ಮಳೆ ಬರುವ ಸಂಧರ್ಭದಲ್ಲಿ ಮರ ವಿದ್ಯುತ್ ಟ್ರಾನ್ಸ್ ಫಾರಂ ಮೊಬೈಲ್‌ಗಳಿಂದ ದೂರವಿರಿ ಪಾಪೇಶ್ ನಾಯಕ
ಚಳ್ಳಕೆರೆ : ಜಿಲ್ಲೆಯಾದ್ಯಂತ ಕಳೆದ ಮೂರು ನಾಲ್ಕು ದಿನದಿಂದ ಮಳೆರಾಯನ ಆರ್ಭಟ ಅತಿ ಹೆಚ್ಚಾಗಿರುವುದು ಒಂದು ಕಡೆಯಾದರೆ, ನೀರಾವರಿ ಪ್ರದೆಶದ ರೈತರ ಮುಖದಲ್ಲಿ ಸಂತಸ ಮತ್ತೊಂದು ಕಡೆ, ಇಂಥಹ ಪ್ರಕೃತಿಯ ವಿಕೋಪದಿಂದ ಸಿಡಿಲು ಗುಡುಗು ಮಿಂಚಿನ ಆರ್ಭಟದಿಂದ ಜನಸಾವಿಗಿಡಾಗುತ್ತಿರುವುದು ದುರ್ದೈಯವದ ಸಂಗತಿ ಎಂದು ಸಚಿವ ಬಿ.ಶ್ರೀರಾಮುಲುರವರ ಆಪ್ತ ಸಹಾಯಕ ಪ್ರಾಪೇಶ್ ನಾಯಕ ವಿಷಾಧ ವ್ಯಕ್ತಪಡಿಸಿದರು.
ಅವರು ತಾಲೂಕಿನ ಮಲ್ಲೂರಹಟ್ಟಿ ಗ್ರಾಮದ ಕುರಿಗಾಯಿ ಮಹಾಂತೇಶ್ ಎಂಬುವರು ನಿನ್ನೆ ಸಿಡಿಲು ಹೊಡೆದು ಮೃತಪಟ್ಟಿದು ಬೆಳ್ಳಂಬೆಳಗ್ಗೆ ಇಂದು ಗ್ರಾಮಕ್ಕೆ ದಾವಿಸಿದ ಅವರು ಮೃತ ಮಹಾಂತೇಶ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.

ಸಾರ್ವಜನಿಕರು ಗಿಡ ಮರ ಟ್ರಾನ್ಸ್ ಫಾರಂ ಮೊಬೈಲ್ ಬಳಕೆಗಳಿಂದ ದೂರವಿರಿ ಸಚಿವ ಬಿ.ಶ್ರೀರಾಮುಲು ರವರು ಸುದ್ದಿ ತಿಳಿದ ಕೂಡಲೇ ಮೃತರಿಗೆ ಪರಿಹಾರವನ್ನು ಇನ್ನು ಎರಡು ಮೂರು ದಿನದೊಳಗಾಗಿ ನೀಡಲಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ರವರ ಆಪ್ತ ಸಹಾಯಕ ಪಾಪೇಶ್ ನಾಯಕ ತಿಳಿಸಿದರು.

ಈ ಸಂದರ್ಭದಲ್ಲಿ ನಾಯಕನಹಟ್ಟಿ ಮಂಡಲ ಅಧ್ಯಕ್ಷ ಈ ರಾಮರೆಡ್ಡಿ, ಎಂವೈಟಿ ಸ್ವಾಮಿ, ನಗರ ಘಟಕ ಅಧ್ಯಕ್ಷ ಎನ್ ಮಹಾಂತಣ್ಣ, ಬಿಜೆಪಿ ಯುವ ಮುಖಂಡ ಸೋಮು ಚಿತ್ರದುರ್ಗ ಗ್ರಾಮ ಪಂಚಾಯತಿ ಸದಸ್ಯ ಜಿ ಓ ಓಬಳೇಶ್, ಎಂಎಸ್ ಲಕ್ಷ್ಮಣ್, ಕೆಂಗು ರುದ್ರಪ್ಪ, ಬೋರಣ್ಣ, ವೆಂಕಟೇಶ್ ದಳಪತಿ, ಮಲ್ಲಯ್ಯ ಮಲ್ಲೂರಹಳ್ಳಿ ಸೇರಿದಂತೆ ಗ್ರಾಮಸ್ಥರು ಇದ್ದರು

Namma Challakere Local News
error: Content is protected !!