ರಾಣಿಕೆರೆಗೆ ಬಾಗೀನ ಅರ್ಪಣೆ : ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ , ತಹಶೀಲ್ದಾರ್ ರವರಿಂದ
ಚಳ್ಳಕೆರೆ : ಕಳೆದ ಒಂದು ವಾರದಿಂದ ಸುರಿದ ಅಕಾಲಿಕ ಮಳೆಗೆ ಚಳ್ಳಕೆರೆ ತಾಲೂಕಿನಾದ್ಯಂತ ಕೆರೆಕಟ್ಟೆ, ಚೆಕ್‌ಡ್ಯಾಮ್ ಗಳು ಮೈದುಂಬಿ ಹರಿಯುತ್ತಿದ್ದು, ತಾಲೂಕಿನಾದ್ಯಾಂತ ಸುಮಾರು 36 ಕೆರೆಗಳು ತುಂಬಿ ಕೋಡಿ ಬಿದ್ದು ಮೈದುಂಬಿ ಹರಿಯುತ್ತಿವೆ,


ಇನ್ನೂ ವಾಣಿ ವಿಲಾಸ ಸಾಗರದಿಂದ ವೇದಾವತಿ ನದಿ ಪಾತ್ರಕ್ಕೆ ಬೋರ್ಗರೆತ ನೀರಿಗೆ ತಾಲೂಕಿನ ನದಿ ಪಾತ್ರದ ಜನ ಹೈರಾಣಾಗಿದ್ದಾರೆ.
ಇನ್ನೂ ಬಯಲು ಸೀಮೆಯಲ್ಲಿ ರೈತರ ಜೀವನಾಡಿಯಾದ ಬತ್ತಿದ ಕೆರೆಗಳು ತುಂಬಿ ಹರಿಯುದರಿಂದ ರೈತರು ಮೊಗದಲ್ಲಿ ಮಂದಾಹಾಸ ಬೀರಿದೆ, ಇನ್ನೂ ಉಕ್ಕಿ ಹರಿಯುವ ಕೆರೆಗಳಿಗೆ ಬಾಗೀನ ಅರ್ಪಿಸುವ ಕಾರ್ಯ ಭರದಿಂದ ಸಾಗುತ್ತಿದೆ


ಅದರಂತೆ ಮೀರಸಾಬಿಹಳ್ಳಿ ಗ್ರಾಮದ ಹತ್ತಿರ ಇರುವ ಐತಿಹಾಸಿಕ ರಾಣಿ ಕೆರೆಯು ಮೈತುಂಬಿ ಹರಿಯುತಿದ್ದು ಕೋಡಿ ಬಿದ್ದಿದ್ದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ , ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಹಾಗೂ ತಹಶೀಲ್ದಾರ್ ಎನ್.ರಘುಮೂರ್ತಿವರೊಂದಿಗೆ ಬಾಗೀನ ಅರ್ಪಿಸಿ ಸಂತಸಗೊAಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ್ ರೆಡ್ಡಿ, ಉಪಾಧ್ಯಕ್ಷೆ ಗೌರಮ್ಮ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ್‌ಮೂರ್ತಿ, ಗ್ರಾಮ ಪಂಚಾಯತ್ ಸದಸ್ಯ ರಾಜಪ್ಪ, ಸಿದ್ದಲಿಂಗೇಶ್ವರ, ಶಿವರಾಜ್, ತಿಪ್ಪೇಸ್ವಾಮಿ, ಗೀತಮ್ಮ, ಮುಖಂಡರುಗಳಾದ ಮಂಜುನಾಥ್, ಪ್ರಕಾಶ್, ರಾಮಣ್ಣ ಮೇಷ್ಟ್ರು, ಗುಜ್ಜಾರಪ್ಪ, ಗುಜ್ಜಪ್ಪ, ರೈತ ಮುಖಂಡರಾದ ರೆಡ್ಡಿಹಳ್ಳಿ ವೀರಣ್ಣ, ರಾಣಿಕೆರೆ ಅಧ್ಯಕ್ಷ ಎಂಜಾರರೆಡ್ಡಿ, ಸುದರ್ಶನ್‌ರೆಡ್ಡಿ, ಭೀಮರೆಡ್ಡಿ, ಕಮಲೇಶ್, ಶಿವಲಿಂಗಪ್ಪ, ಕರಿಯಪ್ಪ ಮತ್ತು ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು
ಇದೇ ಸಂಧರ್ಭದಲ್ಲಿ ಶಾಸಕ ಟಿ.ರಘುಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ, ನಾನೇ ಅಭಿವೃದ್ದಿ ಮಾಡಿದ್ದಾರೆ ನಾನು ಎಂದು ರಾಜಾಕೀಯ ದುರುದ್ದೆಶದಿಂದ ಮಾಡಿಲ್ಲ, ನಾನು ಅಭಿವೃದ್ದಿಗೆ ಒತ್ತು ನೀಡತ್ತೆನೆ, ವೇದಾವತಿ ನದಿಯಿಂದ ರಾಣಿಕೆರೆಗೆ ಸಿಡ್ಲಯ್ಯನಕೋಟೆಯಿಂದ ಎಡನಾಲಾ ಚಾನಲ್ ಮೂಲಕ ರಾಣಿಕೆರೆಗೆ ಸೇರುವ ಯೋಜನೆ ಈಗಾಗಲೇ 39 ಕೋಟಿಗೆ ಕಳೆದ ಮೂರು ವರ್ಷದ ಹಿಂದೆ ಅಧಿವೇಷನದಲ್ಲಿ ಚರ್ಚೆ ನಡೆಸಿದ್ದೆ, ಆದರೆ ಈಡೇರಲಿಲ್ಲ ನನಗೆ ದುರಷ್ಟವಲ್ಲ ನಮ್ಮ ಕ್ಷೇತ್ರದ ದುರಾದೃಷ್ಠ ಎಂದಿದ್ದಾರೆ.

Namma Challakere Local News
error: Content is protected !!