ಶ್ರೀರಾಮಾಯಣ ಮಹಾಕಾವ್ಯ ಮನುಷ್ಯನ ಬದುಕಿನ ದಾರಿದೀಪ : ತಹಶಿಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ ತಾಲೂಕಿನ ಗಾಜ್ಜುಗಾನಹಳ್ಳಿ ಗ್ರಾಮದಲ್ಲಿ ನಾಯಕ ಸಮುದಾಯದಿಂದ ಆಮ್ಮಿಕೊಂಡ ಶ್ರಿ ವಾಲ್ಮೀಕಿ ಜಯಂತೋತ್ಸವದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಶ್ರೀ ರಾಮಾಯಣ ಮಹಾ ಕಾವ್ಯದಲ್ಲಿ ಅತ್ಯುನ್ನತವಾದಂತ ಮಾನವೀಯ ಪ್ರೀತಿ, ದ್ವೇಷ ಮತ್ತು ವರ್ಗರಹಿತ ಸಮಾನತೆ ಸುಖಿ ಸಮಾಜದ ಕನಸುಗಳನ್ನು ಬಿತ್ತಿದ್ದಾರೆ, ಸುಮಾರು 24,000 ಶ್ಲೋಕಗಳಲ್ಲೂ ಕೂಡ ಇದನ್ನೇ ಪ್ರತಿಪಾದಿಸಿದ್ದಾರೆ,
ಮನರಂಜನೆಯ ಜೊತೆ ಮಾನವೀಯ ಮೌಲ್ಯಗಳು ಪ್ರತಿ ಪಾತ್ರದಲ್ಲೂ ಜೋಡಣೆಯಾಗಿದೆ ಗ್ರೀಕ್ ಮಹಾಕಾವ್ಯ ಬಿಟ್ಟರೆ ಈ ವಾಲ್ಮೀಕಿ ಮಹರ್ಷಿಗಳ ಶ್ರೀ ರಾಮಾಯಣ ಕಾವ್ಯದಲ್ಲಿ ಬದುಕಿನ ಮಾನವೀಯ ಸಂಬAಧಗಳ ಬಗ್ಗೆ ಪ್ರತಿಯೊಂದು ಹಂತದಲ್ಲೂ ಜೀವ ತುಂಬಿದ್ದಾರೆ ಎಂದರು.
ನಮ್ಮ ದೇಶಕ್ಕೆ ಇಂಥದೊAದು ಮಹಾ ಕಾವ್ಯ ದೊರೆತದ್ದು ಪ್ರಪಂಚಕ್ಕೆ ಭಾರತೀಯರ ಕೊಡುಗೆಯನ್ನು ನೀಡಿದಂತಾಗಿದೆ. ಈ ಕಾವ್ಯದಲ್ಲಿ ಬರುವಂತಹ ಶ್ರೀರಾಮಚಂದ್ರ ಮೂರ್ತಿಯ ಪರಿಪೂರ್ಣತೆ ಏಕ ಪತ್ನಿ ವ್ರತ ಸೀತೆಯ ಪತಿವ್ರತೆ ರಾವಣನ ಭಕ್ತಿ ಭರತನ ಬಾತೃತ್ವ ಇವೆಲ್ಲವೂ ಕೂಡ ಇಂದಿನ ಬದುಕಿಗೆ ಮಾನವೀಯ ಮೌಲ್ಯಗಳಿಗೆ ಶಾಂತಿ ಮತ್ತು ಪರಮ ಸಹಿಷ್ಣತೆಗೆ ದಾರಿದೀಪಗಳಾಗಿವೆ ಇಂತಹ ಕಾವ್ಯದಲ್ಲಿ ಬರುವಂತಹ ಅಂಶಗಳನ್ನು ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಪಾಲಿಸುವುದು ಅಗತ್ಯವಾಗಿದೆ.
ಪ್ರತಿಯನ್ನು ಪ್ರತಿಯೊಂದು ಕುಟುಂಬದ ಹೆಣ್ಣು ಮಕ್ಕಳು ಕೂಡ ಕುಟುಂಬದ ಮಕ್ಕಳಿಗೆ ರಾಮಾಯಣ ಮಹಾಕಾವ್ಯದ ಬಗ್ಗೆ ಅರಿವು ಮೂಡಿಸಬೇಕು ಮೂಲಕ ಕುಟುಂಬದ ಪ್ರತಿಯೊಂದು ಮಗುವನ್ನು ಕೂಡ ಶಿಕ್ಷಣ ಕೊಡಿಸುವ ಮೂಲಕ ಸ್ವಾಭಿಮಾನಿಗಳಾಗಿ ಮತ್ತು ಸ್ವಾವಲಂಬಿಗಳಾಗಲು ಪ್ರೇರೇಪಿಸುವಂತೆ ಸಂಕಲ್ಪ ಮಾಡಬೇಕೆಂದು ಮನವಿ ಮಾಡಿದರು
ಇದೇ ಸಂದರ್ಭದಲ್ಲಿ ತಿಮ್ಮಪ್ಪನಹಳ್ಳಿ ಗ್ರಾಮ ಪಂಚಾಯಿತಿ ಅದ್ಯಕ್ಷ ಕೆಎಎಸ್.ಮಂಜಣ್ಣ, ಸದಸ್ಯ ತಿಪ್ಪೇಸ್ವಾಮಿ, ಪಾಲಮ್ಮ.ಜಿ ಬೋರೆಯ, ಭೋಜರಾಜು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಯಣ್ಣ ಉಪಸ್ಥಿತರಿದ್ದರು