ಪರಿಸರ ಸ್ನೇಹಿ ಹುಲ್ಲಿನ ಗಣಪತಿ ವಿಸರ್ಜನೆ ಎಸ್ ಸತೀಶ್

ನಾಯಕನಹಟ್ಟಿ:: ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠದ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಪರಿಸರ ಸ್ನೇಹಿ ಹುಲ್ಲಿನ ಗಣಪತಿಯನ್ನು ಇಂದು ವಿಸರ್ಜನೆ ಮಾಡಲಾಯಿತು ಎಂದು ದೇವಾಲಯದ ಸಿಬ್ಬಂದಿ ಎಸ್ ಸತೀಶ್ ಹೇಳಿದ್ದಾರೆ.
ಅವರು ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಒಳಮಠದ ಆವರಣದಲ್ಲಿ ಪರಿಸರ ಸ್ನೇಹಿ ಹುಲ್ಲಿನ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ .

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಪರಿಸರ ಸ್ನೇಹಿ ಹುಲಿನ ಗಣಪತಿಯನ್ನು ಪ್ರತಿಷ್ಠಾಪಿಸಿ 9 ದಿನಗಳ ಇಂದಿಗೆ ತುಂಬಿದೆ ಆದರಿಂದ ಇಂದು ಗಣಪತಿ ವಿಸರ್ಜನೆಯನ್ನು
ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಒಳಮಠ ದಿಂದ ಪ್ರಮುಖ ರಾಜಬೀದಿಯಲ್ಲಿ ಮೆರವಣಿಗೆ ಮೂಲಕ ವರಮಠಕ್ಕೆ ಹೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಪೂಜೆ ಸಲ್ಲಿಸಿ ನಂತರ ಹಿರೆಕೆರೆಯ ದೊಡ್ಡ ಕೆರೆಯಲ್ಲಿ ಪರಿಸರ ಸ್ನೇಹಿ ಹುಲ್ಲಿನ ಗಣಪತಿ ವಿಸರ್ಜನೆ ಮಾಡಲಾಗುವುದು ಎಂದು ದೇವಸ್ಥಾನದ ಸಿಬ್ಬಂದಿ ಎಸ್ ಸತೀಶ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ವಿದ್ವಾನ್ ಡಾಕ್ಟರ್ ವೀರೇಶ್ ಹಿರೇಮಠ ದೇವಸ್ಥಾನದ ಸಿಬ್ಬಂದಿಗಳಾದ ಮನು, ಶಿವಣ್ಣ, ಪ್ರಕಾಶ್, ಮಾದೇವಪ್ಪ, ಬಿ ಟಿ ರುದ್ರೇಶ್, ಎನ್ ಟಿ ತಿಪ್ಪೇಸ್ವಾಮಿ, ಎಂ ತಿಪ್ಪೇಸ್ವಾಮಿ, ಮಂಜಣ್ಣ, ಕಿನ್ನಾರಿ ಮಂಜುನಾಥ್, ದುರುಗೇಶ್, ಶಿವರಾಜ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

Namma Challakere Local News
error: Content is protected !!