ಕಿಚ್ಚ ಸುದೀಪರವರ ಸಾಮಾಜಿಕ ಕಳಕಳಿಯ ಸೇವೆಗಳು ಅನನ್ಯ : ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರ ಸಾಮಾಜಿಕ ಕಳಕಳಿಯ ಸೇವೆಗಳು ತುಂಬಾ ಅನನ್ಯ ವಾದಂತಹದು ಸಮಾಜದಲ್ಲಿರುವಂತಹ ಎಂಥಹ ವ್ಯಕ್ತಿಗಳು ಇವರುಗಳ ನಿಸ್ವಾರ್ಥ ಸೇವೆ ಜನೋಪಯೋಗಿ ಸೇವೆ ಮತ್ತು ಅರ್ಪಣಾ ಮನೋಭಾವದ ಸೇವೆಗಳು ಅನನ್ಯ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.


ಅವರು ನಗರದ ಬೆಂಗಳೂರು ರಸ್ತೆಯಲ್ಲಿರುವ ಬನಶ್ರೀ ವೃದ್ಧಾಶ್ರಮದಲ್ಲಿ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ ಅವರ ಜನ್ಮದಿನದ ಪ್ರಯುಕ್ತ ವೃದ್ದರಿಗೆ ಹಣ್ಣು ಹಾಲಿ ಬ್ರೆಡ್ ವಿತರಸಿ ನಂತರ ಕೆಕ್ ಕಟ್ಟು ಮಾಡುವ ಮೂಲಕ ಮಾತನಾಡಿದ ಅವರು ಮನುಷ್ಯ ಬದುಕಿದ ನಂತರವೂ ಕೂಡ ನಮ್ಮನ್ನು ಬಿಟ್ಟು ದೂರ ಹೋಗುವುದಿಲ್ಲ ದುರದೃಷ್ಟವಶಾತ್ ಇಂತಹ ವ್ಯಕ್ತಿಗಳು ಬದುಕಿದ್ದಾಗಲೇ ಇವರುಗಳ ಸೇವೆಗಳನ್ನು ಸಮಾಜಕ್ಕೆ ತಿಳಿ ಹೇಳಬೇಕು

ಈ ರೀತಿ ಕೆಲಸ ಮಾಡಿ ಇವರುಗಳಿಗೆ ಶಕ್ತಿ ತುಂಬಿದಲ್ಲಿ ಸಮಾಜದ ಇನ್ನಷ್ಟು ಕೆಲಸಗಳನ್ನು ಮಾಡಲು ಪ್ರೇರೇಪಿಸಿದಂತಾಗುತ್ತದೆ ಪುನೀತ್ ರಾಜಕುಮಾರ್ ಬದುಕಿದ್ದಾಗಲೇ ಅವರ ಸಾಮಾಜಿಕ ಸೇವೆಗಳು ಜನರಿಗೆ ಗೊತ್ತಾಗಿದ್ದಲ್ಲಿ ಅವರ ಜೀವಿತ ಅವಧಿಯಲ್ಲಿ ಅವರ ಗುಡಿಗಳನ್ನು ಕಟ್ಟಿಸಿ ಜನರು ಆರಾಧಿಸುತ್ತಿದ್ದರು
ದುರಾದೃಷ್ಟವಶಾತ್ ಅವರು ಕಾಲವಾದ ನಂತರ ಅವರ ಸಮಾಜ ಸತ್ ಕಾರ್ಯಗಳು ಜನರಿಗೆ ತಿಳಿಯಿತು
ಈ ಬಗ್ಗೆ ನಮ್ಮೆಲ್ಲರಿಗೂ ಕೂಡ ತುಂಬಾ ನೋವಿದೆ ಇಂತಹ ವ್ಯಕ್ತಿಗಳು ಇವರುಗಳು ಕಾಲವಾದ ನಂತರವೂ ಕೂಡ ಸಮಾಜದಲ್ಲಿ ಬದುಕಿರುತ್ತಾರೆ ಹಾಗಾಗಿ ಸಮಾಜದಲ್ಲಿರುವ ನಾವೆಲ್ಲರೂ ಕೂಡ ಇಂತಹ ವ್ಯಕ್ತಿಗಳ ಆದರ್ಶ ಗುಣಗಳನ್ನು ಮತ್ತು ಆದರ್ಶ ಸತ್ಕಾರ್ಯಗಳನ್ನು ಮಾಡುವುದರ ಮೂಲಕ ಸಮಾಜದಲ್ಲಿ ನಮ್ಮಗಳ ಹೆಜ್ಜೆ ಗುರುತನ್ನು ಮೂಡಿಸಬೇಕು ಎಂದು ಸಲಹೆ ನೀಡಿದರು

ಸಮಾಜಮುಖಿ ಆದಂತ ಸೇವಾ ಕಾರ್ಯಗಳು ಮನುಷ್ಯನನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತವೆ ಇನ್ನು ಅದೆಷ್ಟೋ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡAತ ವ್ಯಕ್ತಿಗಳು ಎಲೆಮರೆ ಕಾಯಿ ಹಾಗೆ ಇದ್ದು ನಮ್ಮಗಳಿಗೆ ಗೋಚರಿಸುವುದಿಲ್ಲ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಅಂತಹ ನಿಸ್ವಾರ್ಥ ಸೇವೆಯನ್ನು ಮಾಡುವ ಮತ್ತು ಇಂಥ ಸತ್ಕಾರ್ಯಗಳನ್ನು ಮಾಡುವ ಮಹಾನೀಯರನ್ನು ಗೌರವಿಸುವ ಕೆಲಸವಾಗಬೇಕೆಂದು ಹೇಳಿದರು

ಸಮಾರಂಭದಲ್ಲಿ ಕಿಚ್ಚ ಸುದೀಪ್ ಟ್ರಸ್ಟ್ನ ಅಧ್ಯಕ್ಷರ ರಾಘವೇಂದ್ರ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು

Namma Challakere Local News
error: Content is protected !!