ನೆನೆಗುದಿಗೆ ಬಿದ್ದ ಅಂಗನವಾಡಿ ಕಟ್ಟಡಕ್ಕೆ ಮರು ಜೀವ ನೀಡಿದ : ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ : ಗ್ರಾಮದ ಅಭಿವೃದ್ದಿಗೆ ಪ್ರತಿಯೊಬ್ಬರು ಕಂಕಣ ಬದ್ಧರಾಗಬೇಕು ಅದರಂತೆ ಗ್ರಾಮ ಪಂಚಾಯಿತಿಯ ಅಧಿಕಾರದ ಚುಕ್ಕಾಣಿ ಹಿಡಿದ ಸದಸ್ಯರು ಕೂಡ ಗ್ರಾಮದ ಸರ್ವತೋಮುಖ ಅಭಿವೃದ್ದಿಗೆ ಕಾರಣ ಕರ್ತರಾಗಬೇಕು ಆದರೆ ಕೆಲವು ಕಾಣದ ಕೈಗಳು ಮಾತ್ರ ಗ್ರಾಮ ಪಂಚಾಯಿತಿ ಅಧಿಕಾರದಿಂದ ವಿನಾ ಕಾರಣ ಕೆಲವು ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆ ಮಾಡುವುದು ಕಂಡು ಬಂದಿತ್ತು ಇದರಿಂದ ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಂತಹ ಅಂಗನವಾಡಿ ಕೇಂದ್ರ ಕಟ್ಟಡ ಇಲ್ಲದೆ ಮಕ್ಕಳು ಹೈರಾಣಾಗಿದ್ದುರು.

ಇಂತಹ ದುಸ್ಥಿತಿಯನ್ನು ಮನಗಂಡ ತಹಶೀಲ್ದಾರ್ ಎನ್.ರಘುಮೂರ್ತಿ ಈಡೀ ಗ್ರಾಮದಲ್ಲಿ ಸದಸ್ಯರಿಗೆ ಸರಕಾರದ ಮಾಹಿತಿ ನೀಡುವ ಮೂಲಕ ಗೋಪನಹಳ್ಳಿ ಗ್ರಾಮದಲ್ಲಿ 16 ಲಕ್ಷ ರೂ ವೆಚ್ಚದ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಅನುಕೂಲ ಮಾಡಿದ್ದಾರೆ.
ಈ ಹಿಂದೆ ಈ ಕಟ್ಟಡ ನಿರ್ಮಾಣ ಮಾಡಲು ಸ್ಥಳೀಯವಾಗಿ ಕೆಲವು ಪಂಚಾಯಿತಿ ಸದಸ್ಯರು ಸೇರಿಕೊಂಡು ಅಡ್ಡಿಪಡಿಸಿದ್ದು ಇದಕ್ಕೆ ಶಿಶು ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ, ತಹಶೀಲ್ದಾರ್ ಅವರಿಗೆ ಮನವಿ ಮಾಡಿ ಕಟ್ಟಡದ ಕಾಮಗಾರಿ ಪ್ರಾರಂಭಿಸಲು ಆಗಿರುವಂತ ತೊಂದರೆ ನಿವಾರಿಸಲು ಮನವಿ ಮಾಡಲಾಗಿತ್ತು

ಶಿಶು ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಲವು ಬಾರಿ ವಿವಾದವನ್ನು ಬಗೆಹರಿಸಲು ಗ್ರಾಮಕ್ಕೆ ಬಂದಾಗಲೂ ಕೂಡ ಕೆಲವರು ಅಡ್ಡಿಪಡಿಸಿ ಕೆಲಸ ನಿಲ್ಲಿಸಿದ್ದರು ಎನ್ನಲಾಗಿದೆ.

ಆದರೆ ಇಂದು ಸ್ಥಳ್ಕಕೆ ದಾವಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳು ಶಿಶುಅಭಿವೃದ್ಧಿ ಅಧಿಕಾರಿಗಳು ಮತ್ತು ನಿರ್ಮಿತಿ ಕೇಂದ್ರದ ಅಧಿಕಾರಿಗಳೊಂದಿಗೆ ಜಾಗವನ್ನು ಅಳತೆ ಮಾಡಿಸಿ ಎಲ್ಲರೊಂದಿಗೆ ಸಮಾಲೋಚಿನೆ ನಡೆಸಿದ ಅವರು ಸರ್ಕಾರದ ಅನುದಾನ ಬಳಕೆಯಾಗದಿದ್ದಲ್ಲಿ ಗ್ರಾಮದ ನಾಗರಿಕರಿಗೆ ಹೆಚ್ಚಿನ ನಷ್ಟವಾಗಲಿದ್ದು ಸರ್ಕಾರದ ಯೋಜನೆಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ, ಈ ನಿಟ್ಟಿನಲ್ಲಿ ಯಾರಾದರೂ ಅಡ್ಡಿಪಡಿಸಿದರೆ ನಿಯಮಾನುಸರ ಕ್ರಮ ವಹಿಸಲಾಗುವುದು ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟು ಅಂಗನವಾಡಿ ಕಟ್ಟಡದ ಕಾಮಗಾರಿಯನ್ನ ಪ್ರಾರಂಭಿಸಿದರು

ಇದೇ ಸಂದರ್ಭದಲ್ಲಿ ಶಿಶು ಅಭಿರುದ್ದಿ ಅಧಿಕಾರಿ ಕೃಷ್ಣಪ್ಪ, ರಾಜಶ್ವನಿರೀಕ್ಷೆ ಲಿಂಗೇಗೌಡ, ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!