ ನಾಲ್ಕೆöÊದು ವರ್ಷಗಳಿಂದ ರೈತರು ಬಿತ್ತನೆ ಮಾಡಿದ ಬೆಳೆಗೆ ಬೆಳೆವಿಮೆ ಹಣವನ್ನು ರೈತರ ಖಾತೆಗಳಿಗೆ ಜಮಾಮಾಡಬೇಕು ಎಂದು ಒತ್ತಾಯ ಮಾಡಿದರು.
ತಾಲೂಕು ಅಧ್ಯಕ್ಷ ಹೆಚ್.ಗಿರೀಶ್ ಮಾತನಾಡಿ, ರೈತರು ಕೃಷಿ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಕೆ ಹಾಗು ವಿದ್ಯುತ್ ಖಾಸಗೀಕರಣ ತೀರ್ಮಾನವನ್ನು ಕೂಡಲೇ ರದ್ದುಪಡಿಸಬೇಕು, ರೈತರು ಕೃಷಿ ಪತ್ತಿನ ಸಹಕಾರ ನಿಯಮಿತದಲ್ಲಿ ಪಡೆದ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ವೆಂಕಟರಮಣಪ್ಪ, ತಾಲ್ಲೂಕು ಕಾರ್ಯಾಧ್ಯಕ್ಷ ಹನುಮಂತಪ್ಪ, ರೈತ ಮುಖಂಡರಾದ ಖಾದರ್‌ಬಾಷ್, ಪರಮೇಶ್ವರಪ್ಪ, ನವೀನ್ ಕುಮಾರ್, ಶಾಂತಣ್ಣ, ರುದ್ರಪ್ಪರೆಡ್ಡಿ, ಗಿರೀಶ್‌ರೆಡ್ಡಿ, ಶೇಷಾದ್ರಿ ಇತರರಿದ್ದರು.
ರಸ್ತೆ ತಡೆಗೆ ವಾಹನ ಸಾವರಾರ ಪರದಾಟ :
ನಗರದ ನೆಹರು ವೃತ್ತದಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ಮಾಡುವುದರಿಂದ ದೂರದ ಊರುಗಳಿಗೆ ಪ್ರಯಾಣಿಸಬೇಕಾದ ಬೆಂಗಳೂರು, ಚಿತ್ರದುರ್ಗ, ಪಾವಗಡ, ಹಾಗೂ ಬಳ್ಳಾರಿ ಮಾರ್ಗದ ಎಲ್ಲಾ ರಸ್ತೆಗಳಲ್ಲಿ ಸುಮಾರು ಒಂದು ಕೀ.ಮೀ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತುದ್ದವು ಇದರಿಂದ ವಾಹನ ಸವಾರರಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ನಲ್ಲಿ ಸಿಲುಕುವಂತಾಗಿತ್ತು.
ಪೋಟೋ ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ವಿವಿಧ ಬೇಡಿಕೆಗಳು ಈಡೇರಿಸುವಂತೆ ಅಖಂಡ ಕರ್ನಾಟಕ ರಾಜ್ಯ ರೈತಸಂಘದಿAದ ರಸ್ತೆ ತಡೆದು ಪ್ರತಿಭಟನೆ ಮಾಡಿದರು ಸಂಘದ