ನಾಯಕನಹಟ್ಟಿ ದೊಡ್ಡಕೆರೆಗೆ ಬಾಗೀನ ಅರ್ಪಿಸಿದ : ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿ
ಚಳ್ಳಕೆರೆ : ಬುಡಕಟ್ಟು ಸಂಪ್ರದಾಯದAತೆ ಬೋಸೆದೇವರಹಟ್ಟಿಯ ಸುಮಾರು ಶೃಂಗಾರಗೊAಡ 20 ಎತ್ತಿನ ಬಂಡಿಗಳೊAದಿಗೆ ನಾಯಕನಹಟ್ಟಿ ಪಟ್ಟಣದ ಶ್ರೀ ಗುರುತಿಪ್ಪೇರುದ್ರಸ್ವಾಮಿ ಕಟ್ಟಿಸಿದ ಹಿರೆಕೆರೆಗೆ ಬಾಗೀನ ಸಮರ್ಪಣೆ
ಶ್ರೀಗುರು ತಿಪ್ಪೇರುದ್ರಸ್ವಾಮಿ ಅವರು ನಿರ್ಮಿಸಿರುವಂತ ಹಿರೇಕೆರೆಯು ಸುಮಾರು 12 ವರ್ಷಗಳ ನಂತರ ಭರ್ತಿಯಾಗಿ ಕೋಡಿ ಬಿದ್ದ ಹಿನ್ನಲೆಯಲ್ಲಿ ಈ ಕೆರೆಯು ಸುಮಾರು 2500 ಹೆಕ್ಟರ್ ಪ್ರದೇಶಕ್ಕೆ ನೀರುಣಿಸುವ ಸಾಮಾರ್ಥ್ಯವನ್ನು ಕೆರೆ ಹೊಂದಿದ್ದು, ಈ ಭಾರಿ ಕೆರೆ ಭರ್ತಿಯಾದ ಹಿನ್ನಲೆ ನಾಯಕನಹಟ್ಟಿ ಹೋಬಳಿ ರೈತರಲ್ಲಿ ಸಂತಸ ಮನೆ ಮಾಡಿದೆ.
ಮೊದಲು ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಪಟ್ಟಣದ ರಾಜಬೀದಿಗಳೊಂದಿಗೆ ಮೆರವಣಿಗೆ ಮೂಲಕ ಶ್ರೀಗುರು ತಿಪ್ಪೇರುದ್ರಸ್ವಾಮಿ ಕಟ್ಟಿಸಿರುವಂತಹ ದೊಡ್ಡಕೆರೆಗೆ ಬಾಗಿನ ಅರ್ಪಿಸಲು ನೀರಾವರಿ ಹೋರಾಟ ಸಮಿತಿ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಸಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
ಕಾಯಕಯೋಗಿ ಶ್ರೀಗುರು ತಿಪ್ಪೇರುದ್ರಸ್ವಾಮಿ ದೊಡ್ಡಕೆರೆ ಭರ್ತಿಯಾದ ಹಿನ್ನಲೆಯಲ್ಲಿ ಸ್ವಾಯಿಚೆಯಿಂದ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಕೆರೆಗೆ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹೋಬಳಿ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಮುದಿಯಪ್ಪ, ಗೌರವಾಧ್ಯಕ್ಷ ಟಿ.ಬಸಪ್ಪನಾಯಕ, ಕಾರ್ಯದರ್ಶಿ ಟಿ.ನಾಗೇಂದ್ರಪ್ಪ, ಎಚ್‌ಬಿ.ತಿಪ್ಪೇಸ್ವಾಮಿ, ಎಸ್‌ಟಿ.ಬೋರ್‌ಸ್ವಾಮಿ, ಉಪಾಧ್ಯಕ್ಷ ಬಿ.ಕಾಟಯ್ಯ ಮಲ್ಲೂರಹಳ್ಳಿ, ಮಹಾಂತೇಶ್, ಮನ್ಸೂರ್, ಚಂದ್ರಣ್ಣ, ಆರ್ ಬಸವರಾಜ್, ಸಂಘಟನಾ ಕಾರ್ಯದರ್ಶಿಗಳು ಆರ್ ಪಾಲಯ್ಯ, ಜೆಸಿಬಿ.ತಿಪ್ಪೇಸ್ವಾಮಿ, ತೊರೆಕೋಲಮ್ಮನಹಳ್ಳಿ ಮಂಜುನಾಥ್, ದಳವಾಯಿ ರುದ್ರಮನಿ ಕಾನೂನು ಸಲಹೆಗಾರ ಬಿ ಬೋಸಯ್ಯ ವಕೀಲರು. ಇದ್ದರು.
ಪಟ್ಟಣ ಪಂಚಾಯತಿ ಸದಸ್ಯರಾದ ಜೆಆರ್.ರವಿಕುಮಾರ್, ವೀರಕ್ಕ, ಬಂಗಾರಿ, ಸುನೀತಾ ಮುದಿಯಪ್ಪ, ಮಂಜುಳ ಶ್ರೀಕಾಂತ್, ಓಬಯ್ಯ ದಾಸ್, ಬೋಸಮ್ಮ, ಮಹೇಶ್ವರಿ, ಮಂಜುನಾಥ್, ನಲಗೇತನಹಟ್ಟಿ ಜಿ.ವೈ, ತಿಪ್ಪೇಸ್ವಾಮಿ, ಮುಖಂಡರಾದ ಬಿಟಿ.ತಿಪ್ಪೇಸ್ವಾಮಿ, ಪಿಓ.ತಿಪ್ಪೇಸ್ವಾಮಿ ಮೇಷ್ಟ್ರು, ಬೋರ್ವೆಲ್ಸ್ ಮಹಾಂತೇಶ್, ಎನ್ ದೇವರಹಳ್ಳಿ ಗಟ್ಟಿಪ್ಪನಾಯಕ, ರಾಜಣ್ಣ, ಕುಮಾರಸ್ವಾಮಿ ಬೋಸೆದೇವರಹಟ್ಟಿ, ಕಾಂಟ್ರಾಕ್ಟ್, ರುದ್ರಮುನಿ, ಎಸ್‌ಟಿ.ಬಸವರಾಜ್, ಶಂಕರ್ ಯಾದವ್, ಡಿಜಿ.ಗೋವಿಂದಪ್ಪ, ಮಹಬೂಬ್ ಎಸ್ ಆರ್ ಎಸ್ ಬಸ್ ಮಾಲೀಕರು ಸಮಸ್ತ ಹೋಬಳಿಯ ಮುಖಂಡರು ಮಹಿಳೆಯರು ಸೇರಿದಂತೆ ಭಾಗವಹಿಸಿದ್ದರು

About The Author

Namma Challakere Local News
error: Content is protected !!