ಬೆಳೆ ಪರಿಹಾರಕ್ಕಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ಸರಕಾರಕ್ಕೆ ಒತ್ತಾಯ
ಚಳ್ಳಕೆರೆ ; ಸಕಾಲಕ್ಕೆ ಮಳೆಬಾರದೆ ಶೇಂಗಾ ಬಿತ್ತನೆಯಾಗದೆ ಶೇಂಗಾ ಬೆಳೆಯು ಇಳುವರಿಯಲ್ಲಿ ಕುಂಠಿತವಾಗಿ, ಶೇಂಗಾ ಬೆಳೆಯು ನಷ್ಟವಾಗಿದೆ. ರೈತರ ಶೇಂಗಾ ಬೆಳೆಗೆ ಪರಿಹಾರ ದೊರಕಿಸಕೊಡಬೇಕು ಎಂದು ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಸರಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ರೈತರ ಬೆಳೆ ಅಧ್ಯಾಯನ ಸಭೆಯಲ್ಲಿ ಮಾತನಾಡಿದರು.. ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದರೂ ರೈತನಿಗೆ ನೆರವಾಗಿಲ್ಲ, ನಿರಂತರವಾಗಿ ಸಂಕಷ್ಟಕ್ಕೆ ಸಿಲುಕಿತ್ತಿರುವ ರೈತರಿಗೆ ಎಂಎಸ್ವಿ ಜಾರಿಗೆ ಮಾಡಬೇಕು ಎಂದು ಹೇಳಿದರು…
ಇನ್ನೂ ಕೃಷಿ ತಾಂತ್ರಿಕ ಅಧಿಕಾರಿ ರವಿ ಮಾತನಾಡಿ ತಾಲ್ಲೂಕಿನಲ್ಲಿ 73 ಸಾವಿರ ಹೆಕ್ಟರ್ ಮಾತ್ರ ಶೇಂಗಾ ಬಿತ್ತನೆಯಾಗಿದೆ. ಎಲ್ಲಾ ಬೆಳೆಗಳು ಸೇರಿ 85 ಸಾವಿರ ಹೆಕ್ಟರ್ ಬಿತ್ತಯಾಗಿವೆ, ತಾಲೂಕಿನಲ್ಲಿ 484 ಮಿ.ಮೀ. ಮಳೆ ವಾಡಿಕೆಯಿಂದ 300 ಮಳೆ ಬರಬೇಕಿತ್ತು. ಆದರೆ 580 ಮಿ.ಮೀ.ಮಳೆ ಬಂದು ವಾಡಿಕೆಗಿಂತ ಹೆಚ್ಚಾಗಿ ಮಳೆ ಬಂದಿದೆ. ಆದರೆ ಜೂನ್, ಜುಲೈ ಮಾಹೆಯಲ್ಲಿ ಶೇಂಗಾ ಭಿತ್ತನೆ ಸಮಯದಲ್ಲಿ ಸಕಾಲಕ್ಕೆ ಮಳೆ ಬಾರದೆ ಇರುವುದರಿಂದ ಶೇಂಗಾ ಬಿತ್ತನೆಯಲ್ಲಿ ಕುಂಠಿತವಾಯಿತು ಎಂದು ಮಾಹಿತಿ ನೀಡಿದರು.
ಕೆರೆ, ಕಟ್ಟೆಗಳು ತುಂಬಿ ಜಮೀನುಗಳಲ್ಲಿ ನೀರು ಹರಿದು ಅತಿವೃಷ್ಠಿ ಉಂಟಾಗಿ 1700 ಹೆಕ್ಟರ್ ಪ್ರದೇಶದಲ್ಲಿ ಶೇಂಗಾ ಬೆಳೆ ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು, ತಾಲ್ಲೂಕಿನಲ್ಲಿ ಎಲ್ಲಾ ಬೆಳೆಗಳಿಗೆ 49,690 ಜನ ರೈತರು 6 ಕೋಟಿ 77 ಲಕ್ಷ ವಿಮೆ ಪಾವತಿ ಮಾಡಿದ್ದಾರೆ ಎಂದು ತಿಳಿಸಿದ ಅವರು ಬೆಳೆ ವಿಮೆ ಆಧಾರದ ಮೇಲೆ ಬೆಳೆ ನಷ್ಟ ವರದಿ ಆಧರಿಸಿ ಬೆಳೆ ವಿಮೆ ರೈತರಿಗೆ ದೊರಕಲಿದೆ ಎಂದು ತಿಳಿಸಿದರು..
ಶೇಂಗಾ ಬೆಳೆಗಳಿಗೆ ಎಲೆ ಚುಕ್ಕಿ ರೋಗ, ಬೆಂಕಿ ರೋಗ, ಬುಡ್ಸ್ ರೋಗಗಳು ಕಂಡು ಬಂದಿದ್ದು, ಇದಕ್ಕೆ ಕಾರಣ ಕಳೆನಾಶ ಸಿಂಪಡೆ ಮಾಡುವುದರಿಂದ ಕೆಲವು ರೋಗಗಳು ಕಂಡಬAದಿರಬಹುದು, ಹಿಂದೆ ಶೇಂಗಾ ಬೆಳೆಗಳಲ್ಲಿ ಬೆಳೆದ ಕಳೆಯನ್ನು ಎಡೆಕುಂಡೆ(ಬುಡೆಕುAಟೆ) ಹೊಡೆದು ನಾಶಪಡಿಸಿ, ಉಳಿದ ಕಳೆಯನ್ನು ಮಹಿಳೆಯರು ತೆಗೆದು ನಾಶಪಡಿಸುತ್ತಿದ್ದರು. ಆದರೆ ಆಧುನಿಕ ಕ್ರೀಮಿನಾಶಗಳ ಮೊರೆಹೋಗಿರುವುದರಿಂದ ಕೆಲವು ರೋಗಗಳು ಬರುತ್ತವೆ ಎಂದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ ತಾಲ್ಲೂಕಿನ ವಾಣಿಜ್ಯ ಬೆಳೆ ಈರುಳ್ಳಿ, ಈ ಬಾರಿ ಸಂಪೂರ್ಣ ವಾಗಿ ಕೊಳೆ ರೋಗಗಕ್ಕೆ ತುತ್ತಾಗಿ ರೈತರು ನಷ್ಟಕ್ಕೆ ತುತ್ತಾಗಿದ್ದಾರೆ ಎಂದರು, ರೈತರು ಆಧುನಿಕ ಕೃಷಿ ಚಟುವಟಿಕೆಗಳಿಗೆ ಮಾರುಹೋಗಿ, ಈರುಳ್ಳಿ ಬೆಳೆಗೆ ಕೊಟ್ಟಿಗೆ ಗೊಬ್ಬರ ಬಳಸದೆ, ರಾಸಾಯನಿಕ ಗೊಬ್ಬರಗಳು ಹಾಕುವುದರಿಂದ ಈರುಳ್ಳಿ ಬೆಳೆ ಗೆಡ್ಡೆಗೆ ಬಂದಾಗ ಕೊಳೆಯುವುದು ಜಾಸ್ತಿಯಾಗಿದೆ, ಈರುಳ್ಳಿ ಬೆಳೆ ಕಳೆ ಬಿದ್ದಾಗೆ ಕಳೆ ನಾಶ ಸಿಂಪಡೆ ಮಾಡದೆ, ಕಳೆಯನ್ನು ಕೈಯಿಂದ ಕೀಳಿಸಬೇಕು. ಇದರಿಂದ ಬೆಳೆ ರೋಗ ಬೀಳುವುದು ತಡೆಯಬಹುದು ಎಂದು ರೈತರಿಗೆ ಸಲಹೆ ನೀಡಿದರು…
ಈ ವೇಳೆ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಶ್ರೀಕಂಠಮೂರ್ತಿ, ಮಾಜಿ ಅಧ್ಯಕ್ಷ ಚನ್ನಕೇಶವ ಸೇರಿದಂತೆ ಮುಂತಾದ ರೈತ ಮುಖಂಡರು ಇದ್ದರು….