ಚಳ್ಳಕೆರೆ ತಾಲೂಕು ಆಡಳಿತದಿಂದ ಶ್ರೀ ಬ್ರಹ್ಮ ಗುರುನಾರಾಯಣ ಜಯಂತಿ ಆಚರಣೆ

ಚಳ್ಳಕೆರೆ : ಓರ್ವ ಸಮಾಜ ಸುಧಾರಕರಾಗಿ ಅವರನ್ನು ಕಂಡಾಗ ಅವರು ಒಂದು ಜಾತಿ, ಧರ್ಮದ ಗುರುವಲ್ಲ. ಅವರು ಲೋಕ ಗುರು. ಅವರು ಹೇಳಿದ ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವುದು ಮನುಷ್ಯ ಧರ್ಮದ ಸಾರ ಎಂದು ತಹಶೀಲ್ದರ್ ಎನ್.ರಘುಮೂರ್ತಿ ಹೇಳಿದರು.

ಅವರು ನಗರದ ತಾಲೂಕು ಕಛೇರಿಯಲ್ಲಿ ರಾಷ್ಟಿçಯ ಹಬ್ಬಗಳ ಆಚರಣೆ ವತಿಯಿಂದ ಆಚರಿಸಿದ ಬ್ರಹ್ಮ ಗುರುನಾರಾಯಣ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ಹಾಕುವುದರ ಮೂಲಕ ಮಾತನಾಡಿದರು, ಇಂದು ನಾರಾಯಣ ಗುರುಗಳ ಜಾತಿ ನಮಗೆ ಮುಖ್ಯವಲ್ಲ. ಅವರ ನೀತಿ ಮುಖ್ಯ. ಚತುರ್ವರ್ಣ ವ್ಯವಸ್ಥೆಯ ಕರಾಳ ಕತೆಯ ವಿರುದ್ಧದ ಹೋರಾಟವೇ ನಾರಾಯಣ ಗುರುಗಳ ಸಮಾಜ ಸುಧಾರಣೆ ಮಾಡಿದ್ದಾರೆ, ಸಾಮಾಜಿಕ ಸಮಸ್ಯೆಗಳೆ ತುಂಬಿಕೊAಡಿದ್ದ ಆ ಕಾಲದಲ್ಲಿ ನಾರಾಯಣ ಗುರುಗಳ ಪ್ರಭಾವ ಕರಾವಳಿಯಲ್ಲೂ ಆಯಿತು ಎಂದರು.

ಪೊಲೀಸ್ ಇನ್ಸ್ಪೆಕ್ಟೆರ್ ಉಮೇಶ್ ಮಾತನಾಡಿ, ಮಂಗಳೂರಿನ ಕುದ್ರೊಂಳಿ ದೇವಸ್ಥಾನ, ಸೇರಿದಂತೆ ಅಲ್ಲಲ್ಲಿ ನಾರಾಯಣಗುರು ಮಂದಿರಗಳು ನಿರ್ಮಾಣವಾಗಲು ಕಾರಣವಾಯಿತು. 1908ನೇ ಇಸವಿಯಲ್ಲಿ ಮಂಗಳೂರಿಗೆ ಬಂದ ನಾರಾಯಣ ಗುರುಗಳು ಸಾಹುಕಾರ ಕೊರಗಪ್ಪರ ನೇತೃತ್ವದಲ್ಲಿ ಕುದ್ರೊಂಳಿಯಲ್ಲಿ ದೇವಸ್ಥಾನಕ್ಕೆ ಸ್ಥಳ ಆಯ್ಕೆ ಮಾಡಿದರು. ದೇವರು ಧರ್ಮದ ಬೆಳಕಿನಿಂದ ವಂಚಿತರಾದ ಜನಕ್ಕೆ ದೇವರನ್ನು ಕೊಟ್ಟ ನಾರಾಯಣ ಗುರುಗಳು ಎಂದರು.


ಈದೇ ಸಂಧರ್ಭದಲ್ಲಿ ಗುರು ನಾರಾಯಣ ರವರ ಬಗ್ಗೆ ಶಿಕ್ಷಕರಾದ ಜೆ.ಉಮೇಶ್ ಉಪನ್ಯಾಸ ನೀಡಿದರು.
ಈ ಸಂಭರ್ಧದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯ ಬಿ.ಟಿ.ರಮೇಶ್‌ಗೌಡ, ಕೆ.ವೀರಭದ್ರಯ್ಯ, ಮಲ್ಲಿಕಾರ್ಜುನಾ. ಮುಖಂಡ ಬೇಕರಿ ವಿಜಯ್, ನೇತಾಜಿ ಪ್ರಸನ್ನ, ಎಪಿಎಂಸಿ ಮಾಜಿ ಅಧ್ಯಕ್ಷ ದೊಡ್ಡ ರಂಗಪ್ಪ, ಪ್ರಕಾಶ್, ಪಾಂಡಪ್ಪ, ಶಿವ ಬಾರ್ ವೆಂಕಟಶೇ, ಇ ಎನ್.ವೆಂಕಟೇಶ್, ವಿಭಾ ಕುಮಾರ್, ಜೈರಾಂ, ಕಿರಣ್, ಚಂದ್ರಶೇಖರ್, ಅಪ್ಪಾಜಿ ನಾಗರಾಜ್ , ಮಹಿಳಾ ಸಂಘದ ಅಧ್ಯಕ್ಷ ಕಲ್ಪನಾ ಅಶೋಕ್, ಯಶೋದಮ್, ಅರುಣಾ ಮಂಜುನಾಥ್, ಅಶೋಕ್ ಕುಮಾರ್, ಬೇಕರಿ ಮಂಜುನಾಥ್, ಬೇಕರಿ ಪುನಿತ್, ಜಗದೀಶ್, ಮಂಜುನಾಥ್, ಗಿರೀಶ್, ಉಮೇಶ್ ಕುಮಾರ್, ಸಾಯಿ ಚೇತನ ಸರಸ್ಪತಿ ಶ್ರೀನಿವಾಸ್, ಗುತಿಗೆದಾರ್ ಗಿರೀಶ್, ಮಧು, ಇತರರು ಇದ್ದರು.1

ಪೋಟೋ ಚಳ್ಳಕೆರೆ ನಗರದ ತಾಲೂಕು ಕಛೇರಿಯಲ್ಲಿ ಬ್ರಹ್ಮ ಗುರು ನಾರಾಯಣ ಜಯಂತಿಯಲ್ಲಿ ಸಮಾಜ ಮುಖಂಡರು ಭಾಗಿಯಾಗಿದ್ದರು.

Namma Challakere Local News
error: Content is protected !!