ಸಮಾಜದ ಸುರಧಾರಣೆಗೆ ಬ್ರಹ್ಮಗುರುನಾರಾಯಣರು ಒಬ್ಬರು : ಕ್ಷೇತ್ರದ ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಸಮಾಜದ ಸುರಧಾರಣೆಗೆ ಹೋರಾಡಿದ ಮಹಾನೀಯರಲ್ಲಿ ಗುರು ನಾರಾಯಣರು ಒಬ್ಬರು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಇಂದು ನಾವೆಲ್ಲಾ ಸಾಗಬೇಕಿದೆ ಎಂದು ಶ್ರೀ ಆರ್ಯ ಈಡಿಗ ಮಹಾ ಸಂಸ್ಥಾನದ ಶ್ರೀ ವಿಖ್ಯಾತನಂದ ಸ್ವಾಮೀಜಿ ಆರ್ಶಿವಚಿಸಿದರು.


ಅವರು ನಗರದ ವಾಲ್ಮಿಕಿ ಕಲ್ಯಾಣ ಮಂಟಪದಲ್ಲಿ ತಾಲೂಕು ಆರ್ಯಈಡಿಗ ಸಂಘದಿAದ ಆಯೋಜಿಸಿದ್ದ ಬ್ರಹ್ಮ ಗುರುನಾರಾಯಣ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ಹಾಕುವುದರ ಮೂಲಕ ಸಮಾರಂಭಕ್ಕೆ ಭಾಗವಹಿಸಿ ಮಾತನಾಡಿದರು, ಇಂದು ನಾರಾಯಣ ಗುರುಗಳ ಜಾತಿ ನಮಗೆ ಮುಖ್ಯವಲ್ಲ. ಅವರ ನೀತಿ ಮುಖ್ಯ ಅವರು ಪ್ರತಿಯೊಂದು ಸಮಾಜವನ್ನು ಗೌರವದಿಂದ ಕಾಣುತ್ತಿದ್ದರು ಎಂದರು.


ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ.ಹರಿಪ್ರಸಾದ್ ಮಾತನಾಡಿ, ಈಡೀ ಸಮಾಜದ ಒಗ್ಗೂಡುವಿಕೆ ಕಾರಣ ಕರ್ತರಾದ ಗುರು ನಾರಾಯಣರು ನಮ್ಮ ಆರಾಧಕರು, ಅವರು ಅತೀ ಹೆಚ್ಚಿನದಾಗಿ ಶಿಕ್ಷಣಕ್ಕೆ ಬಹು ಪ್ರಮುಖ್ಯತೆ ನೀಡುತ್ತಿದ್ದರು, ಅಸ್ಪೃಶ್ಯತೆ ಜಾತಿ ಜಾತಿಗಳಲ್ಲಿ ತಾಂಡವಾಡುತ್ತಿದ್ದವು ಅದರಲ್ಲೂ ಈಡಿಗ ಸಮುದಾಯವನ್ನು ಹೀನಾಯವಾದ ಸ್ಥಿತಿಯಲ್ಲಿ ಕಾಣುವ ದಿನಗಳಲ್ಲಿ ಶಿಕ್ಷಣದಿಂದ ಸಂಘಟನೆಯ ಮೂಲಕ ಇಂದು ಜಾಗೃತಿಗೆ ಕಾರಣರಾಗಿದ್ದಾರೆ ಎಂದರು.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಚತುರ್ವಣ ವ್ಯವಸ್ಥೆಯ ಕರಾಳ ಕತೆಯ ವಿರುದ್ಧದ ಹೋರಾಟವೇ ನಾರಾಯಣ ಗುರುಗಳ ಸಮಾಜ ಸುಧಾರಣೆ ಮಾಡಿದ್ದಾರೆ, ಸಾಮಾಜಿಕ ಸಮಸ್ಯೆಗಳೆ ತುಂಬಿಕೊAಡಿದ್ದ ಆ ಕಾಲದಲ್ಲಿ ನಾರಾಯಣ ಗುರುಗಳ ಪ್ರಭಾವ ಕರಾವಳಿಯಲ್ಲೂ ಬದಲಾವಣೆ ಆಯಿತು ಸ್ಮರಿಸಿದರು.


ಕೆಪಿಪಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಮಧುಬಂಗಾರಪ್ಪ ಮಾತನಾಡಿ, ಅಂದು ನಾರಾಯಣಗುರು ಹೋರಾಟ ಮಾಡದೆ ಹೋಗಿದ್ದರೆ ಇಂದು ನಾವು ನಿವೇಲ್ಲಾ ಈ ಸಭೆಯಲ್ಲಿ ಇರುತ್ತಿರಲಿಲ್ಲ, ಅವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಈಡೀ ಸಮಾಜದ ಹೇಳಿಗೆಗೆ ಶ್ರಮಿಸಿದ ಧಿಮಂತ ಸಾಧ್ವಿ ಸಂತರು ಹಾಗಿದ್ದಾರೆ ಎಂದರು.
ಪೊಲೀಸ್ ಇನ್ಸ್ಪೆಕ್ಟೆರ್ ಉಮೇಶ್ ಮಾತನಾಡಿ, ಮಂಗಳೂರಿನ ಕುದ್ರೊಂಳಿ ದೇವಸ್ಥಾನ, ಸೇರಿದಂತೆ ಅಲ್ಲಲ್ಲಿ ನಾರಾಯಣಗುರು ಮಂದಿರಗಳು ನಿರ್ಮಾಣವಾಗಲು ಕಾರಣವಾಯಿತು. 1908ನೇ ಇಸವಿಯಲ್ಲಿ ಮಂಗಳೂರಿಗೆ ಬಂದ ನಾರಾಯಣ ಗುರುಗಳು ಸಾಹುಕಾರ ಕೊರಗಪ್ಪರ ನೇತೃತ್ವದಲ್ಲಿ ಕುದ್ರೊಂಳಿಯಲ್ಲಿ ದೇವಸ್ಥಾನಕ್ಕೆ ಸ್ಥಳ ಆಯ್ಕೆ ಮಾಡಿದರು. ದೇವರು ಧರ್ಮದ ಬೆಳಕಿನಿಂದ ವಂಚಿತರಾದ ಜನಕ್ಕೆ ದೇವರನ್ನು ಕೊಟ್ಟ ನಾರಾಯಣ ಗುರುಗಳು ಎಂದರು.
ಈದೇ ಸಂಧರ್ಭದಲ್ಲಿ ಹಿಂದುಳಿದ ವರ್ಗದ ಮಹಿಳಾ ವಿಭಾಗದ ಉಪಾಧ್ಯಕ್ಷೆ ನಾಗವೇಣಮ್ಮ ದೊಡ್ಡರಂಗಪ್ಪ, ಅಧ್ಯಕ್ಷ ಸಿ.ಓ.ರವಿಕುಮಾರ್, ನಗರಸಭೆ ಸದಸ್ಯ ಮಲ್ಲಿಕಾರ್ಜುನಾ. ಮುಖಂಡ ಬೇಕರಿ ವಿಜಯ್, ನೇತಾಜಿ ಪ್ರಸನ್ನ, ಎಪಿಎಂಸಿ ಮಾಜಿ ಅಧ್ಯಕ್ಷ ದೊಡ್ಡ ರಂಗಪ್ಪ, ಪ್ರಕಾಶ್, ಪಾಂಡಪ್ಪ, ಶಿವಬಾರ್ ವೆಂಕಟಶೇ, ಇಎನ್.ವೆಂಕಟೇಶ್, ವಿಭಾಕುಮಾರ್, ಜೈರಾಂ, ಕಿರಣ್, ಚಂದ್ರಶೇಖರ್, ಅಪ್ಪಾಜಿ ನಾಗರಾಜ್, ಬಾರ್ ನವೀನ್, ಬೇಕರಿ ಮಂಜುನಾಥ್, ಬೇಕರಿ ಪುನಿತ್, ಜಗದೀಶ್, ಇತರರು ಇದ್ದರು.

About The Author

Namma Challakere Local News
error: Content is protected !!