ರಾಜಕಾಲುವೆ ಒತ್ತುವರಿ ತೆರವು ಕಾರ್ಯಕ್ಕೆ ಮುಂದಾದ ತಹಶೀಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ : ಜಲಮೂಲಗಳು ಮತ್ತು ಪ್ರಾಕೃತಿಕ ಸಂಪತ್ತನ್ನು ಅತಿಕ್ರಮಿಸಿ ಸಮಾಜದ ಅಪನಿಂದನೆಗೆ ಗುರಿಯಾಗುವುದು ಬೇಡ ಇವುಗಳನ್ನು ಸಂರಕ್ಷಿಸಿ ಇದರ ಮುಖಾಂತರ ದಾರಿದೀಪವಾಗಬೇಕೆಂದು ಒತ್ತುವರಿದಾರರಿಗೆ ತಹಶೀಲ್ದಾರ್ ಎನ್.ರಘುಮೂರ್ತಿ ಮನವಿ ಮಾಡಿದರು
ಅವರು ತಾಲೂಕಿನ ತೊರೆಕೋಲಮ್ಮನಹಳ್ಳಿ ಗ್ರಾಮದ ಸರ್ವೆ ನಂಬರ್ 52 ಮತ್ತು 54 ರಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿ ಇದರಿಂದ ಗ್ರಾಮದ ನೈರ್ಮಲ್ಯದ ನೀರು ಸರಾಗವಾಗಿ ಹರಿಯದೆ ಸುಮಾರು 10ವರ್ಷಗಳಿಂದ ಕೆಲಸ ಕುಂಠಿತವಾಗಿದ್ದು ಈ ವಿವಾದವನ್ನು ಬಗೆಹರಿಸುವಂತೆ ಹಲವಾರು ಬಾರಿ ತೊರೆ ಕೋಲಮ್ಮನಹಳ್ಳಿ ಚುನಾಯಿತ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ವಿವಿಧ ಇಲಾಖೆಗಳಿಗೆ ಮನವಿ ಮಾಡಿದರು
ಮುಂದಿನ 30 ವರ್ಷಗಳ ದೃಷ್ಟಿಕೋನದಲ್ಲಿ ಪ್ರತಿಯೊಂದು ಗ್ರಾಮಗಳಲ್ಲೂ ಕೂಡ ನೈಸರ್ಗಿಕವಾಗಿರುವಂತಹ ಜಲಮೂಲಗಳು ಕೆರೆಕಟ್ಟೆಗಳು ದಾರಿಗಳು ಕರಾಬು ಜಮೀನುಗಳು ಗೋಮಾಳುಗಳು ಮತ್ತು ರಾಜಕಾರಣಿಗಳನ್ನು ನಾವು ಅನಿವಾರ್ಯವಾಗಿ ಸಮರ್ಥಿಸಬೇಕಿದೆ ಪ್ರವಾಹ ಮುಂತಾದ ಸಮಯದಲ್ಲಿ ಬೆಂಗಳೂರೇ ನಮಗೆ ಉದಾಹರಣೆಯಾಗಿದೆ
ಮನುಷ್ಯ ಬದುಕುವುದಕ್ಕೆ ಇಂತಹ ದುಷ್ಕೃತ್ಯಗಳನ್ನು ಮಾಡುವುದು ಅವಶ್ಯಕತೆ ಇಲ್ಲ ಇಲ್ಲಿಯ ಜನರೆಲ್ಲರೂ ಕೂಡ ಸ್ವಾಭಿಮಾನಕ್ಕೆ ಹೆಸರಾದಂತವರು ಸ್ವಾವಲಂಬಿಗಳಾಗಿ ಬದುಕುತ್ತಿದ್ದೀರಾ ಮುಂದಿನ ದಿನಗಳಲ್ಲಿ ಯಾರೂ ಕೂಡ ಸರ್ಕಾರದ ಈ ಸ್ವತ್ತುಗಳನ್ನು ಅತಿಕ್ರಮಿಸ ಕೂಡವೆಂದು ಮನವಿ ಮಾಡಿ ತಕ್ಷಣ ಜೆಸಿಬಿಯನ್ನು ತರಿಸಿ ಕಾಮಗಾರಿಯನ್ನು ಪ್ರಾರಂಭಿಸಿದರು
ಈ ಸಂದರ್ಭದಲ್ಲಿ ಅಬ್ಬೇನಹಳ್ಳಿ ಪಂಚಾಯಿತಿ ಅಧ್ಯಕ್ಷ ಶಂಕರ್‌ಸ್ವಾಮಿ ಸದಸ್ಯ ತಿಪ್ಪೇಸ್ವಾಮಿ, ರಾಜಸ್ವ ನಿರೀಕ್ಷಕ ಚೇತನ್, ಗ್ರಾಮ ಲೆಕ್ಕಾಧಿಕಾರಿ ಜೈ ರಾಮ್, ಗ್ರಾಮದ ಪ್ರಮುಖರಾದ ಪಿತಾಂಬರ್ ಮುಂತಾದವರು ಉಪಸ್ಥಿತರಿದ್ದರು
ಪೋಟೋ ಚಳ್ಳಕೆರೆ ತಾಲೂಕಿನ ತೊರೆಕೋಲಮ್ಮನಹಳ್ಳಿ ಗ್ರಾಮದ ರಾಜಕಾಲುವೆಯನ್ನು ಒತ್ತುವರಿ ತೆರುವು ಕಾರ್ಯಕ್ಕೆ ಮುಂದಾದ ತಹಶೀಲ್ದಾರ್ ಎನ್.ರಘುಮೂರ್ತಿ