ಅಪಘಾತಕ್ಕೆ ಆಹ್ವಾನ ನೀಡುವ ದಾರಿ ಪಕ್ಕದ ಬಾವಿ :

ಚಳ್ಳಕರೆ : ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ, ಅದರಂತೆ ಕೆಲವು ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ ಇನ್ನೂ ಸುಮಾರು ವರ್ಷಗಳ ಹಳೆಯಾದಾದ ಮನೆಗಳು ಹಾಗೂ ಇನ್ನೆತರೆ ಕಟ್ಟಗಳು ಮಳೆಗೆ ಹಾನಿಯಾಗುತ್ತಿವೆ.


ಅದರಂತೆ ಕೊಂಡ್ಲಹಳ್ಳಿ ಗ್ರಾಮದಿಂದ ಗೌರಸಮುದ್ರ ಮಾರಮ್ಮ ದೇವಸ್ಥಾನಕ್ಕೆ ಆಗಮಿಸುವ ಪ್ರಮುಖ ರಸ್ತೆಯು ಹಾಳಗಿದ್ದು ಜೊತೆಗೆ ಪಕ್ಕದಲ್ಲೆ ಇರುವ ಬಾವಿಯ ತಡೆಗೋಡೆ ಬಿದ್ದು ವಾಹನ ಸಾವರರಿಗೆ ಕಿರಿಯಾಗುತ್ತಿದೆ,
ಯಾವ ಸಂಧರ್ಭದಲ್ಲಿಯಾದರೂ ಅನಾವುತ ಸಂಭವಿಸಬಹುದು ಆದ್ದರಿಂದ ಸಂಭAಧಿಸಿದ ಇಲಾಖೆ ಅರ್ತಿ ತುರ್ತಾಗಿ ತಡೆಗೊಡೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ರಸ್ತೆ ಪಕ್ಕದ ಈ ಮೂಲ ದಾರಿಯೂ ಊರಿನ ಪಕ್ಕದಲ್ಲಿಯೇ ಇರುವುದು ಹಾಗೂ ರಸ್ತೆ ಪಕ್ಕದ ಎರಡು ಬಾವಿಗಳು ಇದ್ದು ನಿನ್ನೆ ಸುರಿಯೋ ಮಳೆಯಿಂದ ಬಾವಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಕುಸಿದು ಬಿದ್ದಿದ್ದು ಮತ್ತು ಸಂಪೂರ್ಣವಾಗಿ ದಾರಿಯು ಬಿರುಕು ಬಿಟ್ಟಿರುವುದರಿಂದ ವಾಹನ ಸವರಿರಿಗೆ ಮತ್ತು ಓಡಾಡುವ ಜನರಿಗೆ ಆತಂಕ ಉಂಟುಮಾಡಿದೆ,

ಇನ್ನೂ ಗೌರಸಮುದ್ರ ಗ್ರಾಮ

ಪಂಚಾಯಿತ್ ಸದಸ್ಯ ಓಬಣ್ಣ, ಶಶಿಕುಮಾರ್, ಈರಣ್ಣ ಮಾಧ್ಯಮದೊಂದಿಗೆ ಮಾತನಾಡಿ, ಗೌರಸಮುದ್ರ ಮಾರಮ್ಮ ಗ್ರಾಮಕ್ಕೆ ಆಗಮಿಸುವ ಮೂಲ ದಾರಿಯಾಗಿರುವುದರಿಂದ ಈ ದಾರಿಯಿಂದಲೇ ಅನೇಕ ರೀತಿಯ ಕಡೆಗಳಲ್ಲಿ ವಾಹನ ಸವಾರರು ದೇವಸ್ಥಾನಕ್ಕೆ ಆಗಮಿಸುತ್ತಿದ್ದು ತುಂಬಾ ಅಪಾಯದ ಅಂಚಿನಲ್ಲಿದೆ ಆದಷ್ಟು ಬೇಗ ಪ್ರಾಣಾಪಯ ಮತ್ತು ಅಪಘಾತಗಳು ಆಗುವುದರ ಮೊದಲೇ ಇದಕ್ಕೆ ಸಂಬAಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಂಡು ದುರಸ್ತಿ ಮಾಡಿಸಿ ವಾಹನ ಸವಾರರಿಗೆ ಅನುಕೂಲ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂಧರ್ಭದಲ್ಲಿ ಚಂದ್ರಣ್ಣ, ನಾಗರಾಜ್, ಸಿದ್ದೇಶ್, ರಾಜಶೇಖರ, ಸುದೀಪ, ವಿಷ್ಣು, ಮನೋಜ, ಮೂರ್ಗೇಶ್, ಮಹೇಶ್, ವೀರೇಶ್‌ಇತರರು ಪಾಲ್ಗೊಂಡಿದ್ದರು.

Namma Challakere Local News
error: Content is protected !!