ಬೀಡಿ ಸಿಗರೇಟ್, ಮಾದಕ ವಸ್ತುಗಳ ದಾಸರಾಗದೀರಿ, ವಿದ್ಯಾರ್ಥಿಗಳಿಗೆ ಕಿವಿಮಾತು : ಪ್ರಾಚಾರ್ಯರಾದ ಎಮ್.ರವೀಶ್
ಚಳ್ಳಕೆರೆ : ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಬೀಡಾ ಗುಟ್ಕಾ ಹಾಗೂ ಪಾನ್ ಪರಾಕ್ ಇಂತಹ ಮಾದಕ ವಸ್ತುಗಳಿಂದ ದುರವಿರಬೇಕು ಎಂದು ಕಾಲೇಜಿನ ಪ್ರಾಚಾರ್ಯರಾದ ಎಮ್.ರವೀಶ್ ಹೇಳಿದ್ದಾರೆ.
ಅವರು ಸರ್ಕಾರಿ ಪದವಿಪೂರ್ವ ಕಾಲೇಜನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಹಯೋಗದಲ್ಲಿ ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾದಕ ವಸ್ತುಗಳಿಂದ ದುಷ್ಟಗಳಿಗೆ ಬಲಿಯಾಗುತ್ತಿದ್ದಾರೆ. ಸಿಗರೇಟ್ ಬೀಡಿಗಳ ದಾಸರಾಗುತ್ತಿದ್ದಾರೆ, ಓದುವ ಹವ್ಯಾಸ ಕಡಿಮೆಯಾಗುತ್ತಿದೆ, ಆದ್ದರಿಂದ ಪ್ರಾರಂಭದಲ್ಲಿ ಮಕ್ಕಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಇನ್ನೂ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ಮೇಲ್ವಿಚಾರಕರಾದ ಅಶೋಕ್ ಮಾತನಾಡಿ, ಮಕ್ಕಳು ವ್ಯಾಸಂಗದ ಹಂತದಲ್ಲಿ ಇಂತಹ ಮಾದಕ ವ್ಯಸನಿಗಳಾಗಿ ಮುಂದೆ ತಮ್ಮ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳುತ್ತಾರೆ ಆದ್ದರಿಂದ ಇಂತಹ ಕಾರ್ಯಗಾರಗಳಿಂದ ಮಕ್ಕಳು ತಮ್ಮ ತಪ್ಪಿನ ಹರಿವು ಗೊತ್ತಾಗಬೇಕಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಪುಟ್ಟರಂಗಪ್ಪ, ಸಣ್ಣ ಮಕ್ಕಳಿಂದ ಕಾಫಿ ಟೀ ಹವ್ಯಾಸಗಳಿಂದ ಪ್ರಾರಂಭಗೊAಡ ಚಟಗಳು ಬೀಡಿ ಸಿಗರೇಟು ಪಾನ್ ಪರಾಕ್ ಗುಟಕ ಬೀಡಾ ಬೀರು ಬ್ರಾಂದಿ ಕೊನೆಗೆ ಮಾದಕ ವಸ್ತುಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹೀಗೆ ಹಾಳು ಮಾಡಿಕೊಳ್ಳುತ್ತಾರೆ ಎಂದು ಎಳೆಎಳೆಯಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಶಾಂತಕುಮಾರಿ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಭಾರತವನ್ನು ಮಧ್ಯಪಾನ ಮುಕ್ತ ದೇಶವನ್ನಾಗಿ ಮಾಡಲು ಸಾಕಷ್ಟು ಶ್ರಮಿಸಿದ್ದಾರೆ. ಮಧ್ಯಪಾನಕ್ಕೆ ಬಲಿಯಾದಂತ ವ್ಯಕ್ತಿಯ ಸಂಸಾರ ಬೀದಿ ಪಾಲಾಗುತ್ತದೆ. ಜೀವನವನ್ನು ಸೊಗಸಾಗಿ ರೂಪಿಸಿಕೊಳ್ಳಲು ನಮ್ಮ ಮನಸ್ಥಿತಿ ಅತಿ ಮುಖ್ಯ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಾನಕಿ, ಡಾ.ರೇಖಾ, ಕ್ಷೇತ್ರ ಧರ್ಮಸ್ಥಳ ಸಂಘದ ಕೌಸಲ್ಯಮ್ಮ , ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಬೇಬಿ ಹಾಗೂ ಗೌರಮ್ಮ ಉಪಸ್ಥಿತರಿದ್ದರು