ಸಿಡಿಲು ಬಡಿದ ಮೃತ ಕುಟುಂಬಕ್ಕೆ 5ಲಕ್ಷದ ಪರಿಹಾರದ ಚೆಕ್ ವಿತರಿಸಿದ ಸಚಿವ ಶ್ರಿರಾಮುಲು

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಮಲ್ಲೂರಟ್ಟಿ ಗ್ರಾಮದ ಮಹಂತೇಶ್ ಎಂಬುವವರು ಕಳೆದ ಹಲವು ದಿನಗಳ ಹಿಂದೆ ಸಿಡಿಲು ಬಡಿತದಿಂದ ಮೃತಪಟ್ಟಿದ್ದರು.
ಇವರಿಗೆ ಸರಕಾರದಿಂದ ಸಿಗುವ ಪರಿಹಾರವನ್ನು ತಾಲೂಕು ಆಡಳಿತದಿಂದ ಇಂದು ಇವರ ಕುಟುಂಬದ ಶಂಕ್ರಮ್ಮ ಇವರಿಗೆ ಸಾರಿಗೆ ಮತ್ತು ಬುಡಕಟ್ಟು ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ರವರ ಮೂಲಕ 5ಲಕ್ಷ ರೂಗಳ ಚೆಕ್ಕನ್ನು ಇಂದು ವಿತರಣೆ ಮಾಡಿದರು
ಇದೇ ಸಂಧರ್ಭದಲ್ಲಿ ಸಂತ್ರಸ್ತರ ಮನೆಗೆ ತೆರಳಿದ ಸಚಿವರು, ವಿಧಾನ ಪರಿಷತ್ ಸದಸ್ಯ ನವೀನ್ ಮತ್ತು ತಹಸಿಲ್ದಾರ್ ಎನ್.ರಘುಮೂರ್ತಿ ಅವರೊಂದಿಗೆ ಭೇಟಿ ನೀಡಿ ಸಂತಸ್ಥರನ್ನು ಸಂತ್ವಾನಗೊಳಿಸಿ 5.ಲಕ್ಷ ರೂಗಳ ಚೆಕ್ ವಿತರಣೆ ಮಾಡಿ ಮುಂದಿನ ದಿನಗಳಲ್ಲಿ ಸರ್ಕಾರದಿಂದ ದೊರೆಯಬಹುದಾದ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಕೊಡಿಸುವುದಾಗಿ ಕುಟುಂಬದಲ್ಲಿನ ಮಕ್ಕಳಿಗೆ ಅಗತ್ಯ ವಿದ್ಯಾಭ್ಯಾಸದ ಕುರಿತಂತೆ ಮತ್ತು ನೆರವಿನ ಕುರಿತಂತೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಹಶೀಲ್ದಾರ್ ಎನ್.ರಘುಮೂರ್ತಿ ಅವರಿಗೆ ಸೂಚಿಸಿದರು

ಇದೇ ಸಂದರ್ಭದಲ್ಲಿ ವಕೀಲರಾದ ಅಶ್ವತ ನಾಯಕ, ಬಿಜೆಪಿ ಮಂಡಲ ಅಧ್ಯಕ್ಷ ರಾಮರೆಡ್ಡಿ, ಪಾಪೇಶ್‌ನಾಯಕ, ಪಟೇಲ್ ಎಸ್ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!