ಆಣೆ -ಪ್ರಮಾಣಕ್ಕೆ ಸಿದ್ದವಾದ ಚಳ್ಳಕೆರೆ ಕ್ಷೇತ್ರ
ಕಾಂಗ್ರೇಸ್ – ಬಿಜೆಪಿ ಮುಖಾ ಮುಖಿ
ಶಾಸಕರ ವಿರುದ್ದ ನೇರ ಆರೋಪ
ಸೋಲುವ ಬೀತಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಹತ್ತಿಕ್ಕುವ ಕಾರ್ಯ : ಜಯಪಾಲಯ್ಯ
ಕಮಿಷನ್ ದಂಧೆ ಆರೋಪಕ್ಕೆ : ಕೊಲ್ಲಾಪುರದಮ್ಮ ದೇವಿ ಸಾಕ್ಷಿಕರಿಸಲಿದ್ದಾಳೆ
ಚಳ್ಳಕೆರೆ : ಕೇವಲ ಕಮಿಷನ್ ಪಡೆಯುವುದಕ್ಕೊಸ್ಕರ ಅಧಿವೇಶನದಲ್ಲಿ ಬ್ಯಾರೇಜ್‌ನ ಅನುದಾನ ನೀಡಿಲ್ಲ ಎಂದು ಧ್ವನಿ ಎತ್ತುವ ಸ್ಥಳೀಯ ಶಾಸಕರು ರೈತರ ಪರ, ಸತ್ತವರ ಪರ ಧ್ವನಿ ಎತ್ತಲಿಲ್ಲ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಕಿಡಿಕಾರಿದ್ದಾರೆ.
ಅವರು ನಗರದ ಬಿಜೆಪಿ ಕಾರ್ಯಲಾಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಧಿವೇಷನದಲ್ಲಿ ಪರುಶುರಾಂಪುರ ಭಾಗದ ಕೆರೆಗಳು ತುಂಬಿ ಕೊಡಿ ಬಿದ್ದು ಹಲವಾರು ಸಾವು ನೋವುಗಳಾದವು, ರೈತರು ಸಂಕಷ್ಟದಲ್ಲಿ ಇದ್ದಾರೆ ಇಂತವರ ಪರಧ್ವನಿ ಎತ್ತಬೇಕಾದ ಸಂಧರ್ಭದಲ್ಲಿ ಕೇವಲ ಪರುಶುರಾಂಪುರ ಸಮೀಪದ ಬ್ಯಾರೇಜ್‌ಗೆ ಅನುದಾನ ನೀಡಿಲ್ಲ ಎಂದು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತುವ ಇವರ ಕಾರ್ಯವೈಖರಿಗೆ ನಮ್ಮ ಕಾರ್ಯಕರ್ತ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದಕ್ಕೆ ಅವರ ಮೇಲೆ ಕೇಸ್ ಹಾಕಿಸುವುದು ಇವರ ಕಾರ್ಯ ವೈಖರಿಗೆ ಹಿಡಿದ ಕೈಗÀನ್ನಡಿಯಾಗಿದೆ.
ಕಾಂಗ್ರೇಸ್ ಕಾರ್ಯಕರ್ತರ ನಿಯಂತ್ರಣಕ್ಕೆ ಒತ್ತಡ :
ಕಾಂಗ್ರೆಸ್ ಕಾರ್ಯಕರ್ತರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದಾರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ, ಚಳ್ಳಕೆರೆ ಸರ್ಕಲ್‌ಗೆ ಬರಲಿ ಎಂದು ಬೆದರಿಕೆ ನೀಡುವುದು ಕೇಸ್ ದಾಖಲಿಸುವುದು ಇವುಗಳೆಲ್ಲಾ ಇವರ ಭ್ರಷ್ಟಾಚಾರ ಮುಚ್ಚಿಹಾಕುವ ಹುನ್ನಾರವಾಗಿದೆ, ಇವರು 20% ಕಮಿಷನ್ ಗೋಸ್ಕರ ಅಧಿವೇಶನದಲ್ಲಿ ಬ್ಯಾರೇಜ್ ಅನುದಾನ ಕೇಳುತಿದ್ದಾರೆ ಹೊರತು ರೈತರ ಜೀವಕ್ಕೆ ಇಲ್ಲ, ನಮ್ಮ ಕಾರ್ಯಕರ್ತ ಸೋಶಿಯಲ್ ಮಿಡಿಯಾದಲಿ ಧ್ವನಿ ಎತ್ತಿದ್ದಕ್ಕೆ ಎರಡು ದಿನಗಳ ನಂತರ ಅಧಿವೇಶನದಲ್ಲಿ ರೈತರ ಸಾವಿನ ಬಗ್ಗೆ ಧ್ವನಿ ಎತ್ತುವುದು ಇವರ ಕಾಳಜಿ ಎಷ್ಟಿದೆ ಎಂಬುದು ತಿಳಿಸುತ್ತದೆ. ಪ್ರಜಾಪ್ರಭುತ್ವ ಆಡಳಿತ ಸರಕಾರದ ವ್ಯವಸ್ಥೆಯಲ್ಲಿ ಸ್ಥಳೀಯ ಶಾಸಕರು ಬಿಟ್ಟಿ ಪ್ರಚಾರಕ್ಕೆ ಪಡೆಯಲು ಬಿಜೆಪಿ ಕಾರ್ಯಕರ್ತರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಇದು ಶೋಭೇಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಜಿಲ್ಲಾ ಪ್ರಧಾನಕಾರ್ಯದರ್ಶಿ ಜಯಪಾಲಯ್ಯ ಮಾತನಾಡಿ, ನಮ್ಮ ಬಿಜೆಪಿ ಮುಖಂಡ ಸೋಶಿಯಲ್ ಮೀಡಿಯಾದಲ್ಲಿ ಶಾಸಕರನ್ನು ಪ್ರಶ್ನೆಸಿದ್ದಕ್ಕೆ ಕೇಸ್‌ಹಾಕಿ ಅವರನ್ನು ಹತ್ತಿಕ್ಕುವ ಹುನ್ನಾರ ಮಾಡುತ್ತಿದ್ದಾರೆ, ಕ್ಷೇತ್ರದಲ್ಲಿ ಬೆಳೆನಾಶವಾಗಿದೆ, ರೈತರು ಸಾವಿಗಿಡಾಗಿದ್ದಾರೆ ಆದರೆೆ ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ಯಾಕೇ ನೊಡುತ್ತಿರಾ,
ಕಮಿಷನ್ ಪಡೆದಿರುವುದು ಒಪ್ಪಿಕೊಳ್ಳಿ :
ನಮ್ಮ ನಾಯಕರ ಬಗ್ಗೆ ಕೂಡ ನಿಮ್ಮ ನಾಯಕರು ಆರೋಪ ಮಾಡುತ್ತಿದ್ದಾರೆ ಆದರೆ ಯಾರೂ ಕೂಡ ಕೇಸ್ ದಾಖಲಿಸುವ ಗೋಜಿಗೆ ಹೋಗಿರಲಿಲ್ಲ ಆದರೆ ನೀವು ಕೇಸ್ ದಾಖಲಿಸುವ ಪ್ರವೃತ್ತಿ ಕೈಬಿಡಿ, 2023ರ ಚುನಾವಣೆಯ ಸೋಲುವ ಬೀತಿಯಿಂದ’ ನಾವು ಮನೆಗೆ ಹೋಗುತ್ತೆವೆ ಎಂಬ ಆತಾಶೆ ಭಾವನೆಯಿಂದ ಈರೀತಿ ಕೇಸ್ ದಾಖಲಿಸುತ್ತಿರಾ, ಚುನಾವಣೆ ಸಮೀಪಸುತ್ತಿದ್ದಂತೆ ಈರೀತಿ ಮಾಡುವುದು ಸರಿಯಲ್ಲ, ಕಳೆದ ಅವಧಿಯಲ್ಲಿ ಮೂರು ಬ್ಯಾರೇಜ್ ಗಳಿಗೆ ನಮ್ಮ ಸರಕಾರ ಅನುಮೋದನೆ ನೀಡಿತ್ತು ಆದರೆ ನೀವು ಶಾಸಕರ ಕಾರ್ಯವಸ್ಠೆ ಮಾಡಿದ್ದಿರೀ, ರಾಜಾಕೀಯದಿಂದ ಓಡೆರಹಳ್ಳಿ ಬೊಂಬೆರಹಲ್ಳಿ ಜನರನ್ನು ಓಲೈಸಿಕೊಳ್ಳಲು ಈರೀತಿ ರಾಜಾಕಾರಣ ಮಾಡಬಾರದು ಬಿಜೆಪಿ ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸ ಮಾಡಬಾರದು, ಬ್ಯಾರೇಜ್‌ನಲ್ಲಿ ಕಮಿಷನ್ ಪಡೆದಿಲ್ಲವಾದರೆ ನಮ್ಮ ಸವಾಲಿಗೆ ಸಿದ್ದರಾಗಿ ಪರುಶುರಾಂಪುರ ಗ್ರಾಮದ ಕೊಲ್ಲಾಪುರದಮ್ಮ ದೇವಿ ಮುಂದೆ ಪ್ರಮಾಣ ಮಾಡಿ ಇಲ್ಲವಾದರೆ ಕಮಿಷನ್ ಒಪ್ಪಿಕೊಳ್ಳಿ, ದಾಖಲಾತಿ ಬಿಡಗಡೆ ಮಾಡಲು ನಾವು ಸಿದ್ದರಿದ್ದೆವೆ. ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಮುಖಂಡರನ್ನು ಸರ್ಕಲ್‌ಗೆ ಬನ್ನಿ ಎಂದು ದಮಿಕಿ ಹಾಕುತ್ತಾರೆ ಇಂತ ಕೊಳಕು ಮನಸ್ಥಿತಿಯನ್ನು ನಿಲ್ಲಿಸಬೇಕು, ಕಾಂಗ್ರೆಸ್ ಕಾರ್ಯಕರ್ತರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದಾರೆ ಮುಂದಿನ ದಿನಗಳಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಸ್ಥಳೀಯ ಶಾಸಕರ ವಿರುದ್ಧ ಆಕ್ರೋಶ ಹೊರ ಹಾಕಿದರು.
ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್ ಮಾತನಾಡಿ, ಸ್ಥಳೀಯ ಕ್ಷೇತ್ರದ ಶಾಸಕರು ಕಮಿಷನ್ ಪಡೆದಿಲ್ಲವಾದರೆ ನಮ್ಮ ದೇವರ ಮುಂದೆ ಪ್ರಮಾಣ ಮಾಡಲಿ ಇಲ್ಲವಾದರೆ ಒಪ್ಪಿಕೊಳ್ಳಲಿ ಅದನ್ನು ಬಿಟ್ಟು ಬಿಜೆಪಿ ಕಾರ್ಯಕರ್ತರನ್ನು ಹತ್ತಿಕ್ಕುವ ಹುನ್ನಾರ ಸರಿಯಲ್ಲ , ಚುನಾವಣೆ ಸಮಿಪಿಸುತಿದ್ದಂತೆ ನಮ್ಮ ಕಾರ್ಯಕರ್ತರ ಮೇಲೆ ಕೇಸ್ ಹಾಕಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈದೇ ಸಂಧರ್ಭದಲ್ಲಿ ಉಪಾಧ್ಯಕ್ಷ ದಿನೇಶ್‌ರೆಡ್ಡಿ, ಪ್ರಧಾನ ಕಾರ್ಯದರ್ಶಿ ಶಶಿಧರ್ ರೆಡ್ಡಿ, ಅಲ್ಲಾಪುರ ಬಸವರಾಜ್, ಉಪಾಧ್ಯಕ್ಷ ದೇವರಾಜ್ ರೆಡ್ಡಿ, ನವೀನ್ ನಾಯಕ, ವೀರೇಶ್, ಡಿವಿಕೆ ಸ್ವಾಮಿ, ರುದ್ರಮುನಿ, ಪಾಲನೇತ್ರ, ಸುರೇಶ್, ನಾಗರಾಜ ದೋರೆ, ಇತರರು ಪಾಲ್ಗೊಂಡಿದ್ದರು.