ದೇಶದ ರಕ್ಷಣೆ ಮತ್ತು ದೇಶ ಸುರಕ್ಷಿತವಾಗಿರಲು ಪ್ರಧಾನಿ ನರೇಂದ್ರ ಮೋದಿಜೀ ರವರು ಕಾರಣ ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಿ ಸದಸ್ಯ ಪಾಪೇಶ್ ನಾಯಕ ಅಭಿಪ್ರಾಯ
ಇಂದು ನಾಯಕನಹಟ್ಟಿ :: ದೇಶವನ್ನು ಅಭಿವೃದ್ಧಿಪಥಕೊಂಡಯಲು ಸರ್ವತೋಮುಖ ಅಭಿವೃದ್ಧಿಗಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ, ಪ್ರಧಾನಿ ಮಂತ್ರಿ ನರೇಂದ್ರ ಮೋದಿಜೀ ರವರು ಎಂದು ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಪಾಪೇಶ್ ನಾಯಕ ಹೇಳಿದ್ದಾರೆ .
ಅವರು ಪಟ್ಟಣದ
ಬಿಜೆಪಿ ಕಾರ್ಯಾಲಯದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ, ನಾಯಕನಹಟ್ಟಿ ದೊಡ್ಡಕೆರೆಯ ಬಾಗಿನ ಅರ್ಪಿಸುವ ಕಾರ್ಯಕ್ರಮ, ರಕ್ತದಾನ ಶಿಬಿರ ಅಂಗವಾಗಿ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ. ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ದೇಶದ ಒಳಿತಿಗಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ ಸ್ವಾತಂತ್ರ ಬಂದು 75 ವರ್ಷಗಳು ಕಳೆದರೂ ಅಭಿವೃದ್ಧಿ ಕಾಣದ ಈ ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಅಭಿವೃದ್ಧಿಪಥದಂತಹ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ ಸಾಕಷ್ಟು ಅಭಿವೃದ್ಧಿ ಯೋಜನೆಗಳಾದ *ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ಯ ಯೋಜನೆ *
ಪ್ರಧಾನ ಮಂತ್ರಿ ಆವಾಸ್ ಯೋಜನೆ*
ಆಯುಷ್ಮಾನ್ ಭಾರತ ಹೀಗೆ ಹಲವಾರು ಯೋಜನೆಗಳ ಮೂಲಕ ಕೋವಿಡ್ ಸಂದರ್ಭದಲ್ಲಿ ವಿಶ್ವದ ಅತ್ಯಂತ ದೊಡ್ಡ ಲಸಿಕೆ 190 ಕೋಟಿ ಅಧಿಕ ಡೋಸ್ತ್ ಲಸಿಕೆ ನೀಡಿ ಜನರ ಜೀವವನ್ನು ಉಳಿಸಿದ್ದಾರೆ ಇಂಥ ಮಹಾನ್ ನಾಯಕರ 72ನೇ ವರ್ಷದ ಹುಟ್ಟುಹಬ್ಬವನ್ನು ನಮ್ಮ ನಾಯಕನಹಟ್ಟಿ ಮಂಡಲದ ಎಲ್ಲಾ ಮೋರ್ಚಗಳ ವತಿಯಿಂದ ಪ್ರತಿದಿನವೂ ಸುಮಾರು ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ಪ್ರತಿದಿನವೂ ಮೋರ್ಚುಗಳ ವತಿಯಿಂದ ಸಮಾಜಮುಖಿ ಕಾರ್ಯ ಕಾರ್ಯಕ್ರಮಗಳ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಹುಟ್ಟು ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಬೇಕು. ಜನಸೇವೆಯೇ ಕ್ಷೇತ್ರದ ಸೇವೆ ಎನ್ನುವಂತೆ ನಮ್ಮ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಬಿ ಶ್ರೀರಾಮುಲು ರವರು ಸೆಪ್ಟೆಂಬರ್ 30ರಂದು ಪವಾಡ ಪುರುಷ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಕಟ್ಟಿಸಿದಂತ ದೊಡ್ಡ ಕೆರೆಗೆ ಬಾಗಿನ ಬಿಡಲಿದ್ದಾರೆ ಎಂದು ರಾಜ್ಯ ಕಾರ್ಯದರ್ಶಿ ಪಾಪೇಶ್ ನಾಯಕ ತಿಳಿಸಿದ್ದಾರೆ.
ಈ ವೇಳೆ ಮಂಡಲ ಅಧ್ಯಕ್ಷರಾದ ಈ ರಾಮರೆಡ್ಡಿ ರವರು ಮಾತನಾಡಿ 12 ವರ್ಷಗಳ ನಂತರ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸಚಿವ ಬಿ ಶ್ರೀರಾಮುಲು ರವರ ಅಮೃತ ಹಸ್ತದಿಂದ ಬಾಗಿನ ಅರ್ಪಿಸಲಿದ್ದಾರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನ ಬಲಪಡಿಸಲು ಪ್ರತಿಯೊಬ್ಬ ಮುಖಂಡರು ಕಾರ್ಯಕರ್ತರು ಮುಂದಾಗಬೇಕು ಎಂದು ಮಂಡಲ ಅಧ್ಯಕ್ಷರಾದ ಈ ರಾಮರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ
ಎಂ.ವ್ಯೆ.ಟಿ ಸ್ವಾಮಿ, ಹಿರಿಯ ಮುಖಂಡರು ಪಟೇಲ್ ಜಿ. ಎಂ. ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡರು, ಪಿ. ಶಿವಣ್ಣ, ದೇವರಾಜ್ ಎತ್ತಿನಹಟ್ಟಿ, ಚಂದ್ರಣ್ಣ, ಪರಮೇಶ್ವರಪ್ಪ, ಎನ್. ಮಹಾತೇಶ್, ಸಿ. ಬಿ. ಮೋಹನ್
ಬೆಂಕಿ ಗೋವಿಂದ, ಕೆ. ಟಿ. ಸ್ವಾಮಿ, ಎನ್.ದಿಲೀಪ್ ಕುಮಾರ, ವಿಷ್ಣು, ಪರ್ವತಯ್ಯ, ಬೋರೇಶ್, ನಿರಂಜನ್, ಪ್ರಕಾಶ್ ರೆಡ್ಡಿ, ನಾಗರಾಜ್, ಒಬಣ್ಣ, ಪುಟ್ಟಕ್ಕ, ಉಪಸ್ಥಿತರಿದ್ದರು.
ಎಲ್ಲಾ ಪದಾಧಿಕಾರಿಗಳು, ಎಲ್ಲಾ ಮೋರ್ಚಾದ ಅಧ್ಯಕ್ಷರು ಮತ್ತು
ಪ್ರಧಾನ ಕಾರ್ಯದರ್ಶಿ ಗಳು
ಪದಾಧಿಕಾರಿಗಳು, ಶಕ್ತಿಕೇಂದ್ರದ ಹಾಗೂ ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳು, ಎಲ್ಲಾ ಪ್ರಕೋಷ್ಟದ ಸಂಚಾಲಕರು ಹಾಗೂ ಸಹಸಂಚಾಲಕರುಗಳು, ಚುನಾಯಿತ ಮತ್ತು ಬೆಂಬಲಿತ ಜನ ಪ್ರತಿನಿಧಿಗಳು, ಹಿರಿಯ ಮುಖಂಡರುಗಳು, ಹಾಗೂ ಭಾರತೀಯ ಜನತಾ ಪಕ್ಷದ ಸಮಸ್ತ ಕಾರ್ಯಕರ್ತ ಬಂಧುಗಳು ಹಾಜರಿದ್ದರು.