ವೇದಾವತಿ ಜಲಾಶಯ ಭರ್ತಿ, ನದಿ ದಡದ ಜನರು ಹೈರಾಣು : ಪುನರ್ವಸತಿ ಕೇಂದ್ರಕ್ಕೆ ಕಂದಾಯ ಇಲಾಖೆ ಸಜ್ಜು
ವರದಿ : ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿರವ ವರುಣರಾಯನಿಗೆ ರಾಜ್ಯದ ಜನತೆ ಹೈರಾಣಾಗಿದ್ದಾರೆ.
ಇನ್ನೂ ಕೆಲವು ಕಡೆಗಳಲ್ಲಿ ಜಲಾವೃತವಾದ ನಗರ ಪ್ರದೆಶಗಳನ್ನು ಕೂಡ ಕಾಣಬಹುದಾಗಿದೆ ಈಗೇ ಸುಮಾರು 88 ವರ್ಷಗಳ ಬಳಿಕ ವಾಣಿ ವಿಲಾಸ ಸಾಗರದ ಜಲಾಶ ಕೊಡಿ ಬಿದ್ದು ಬಯಲು ಸೀಮೆಯ ಜನರು ಸಂತಸಗೊAಡಿರುವುದು ಒಂದೇಡೆಯಾದರೆ ನದಿ ಪಾತ್ರದ ದಂಡೆಲ್ಲಿರುವ ಕುಟುಂಬಗಳು ಜಾಲವೃತವಾಗಿವೆ.
ಅದೇ ರೀತಿಯಲ್ಲಿ ಜಿಲ್ಲೆಯ ಗೋನೂರು ಕೆರೆ, ದ್ವಾಮವ್ವನಹಳ್ಳಿ, ಮಲ್ಲಾಪುರ ಕೆರೆ, ಚಿಕ್ಕಮಧುರೆ, ಕಲ್ಲಹಳ್ಳಿ, ನಂತರ ದೊಡ್ಡೆರೆ ಕೆರೆ, ಹಾಗೂ ರಾಣಿಕೆರೆಯೂ ಕೂಡ ಕೋಡಿ ಬಿದ್ದು ಬಯಲು ಸೀಮೆ ಹಸಿರುಕರಣಕ್ಕೆ ನಾಂದಿಹಾಡಿದೆ,
ಇನ್ನೂ ತಾಲೂಕಿನ ಪರಶುರಾಂಪುರ ಹೋಬಳಿಯ ಪರುಶುರಾಂಪುರ ಕೆರೆ ಕೋಡಿ ಬಿದ್ದು ಕೋಡಿಯಲ್ಲಿ ಮೂರು ಅಡಿ ನೀರು ಹಾರಿಯುತ್ತಿರುವುದರಿಂದ ಪಾವಗಡ ಕಡೆಗೆ ಹೋಗುವ ಸಾರ್ವಜನಿಕರಿಗೆ ತೊಂದರೆಯಾಗಿದೆ,
ರಸ್ತೆ ಜಲಾವೃತ :
ಇನ್ನೂ ಪಾವಗಡ ಮಾರ್ಗವಾಗಿ ಓಡಾಡುವ ಸಾವರಿಗೆ ನೀರಿನ ಹರಿವು ಹೆಚ್ಚಾಗಿರುವುದರಿಂದ ರಸ್ತೆಯಲ್ಲಿ ವಾಹನ ಚಲಿಸುವುದು ಕಷ್ಟಸಾಧ್ಯವಾಗಿದೆ, ಇನ್ನೂ ಸೋಮಗುದ್ದು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗೆ ರೈಲ್ವೆ ಅಂಡರ್ ಪಾಸ್ ನಿರ್ಮಾಣಮಾಡಿರುವುದರಿಂದ ಅಂಡರ್ ಪಾಸ್ ಜಲಾವೃತವಾಗಿ ಸಂಪೂರ್ಣವಾಗಿ ರಸ್ತೆ ಬಂದ್ ಹಾಗಿ ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳು ಸಾರ್ವಜನಿಕರು ಸುಮಾರು 20 ರಿಂದ 30 ಕಿಲೋ ದೂರದ ಗ್ರಾಮಗಳಿಂದ ನಗರದತ್ತ ದಾವಿಸಬೇಕಾಯಿತು. ಅದೇ ರೀತಿಯಲ್ಲಿ ಕೂಡ ನಗರಂಗೆರೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅಂಡರ್ ಪಾಸ್ ನಿಂದ ಮುಲುಗಿ ಈಡೀ ರಸ್ತೆ ಜಲಾವೃತವಾಗಿದೆ, ಇನ್ನೂ ತಾಲೂಕಿನ ಗರೀಬ್ ಸಾಬ್ ಮಠ ಜಲಾವೃತವಾಗಿ ಭಕ್ತಾಧಿಗಳು ಒರ ನಡೆಯಬೇಕಾದ ಅನಿವಾರ್ಯ ಉಂಟಾಗಿತ್ತು.
ಕೃಷಿ ಪ್ರದೇಶಗಳಿಗೆ ಹಾನಿ :
ತಾಲೂಕಿನ ಬೆಳೆಗೆರೆ ಗ್ರಾಮದ ಕೆರೆ ಕೋಡಿ ಬಿದ್ದು ಮೈದುಂಬಿ ಹರಿಯುತ್ತಿದೆ, ಇನ್ನೂ ರೈತರ ಕೃಷಿ ಭೂಮಿ ಸೇರಿದಂತೆ ಅಂದಾಜು 8 ಹೆಕ್ಟೆರ್ ತೋಟಗಾರಿಕೆ ಬೆಳೆಗಳು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ, ಅದೇ ರೀತಿಯಲ್ಲಿ ಯಲಗಟ್ಟೆ ಗ್ರಾಮದಲ್ಲಿ ಅಂದಾಜು 12 ಹೆಕ್ಟೆರ್ ಕೃಷಿ ಪ್ರದೇಶಕ್ಕೆ ನೀರು ನುಗ್ಗಿ ಹಾನಿಯಾಗಿದೆ, ಇನ್ನೂ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಹಾಳಗಿದ್ದು ಶಾಲಾ ಮಕ್ಕಳು ಸೇರಿದಂತೆ ವಾಹನ ಸಾವರರು ನಗರ ಪ್ರದೇಶಕ್ಕೆ ತೆರಳಲು ಹೈರಾಣಗಿದ್ದದಾರೆ.
ಕುಟುಂಬಗಳ ಪುನರ್ವಸತಿ ಕೇಂದ್ರ :
ಅದೇ ರೀತಿಯಲ್ಲಿ ನಾರಾಯಣಪುರದಲ್ಲಿ 3 ವಿದ್ಯುತ್ ಕಂಬಗಳು ಬೀಳುವ ಹಂತದಲ್ಲಿದ್ದು ಬೆಸ್ಕಾಂ ಇಲಾಖೆ ಮುಂಜಾಗ್ರತೆಯಿAದ ಸಂಪೂರ್ಣವಾಗಿ ವಿದ್ಯುತ್ ಕಡಿತಮಾಡಲಾಗಿದೆ, ಚೋಳೂರು ಮೂಲಕ ಹಾದು ಹೋಗುವ ವೇದಾವತಿ ನದಿ ಮೈದುಂಬಿ ಹರಿಯುತ್ತಿದ್ದು ಬ್ಯಾರೇಜ್ ತುಂಬಿ ಜನರಲ್ಲಿ ಆತಂಕ ಮನೆ ಮಾಡಿದೆ, ಈ ಭಾಗದಲ್ಲಿ ಅಂದಾಜು 12 ಹೆಕ್ಟೆರ್ ಕೃಷಿ ಭೂಮಿ ಜಲಾವೃತ ಗೊಂಡಿದೆ, ಇನ್ನೂ ಸೂರನಹಳ್ಳಿ ಗ್ರಾಮದಲ್ಲಿ ಸುಮಾರು 8 ಕುಟುಂಬಗಳು ಜಲಾವೃತವಾಗಿದ್ದು ಎಲ್ಲಾ ಕುಟುಂಬಗಳಿಗೆ ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಪುನರ್ವಸತಿ ನೀಡುವುದರ ಮೂಲಕ ಆರೈಕೆ ಕೇಂದ್ರಗಳನ್ನು ತೆರೆದು ಕುಟುಂಬಗಳನ್ನು ರಕ್ಷಣೆ ಮಾಡಲಾಗಿದೆ,
ಶಾಸಕರ ಸೂಚನೆಯಂತೆ ಸ್ಥಳ ಪರೀಶಿಲನೆ :
ಅದೇ ರೀತಿಯಲ್ಲಿ ಹಾಲಗೊಂಡನಹಳ್ಳಿ ಗ್ರಾಮದಲ್ಲಿ ವೇದಾವತಿ ಮೈದುಂಬಿ ಹರಿಯುವ ಕಾರಣ ನದಿ ಪಾತ್ರದ ದಂಡೆಯಲ್ಲಿ ವಾಸಮಾಡುವ ಸುಮಾರು 20 ಕುಟುಂಬಗಳಿಗೆ ಸಮುದಾಯ ಭವನದಲ್ಲಿ ಆರೈಕೆ ಕೇಂದ್ರಗಳನ್ನು ತೆರೆದು ಪುನರ್ವಸತಿ ಕಲ್ಪಿಸಲಾಗಿದೆ. ಜೊತೆಗೆ ಟಿ.ಎನ್.ಕೋಟೆ ಹಾಗೂ ಬೋಂಬೆರಹಳ್ಳಿ, ಹಾಗೂ ರೇಣುಕಾಪುರ ಗ್ರಾಮದ ಮೂಲಕ ಹಾದು ಹೊಗುವ ವೇದಾವತಿ ನದಿ ನೀರಿನ ಹರಿವು ಹೆಚ್ಚಾಗಿದ್ದು ನದಿ ಪಾತ್ರದ ಕುಟುಂಬಗಳಿಗೆ ಈಗಾಗಲೇ ಮುಂಜಾಗ್ರತೆಯಾಗಿ ಪುನರ್ವಸತಿ ಕೇಂದ್ರಗಳಿಗೆ ಹೊಗುವಂತೆ ಇಗಾಗಲೇ ಸೂಚನೆ ನೀಡಲಾಗಿದೆ. ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹಾಗೂ ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರ್ ಎನ್.ರಘುಮೂರ್ತಿ ಸ್ಥಳಕ್ಕೆ ಬೇಟಿ ನೀಡಿ ಪರೀಶಿಲನೆ ನಡೆಸಿ ನಂತರ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ರವಿಕುಮಾರ್ ಅವರೊಂದಿಗೆ ಚರ್ಚಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
1.ಇಂದೇದೂ ಕಾಣದ ರೀತಿಯಲ್ಲಿ ವೇದಾವತಿ ನದಿ ಮೈದುಂಬಿ ಹರಿಯುತ್ತಿದೆ ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ನದಿ ಪಾತ್ರದ ದಂಡೆಯ ಪಕ್ಕದಲ್ಲಿ ವಾಸಿಸುವ ಜನರಿಗೆ ಮುಂಜಾಗ್ರತೆಯಿAದ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ, ರೈತರ ಬೆಳೆಗಳ ನಷ್ಟ ಪರಿಹಾರಕ್ಕೆ ಸೂಕ್ತ ಪರಿಹಾರ ದೊರಕಿಸಲಾಗವುದು ನದಿ ಪಾತ್ರದ ಜನರೊಟ್ಟಿಗೆ ಸಂಪರ್ಕದಲ್ಲಿದ್ದೆನೆ.
— ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ
2.ನದಿ ಪಾತ್ರದ ದಂಡೆಯಲ್ಲಿ ಇರುವ ಸುಮಾರು 30 ಕುಟುಂಬಗಳಿಗೆ ಈಗಾಗಲೇ ಆರೈಕೆ ಕೇಂದ್ರಗಳನ್ನು ತೆರೆದು ಪುನರ್ವಸತಿ ಕಲ್ಪಿಸಿದೆ, ಇನ್ನೂ ಮುಂಜಾಗ್ರತೆಯಾಗಿ ಹಳ್ಳಿಯಲ್ಲಿ ಜಾಲವೃತವಾದ ಪ್ರದೇಶಗಳಿಗೆ ತೆರಳಿ ಆಶ್ರಯ ನೀಡುವ ಕೆಲಸ ನಿರಂತವಾಗಿದೆ ಸಾರಿಗೆ ಸಚಿವ ಬಿ.ಶ್ರೀರಾಮುಲು, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿಗಳ ಸೂಚನೆಯಂತೆ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಜನ ಜೀವನ ಮೊದಲಿನಂತೆ ಮರುಕಳಿಸವರೆಗೆ ಜನರೊಟ್ಟಿಗೆ ತಾಲೂಕು ಆಡಳಿತ ನಿರಂತವಾಗಿರುತ್ತದೆ. ದೂರವಾಣಿ ಸಂಖ್ಯೆ 9448530055 ಇದಕ್ಕೆ ಸಂಪರ್ಕಿಸಬಹುದಾಗಿದೆ .
—ತಹಸೀಲ್ದಾರ್ ಎನ್ ರಘುಮೂರ್ತಿ, ಚಳ್ಳಕೆರೆ