ಚಳ್ಳಕೆರೆ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ನಿಗಧಿಯಾದ ಅನುದಾನವನ್ನು ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸದ್ಬಳಕೆಮಾಡಿಕೊಂದು ಗ್ರಾಮಗಳ ಅಭಿವೃದ್ಧಿಗೆ ಬದ್ದರಾಗಬೇಕು ಎಂದು ತಾಪಂ.ಕಾರ್ಯನಿರ್ವಾಹಕ ಅಧಿಕಾರಿ ಜೆ.ಕೆ.ಹೊನ್ನಯ್ಯ ಹೇಳಿದ್ದಾರೆ.
ಅವರು ನಗರದ ತಾಲೂಕು ಪಂಚಾಯತ್ ಕಛೇರಿಯಲ್ಲಿ ಆಯೋಜಿಸಿದ್ದ ಎಸ್ ಸಿಪಿ, ಟಿಎಸ್ಪಿ ಯೋಜನೆ ಅನುದಾನ ಕುರಿತ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಗ್ರಾಮಗಳ ಅಭಿವೃದ್ಧಿಗೆ ಅಧಿಕಾರಿಗಳು ಸೂಕ್ತವಾದ ರೀತಿಯಲ್ಲಿ ನಿಗಧಿಯಾದ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕು ಅದೇರೀತಿ ಯಾವ ಇಲಾಖೆಗಳು ಸಭೆಗೆ ಗೈರಾಗಿದ್ದಾರೆ ಇವರಿಗೆ ಶಿಸ್ತು ಕ್ರಮಕ್ಕೆ ಸಿಇಓ ರವರಿಗೆ ಶಿಪರಾಸ್ಸು ಮಾಡಲಾಗುವುದು ಎಂದರು.
ಇನ್ನೂ ಸಹಯಾಕ ಕೃಷಿ ನಿರ್ದೇಶಕ ಜೆ.ಅಶೋಕ್ ಮಾತನಾಡಿ ಗುಚ್ಚಗ್ರಾಮಗಳ ಮೂಲಕ ನಿಗಧಿಯಾದ ಅನುದಾನ 1.50 ಲಕ್ಷ ಅನುದಾನವನ್ನು ತಾಡಬಲ್ ವಿತರಣೆ ಮಾಡಲಾಗಿದೆ ಪ್ರಸ್ತುತ ವರ್ಷದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು
ಸಭೆಯಲ್ಲಿ ಎಡ್ಲ್ಯೂ ಕಾವ್ಯ ಮಾತನಾಡಿ, ಈಗಾಗಲೇ ನಮಗೆ ನಿಗಧಿಯಾದ ಅನುದಾನ ಬಳಕೆಯಾಗಿದೆ, ಇನ್ನೂ ಗ್ರಾಮಗಳಲ್ಲಿ ಚರಂಡಿ, ರಸ್ತೆ ಹಾಗೂ ವಿದ್ಯಾರ್ಥಿಗಳಿಗೆ ಅವಶ್ಯವಾದ ಹಲವು ಸಮಸ್ಯೆಗಳು ಇವೆ ಆದರೆ ಕೇವಲ ಹೈ ಮಾಸ್ಕ್ ನಿಗಧಿ ಪಡಿಸಿದರೆ ಗ್ರಾಮದ ಅಭಿವೃದ್ಧಿ ಮುಗಿತು ಎನ್ನುವುದು ಬೇಡ, ಮೂಲ ಭೂತ ಸೌಲಭ್ಯ ನೀಡುವ ಮೂಲಕ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಇನ್ನೂ ಭದ್ರಾಮೆಲ್ದೆಡೆ ಇಲಾಖೆ ಸಭೆಯ ಮಾಹಿತಿ ಕೈ ಬಿಟ್ಟಿರುವುದು ಸರಿಯಲ್ಲ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಇಓ ಸೂಚನೆ ನೀಡಿದರು.
ಇನ್ನೂ ಈ ಮಹತ್ವದ ಸಭೆಗೆ ಆರೋಗ್ಯ ಇಲಾಖೆ, ಮೀನುಗಾರಿಕೆ ಇಲಾಕೆ, ಸಾರಿಗೆ ಇಲಾಖೆ, ಅಂಬೇಡ್ಕರ್ ನಿಗಮ, ಕೈಗಾರಿಕಾ ಇಲಾಖೆ, ಗೈರಾಗಿರುವುದು ಕಂಡು ಬಂದಿತು.
ಈದೇ ಸಂಧರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್, ಮ್ಯಾನೇಜರ್ ದಯಾನಂದ, ಸಿ.ಚಂದ್ರಪ್ಪ, ಕೃಷಿ ಅಧಿಕಾರಿ ಜೆ.ಅಶೋಕ್, ರೇಷ್ಮೆ ಇಲಾಖೆ ಅಧಿಕಾರಿ ಕೆಂಚಾಜಿರಾವೋ, ಎಇಇ ಕಾವ್ಯ, ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.