ಭಾರತ್ ಜೋಡೋ ಯಾತ್ರೆಗೆ ಚಳ್ಳಕೆರೆ ಕ್ಷೇತ್ರ ಸಜ್ಜು : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಈಡೀ ದೇಶದಲ್ಲಿ ಜನ ವಿರೋಧಿ ಆಡಳಿತದಿಂದ ದೇಶದ ಜನರು ಬೇಸತಿದ್ದಾರೆ. ಇನ್ನೂ ಯಾರಾರದೂ ಸಿಡಿದೆದ್ದರೆ ಅವರು ವಿರುದ್ಧ ಇಡಿ ಹಾಗೂ ಇತ್ಯಾದಿಗಳ ಮೂಲಕ ಅವರನ್ನು ಕಟ್ಟಿ ಹಾಕಲು ಪ್ರಯತ್ನ ಮಾಡುತ್ತಾರೆ, ಇಂತಹ ದುರಾಡಳಿತ ನಮ್ಮ ದೇಶದಲ್ಲಿ ಇರುವುದು ನಾವು ಸಾವಿನ ಮನೆಯಲ್ಲಿ ಇದ್ದೆವೆ ಎಂಬ ಭಾಸವಾಗುತ್ತದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಆಡಳಿತ ಸರಕಾರದ ವಿರುದ್ದ ಕಿಡಿ ಕಾರಿದ್ದಾರೆ.
ಅವರು ನಗರದ ಶಾಸಕರ ಭವನದಲ್ಲಿ ಕೆಪಿಸಿಸಿ ವರಿಷ್ಠರೊಂದಿಗೆ ಆಯೋಜಿಸಿದ್ದ ಭಾರತ್ ಜೋಡೋ ಯಾತ್ರೆಯ ಪೂರ್ವಭಾವಿ ಯಾತ್ರೆಯಲ್ಲಿ ಮಾತನಾಡಿದರು, ರಾಜ್ಯದಲ್ಲಿ ಆಡಳಿತಕ್ಕೆ ಸೋತು ಸಿಡಿದೆದ್ದರೆ ಅವರ ವಿರೋಧ ದೇಶ ವಿರೋಧಿ ಪಟ್ಟಕಟ್ಟಿ. ಇಡಿ ತನಿಖೆ ಮೂಲಕ ಕೈ ಕಟ್ಟಿಹಾಕುತ್ತಾರೆ, ರೈತರಿಗೆ ಮರಣ ಶಾಸನ ಮಾಡುತ್ತಾರೆ ಇದರಿಂದ ನೂರಾರು ರೈತರು ಪ್ರಾಣತೆತ್ತರು, ಅನಾಗರಿಕ ಪ್ರಧಾನಿ ಎಂದರೆ ಅದು ಮೋದಿ ಅವರು ಶ್ರಮಿಕವರ್ಗ ಈಡೀ ವಿಶ್ವದಲ್ಲೇ 8 ಗಂಟೆಗಳ ಕಾಲ ದುಡಿಮೆ ಇದೆ, ಆದರೆ ಬಂಡವಾಳ ಶಾಹಿ ಪರವಾಗಿ ಹೆಚ್ಚು ಸಮಯ ನಿಗಧಿ ಮಾಡುವ ಮರಣ ಶಾಸನ ರೂಪಿಸಿ ಹೆಚ್ಚುವರಿ ಕೆಲಸ ನಿಗಧಿ ಮಾಡಿದ್ದಾರೆ, ಯುವ ಜನತೆ ಮರಳಿ ಭಾರತಕ್ಕೆ ಬಂದಿದ್ದಾರೆ ಆದರೆ ಈಗ ಉದ್ಯೋಗ ಇಲ್ಲ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವ ಭರವಸೆ ಹೇಳಿ ಈಗ ಅವರದ ಗೋಜಿಗೆ ಹೋಗುವುದಿಲ್ಲ, ಅವರು ನೀಡಿದ ಎಲ್ಲಾ ಕ್ಷೇತ್ರಗಳು ವಿಫಲವಾಗಿದ್ದಾವೆ, ಆಡಳಿತದ ನೀತಿ ಎಂದರೆ ಧರ್ಮ ಒಡೆಯುವ ಮೂಲ ಮಂತ್ರ ಇವರ ಸಾಧನೆ ಎಂದು ಟಿಕಿಸಿದ್ದಾರೆ.
ರಾಹುಲ್ ಗಾಂಧಿ ದೇಶ ಕಟ್ಟಲು ಹೊರಟ ಪಾದಾಯಾತ್ರೆ ಪವಿತ್ರ ವಾದದ್ದು, ಈಡೀ ದೇಶದಲ್ಲಿ ಅತೀ ಉದ್ದವಾದ ಜನಪಯೋಗಿ ಪಾದಯಾತ್ರೆ ಕೈಗೊಂಡು ಮೋದಿ ಮಾಡಿದ ಅವೈಜ್ಞಾನಿಕ ಆದೇಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಾ ಪಾದಯಾತ್ರೆ ಮುಂದೆ ಸಾಗುತ್ತದೆ ಎಂದರು.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಈಡೀ ನಾಡೀನಾಧ್ಯಂತ ಸಂಚಲನ ಮೂಡಿಸಿದ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಸುಮಾರು 21 ದಿನಗಳ ಕಾಲ ವಿವಿಧ ಕ್ಷೇತ್ರಗಳಲ್ಲಿ ಪಾದಯಾತ್ರೆ ಹಾದು ಹೋಗುವ ಮೂಲಕ ಚಿತ್ರದುರ್ಗ ಜಿಲ್ಲೆಯಲ್ಲಿ 6 ದಿನಗಳ ಕಾಲ ಪಾದಯಾತ್ರೆ ಸಾಗುತ್ತದೆ, ಇದೇ ಸೆಪ್ಟೆಂಬರ್30ರಿAದ ಕರ್ನಾಟಕ ಪ್ರವೇಶಿಸಲಿರುವ ಭಾರತ್ ಜೋಡೋ ಐಕ್ಯತಾ ಯಾತ್ರೆ ಚಿತ್ರದುರ್ಗ ಜಿಲ್ಲೆಯೊಬದಲ್ಲಿ 6 ದಿನಗಳ ಕಾಲದ ಚಲಿಸಲಿದೆ, ಚಳ್ಳಕೆರೆ ಕ್ಷೇತ್ರದ ಮೂಲಕ ಹಾದು ಹೋಗಲಿರುವ ಭಾರತ ಐಕ್ಯತಾ ಯಾತ್ರೆಗೆ ಪೂರ್ವಭಾವಿ ತಯಾರಿ ನಡೆದಿದೆ ಎಂದರು.
ಈದೇ ಸಂಧರ್ಭದಲ್ಲಿ ವಿಧಾನ ಫರಿಷತ್ ನಾಯಕ ಬಿಕೆ.ಹರಿಪ್ರಸಾದ್, ಕಾರ್ಯಕ್ರಮ ಉಸ್ತುವಾರಿ ಎ.ಸಿ.ವೇಣುಗೋಪಾಲ, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಶಾಸಕ ಮಧುಬಂಗಾರಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾ ಸಮಿತಿ ಎ..ಕೆ.ತಾಜ್‌ಪೀರ್, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಮಾಜಿ ಶಾಸಕ ಶಿವಮೂರ್ತಿ ನಾಯಕ್, ಮಹಿಳಾ ಘಟಕದ ಅಧ್ಯಕ್ಷ ಗೀತಾನಂದಿನಿಗೌಡ, ಮಂಜಪ್ಪ, ಯೋಗೀಶ್‌ಬಾಬು, ರಾಜ್ಯ ಪ್ರದೇಶ ಕಾಂಗ್ರೆಸ್ ಜಿ.ಎಸ್.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲೇಶ್, ಎನ್.ಗೌಡ್ರು, ಕೆಪಿಪಿಸಿ ಲತಾ ಮಲ್ಲಿಕಾರ್ಜುನ, ವಿಶ್ವಕರ್ಮ ರಾಜ್ಯಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ಕಂದಿಕೆರೆ ಸುರೇಶ್‌ಬಾಬು ನರಸಿಂಹಮೂರ್ತಿ, ಸೇವದಾಳ ರಾಮಾಂಜನೇಯ, ಕರಿಕೆರೆ ರಾಜಣ್ಣ, ಶ್ರೀಗುರುದತ್, ಮಂಜುನಾಥ್, ಮೈಲಾರಪ್ಪ, ಮೋಹನ್ ಪೂಜಾರ್, ಲೋಕೇಶ್ ನಾಯ್ಕ್, ಅಲ್ಲಬಕ್ಷಿ, ನಿಜಾಮ್, ಅನಂತ, ಶಾಮಣ್ಣ, ಶಿವಮೂರ್ತಿ ಇತರರು ಇದ್ದರು.