ಚಳ್ಳಕೆರೆ : ಸಮಾಜದಲ್ಲಿ ಸ್ವಾರ್ಥಕೊಸ್ಕರ ಬದುಕುವವರನ್ನು ಸಮಾಜ ಶಾಶ್ವತವಾಗಿ ಮರೆತು ಹೋಗುತ್ತದೆ, ಆದರೆ ಸಮಾಜಕ್ಕೋಸ್ಕರ ಬದುಕುವವರನ್ನು ಅವರು ಸತ್ತ ಮೇಲು ಆರಾಧಿಸುತ್ತಾರೆ, ಶಾಶ್ವತವಾಗಿ ಬದುಕಿರುತ್ತಾರೆ ಎಂದು ತಹಶೀಲ್ದಾರ್ ಎನ್ .ರಘುಮೂರ್ತಿ ಹೇಳಿದರು.

ಚಳ್ಳಕೆರೆ ನಗರದ ಹೆಗ್ಗೆರೆ ತಾಯಮ್ಮ ತಿಪ್ಪೇಸ್ವಾಮಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರಿನ ಮಾರುತಿ ಮೆಡಿಕಲ್ ಮಹೇಂದ್ರ ಮನೋತ್ ಜೈನ್ ಇವರು 1500 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿ ಮಾತನಾಡಿದ ಅವರು

ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಉದ್ಯಾಮಿಗಳಾಗುತ್ತಿರೋ, ಅಧಿಕಾರಿಗಳಾಗುತ್ತಿರೋ ಯಾರಿಗೆ ಗೊತ್ತಿಲ್ಲ, ಆದರೆ ಸಮಾಜ ಸೇವೆ ಮಾಡುವ ಮನೋಧರ್ಮ ಹೊಂದಬೇಕು,

ಯಾರು ಕೂಡ ಸನ್ಯಾಸಿಗಳು ಆಗಬೇಕಂತಲ್ಲ, ಸಂಸಾರಿಗಳಾಗಿಯೂ ಸಹ ಸಮಾಜವನ್ನು ಉದ್ಧಾರ ಮಾಡುವಂತಹ ಸಮಾಜಕ್ಕೋಸ್ಕರ ಬದುಕು ರೂಪಿಸಿಕೊಳ್ಳಬೇಕು,

ಸ್ಥಳೀಯ ಶಾಸಕರು ಕೂಡ
ಶೈಕ್ಷಣಿಕ ಗುಣಮಟ್ಟ ಶೈಕ್ಷಣಿಕ ಪ್ರಗತಿಗಾಗಿ ಶಾಲೆಗಳಿಗೆ ಬೇಕಾಗುವಂತಹ ಅನುಕೂಲಗಳನ್ನು ಒದಗಿಸಿದ್ದಾರೆ.

ಉತ್ತಮವಾದ ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದಾರೆ. ಅವರ ಅಭಿಲಾಷೆಯಂತೆ ಕಳೆದ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿತ್ತು.

ಇನ್ನು ಕ್ಷೇತ್ರದ ಶಿಕ್ಷಣಾಧಿಕಾರಿಗಳು ಸಹ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು ಅದರಂತೆ ಶಿಕ್ಷಕರು ಹಾಗೂ ಮಕ್ಕಳು ಸಹ ಬರುವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಇಡೀ ರಾಜ್ಯದಲ್ಲಿ ಮೊದಲ ಸ್ಥಾನ ಪಡೆಯಬೇಕು. ಶಿಕ್ಷಣದಲ್ಲಿ ಮಹತ್ವ ಹೆಜ್ಜೆ ಸಾಧಿಸಬೇಕು.

ನಾವು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹ ಇಂದಿನಿಂದ ಮುಂದಿನ ಫಲಿತಾಂಶಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಈಗಾಗಲೇ ಹಲವು ಶಾಲೆಗಳಿಗೆ ಭೇಟಿ ನೀಡಿ ಸ್ಮಾರ್ಟ್ ಕ್ಲಾಸ್ ಗೆ ವ್ಯವಸ್ಥೆ ಮಾಡಲಾಗಿದೆ.

ಈ ಶಾಲೆಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಲಾಗುವುದು ಅದರಂತೆ ಈ ಹಿಂಭಾಗದ ಕಾಂಪೌಂಡ್ ಮೂರು ಅಡಿ ಎತ್ತರ ಮಾಡಿಸಿಕೊಡಲಾಗುವುದು ಎಂದರು.

ಬಿ.ಇಓ.ಕೆ.ಎಸ್ ಸುರೇಶ್ ಮಾತನಾಡಿ, ನಮ್ಮ ತಾಲೂಕಿನ ಶೈಕ್ಷಣಿಕ ಪ್ರಗತಿ ಉತ್ತಮ ಮಟ್ಟಕ್ಕೆ ಕೊಂಡೊಯ್ಯಲು ಶಿಕ್ಷಕರ ಶ್ರಮ ಬಹಳ ಮುಖ್ಯವಾಗುತ್ತದೆ ಅದರಲ್ಲೂ ಈ ಹೆಗ್ಗೆರೆ ತಾಯಮ್ಮ ಸರ್ಕಾರಿ ಪ್ರೌಢಶಾಲೆ ತುಂಬಾ ಶಿಸ್ತಿನ ಶಾಲೆಯಾಗಿದ್ದು ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯ ಮೂಡುತ್ತಿದೆ

ಬರುವ ದಿನಗಳಲ್ಲಿಯೂ ಸಹ ಉತ್ತಮ ಫಲಿತಾಂಶಕ್ಕಾಗಿ ನಿರೀಕ್ಷೆ ಅದರಂತೆ ತಾಲೂಕಿನ ಎಲ್ಲಾ ಶಿಕ್ಷಕರು ಸಹ ಶ್ರಮ ಪಡಬೇಕಾಗುತ್ತದೆ ಶಿಕ್ಷಣಕ್ಕೆ ನಮ್ಮ ಶಾಸಕರು ಅತಿ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು ಅವರ ನಿರೀಕ್ಷೆಯಂತೆ ಬರುವ ದಿನಗಳಲ್ಲಿ ಅತ್ಯುತ್ತಮ ಫಲಿತಾಂಶವನ್ನು ನಾವು ಪಡೆಯಬೇಕಿದೆ ಎಂದರು.

ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ರೆಡ್ಡಿ, ಹೆಗ್ಗೆರೆ ತಾಯಮ್ಮ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಾಧವರಾವ್, ಶಿಕ್ಷಕ ರಾಜಣ್ಣ, ಸುರೇಶ್, ಪ್ರದೀಪ್, ಪ್ರಾಣೇಶ್ ಮಾತನಾಡಿದರು

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ನಾಗರಾಜ್, ಸುಜಾತ, ಜಮುನಾ, ಕುಸುಮತಿ, ವನಜಾಕ್ಷಿ, ರಾಜಮ್ಮ ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.

About The Author

Namma Challakere Local News
error: Content is protected !!