ದೇಶವನ್ನು ಕತ್ತಲಲ್ಲಿ ಮುಳುಗಿಸುವ ಬಿಜೆಪಿಗರ ನಿಜ ಸತ್ಯ ಬಯಲುಗೆಳೆಯಲು ಭಾರತ್ ಜೋಡೋ ಯಾತ್ರೆ : ಮಾಜಿ ಶಾಸಕ ಕೆ ಎನ್.ರಾಜಣ್ಣ
ಚಳ್ಳಕೆರೆ : ಈಡೀ ದೇಶವನ್ನು ಕತ್ತಲಿಲ್ಲಿ ಮುಳುಗಿಸುವ ಬಿಜೆಪಿಗರ ನಿಜ ಸತ್ಯವನ್ನು ಬಯಲುಗೆಳೆಯುವ ಪ್ರಮುಖ ಅಜಂಡದ ಮೂಲಕ ಇಂದು ಭಾರತ್ ಜೋಡೋ ಯಾತ್ರೆ ಮೂಲಕ ಪ್ರತಿಯೊಬ್ಬ ಸಾರ್ವಜನಿಕರಿಗೂ ಗೊತ್ತು ಮಾಡುವ ಅನಿವಾರ್ಯತೆ ಇದೆ ಎಂದು ಮಾಜಿ ಶಾಸಕ ಕೆಎನ್.ರಾಜಣ್ಣ ಹೇಳಿದ್ದಾರೆ.
ಅವರು ನಗರದ ಶಾಸಕರ ಭವನದಲ್ಲಿ ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಾಗುವ ಪಾದಯಾತ್ರೆಯು ಚಳ್ಳಕೆರೆ ಕ್ಷೇತ್ರದ ಮೂಲಕ ಹಾದು ಹೋಗುವುದರಿಂದ ಕ್ಷೇತ್ರದಲ್ಲಿ ರೂಪರೇಶಿಗಳ ಸಭೆಯಲ್ಲಿ ಮಾತನಾಡಿದರು.
ಪಾದಯಾತ್ರೆ ಕ್ಷೇತ್ರದಲ್ಲಿ ಸಾಗುವುದರಿಂದ ರಾಜ್ಯದ ವಿವಿಧ ಕ್ಷೇತ್ರಗಳಿಂದ ಸಾವಿರಾರು ಮುಖಂಡರು ಭಾಗವಹಿಸಲಿದ್ದಾರೆ ಆದ್ದರಿಂದ ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ವ್ಯವಸ್ಥೆ, ಮಜ್ಜಿಗೆ ವ್ಯವಸ್ಥೆ ಈಗೇ ದಾರಿಯಲ್ಲಿ ಪ್ರಥಮ ಚಿಕಿತ್ಸೆ ನೀಡಲು ಅಂಬ್ಯುಲೇನ್ಸ್ ವ್ಯವಸ್ಥೆ ಈಗೇ ಜವಾಬ್ದಾರಿಯಿಂದ ದಾರಿಯುದ್ದಕ್ಕೂ ವ್ಯವಸ್ಥೆ ಕಲ್ಪಿಸುವ ರೀತಿಯಲ್ಲಿ ಸ್ಥಳೀಯ ಕಾರ್ಯಕರ್ತರು ಭಾಗವಹಿಸಬೇಕು ಎಂದರು.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಸೆ.7ರಿಂದ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆಗೆ ಈಗಾಗಲೇ ತಯಾರಿ ನಡೆದಿದೆ ಅದರಂತೆ ಚಳ್ಳಕೆರೆ ಕ್ಷೇತ್ರದ ಸರ್ವರು ಭಾಗವಹಿಸುವಂತೆ ಕರೆ ನೀಡಲಾಗಿದೆ ನಮ್ಮ ಕ್ಷೇತ್ರಕ್ಕೆ ಆಗಮಿಸುವ ಪಾದಯಾತ್ರೆಗೆ ಸಕಲ ಸಿದ್ದತೆ ಮಾಡಲಾಗಿದೆ ಎಂದರು.
ಕಾAಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿ ಜಯಸಿಂಹ ಮಾತನಾಡಿ, ಭಾರತ್ ಜೋಡೋ ಕಾರ್ಯಕ್ರಮದ ಪ್ರಮುಖ ಉದ್ದೇಶ ದೇಶವನ್ನು ಐಕ್ಯತೆಗೊಳಿಸುವುದು ಎಲ್ಲಾರೂ ಬನ್ನಿ ಭಾಗವಹಿಸಿ. ಇಡೀ ದೇಶದ್ಯಾಂತ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಸತ ಸಿದ್ದ ಎಂದು ಆದ್ದರಿಂದ ಭಾರತ್ ಜೋಡೋ ಪಾದಯಾತ್ರೆಗೆ ಮೈಲು ಗಲ್ಲಾಗಲಿದೆ ಎಂದರು.
ಈದೇ ಸಂದರ್ಭದಲ್ಲಿ ಮಾಜಿ ಸಂಸದ ಬಿಎನ್.ಚಂದ್ರಪ್ಪ, ಮಾಜಿ ಸಚಿವ ಶಿವಮೂರ್ತಿ ನಾಯ್ಕ್, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಮಾಜಿ ಶಾಸಕ ರಾಜೇಶ್, ಮಾಜಿ ಶಾಸಕ ಕೆಎನ್.ರಾಜಣ್ಣ, ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ತಾಜಪೀರ್, ಮೊಳಕಾಲ್ಮೂರು ಕಾಂಗ್ರೆಸ್ ಮುಖಂಡ ಯೋಗಿಶ್ ಬಾಬು, ಜಿಲ್ಲಾ ಪಂಚಾಯತ ಸದಸ್ಯ ಬಿಪಿ.ಪ್ರಕಾಶ್‌ಮೂರ್ತಿ, ಚೌಳೂರು ಪ್ರಕಾಶ್, ನಾಗೇಶ್ ರೆಡ್ಡಿ, ನಗರಸಭೆ ಸದಸ್ಯ ರಾಘವೇಂದ್ರ, ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಶಂಕರ್, ತಾಲೂಕು ಅಲ್ಪಸಂಖ್ಯಾತರ ಘಟಕ ಹಾಗೂ ಎನ್‌ಎಸ್‌ಯುವೈ ಘಟಕಗಳ ಸಭೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಖಂಡರುಗಳು, ಕಾರ್ಯಕರ್ತರುಗಳು ಉಪಸ್ಥಿತರಿದ್ದರು.