ವೈದ್ಯರು ಚಿಕಿತ್ಸೆ ನೀಡಲು ನಿರ್ಲಕ್ಷ್ಯ : ವ್ಯಕ್ತಿ ಸಾವು..! ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ
ಚಳ್ಳಕೆರೆ : ವೈದ್ಯರು ಚಿಕಿತ್ಸೆ ನೀಡಲು ನಿರ್ಲಕ್ಷ್ಯ ವಹಿಸಿದ್ದರಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ನಾಯಕನಹಟ್ಟಿ ಸಮುದಾಯದ ಆರೋಗ್ಯ ಕೇಂದ್ರದ ಮುಂದೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.
ಸುಮಾರು 46 ವರ್ಷದ ಬಾಷಾ ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇವರಿಗೆ ಆರೋಗ್ಯದಲ್ಲಿ ಏರು-ಪೇರು ಆದಂತಹ ಸಂದರ್ಭದಲ್ಲಿ ನಾಯಕನಹಟ್ಟಿ ಸಮುದಾಯದ ಆರೋಗ್ಯ ಕೇಂದ್ರಕ್ಕೆ ಕರೋದುಕೊಂಡು ಹೋಗಿ, ಚಿಕಿತ್ಸೆ ನೀಡುವಂತೆ ಸಂಬAದಿಕರು ಆಸ್ಪತ್ರೆ ವೈದ್ಯಾಧಿಖಾರಿಗಳನ್ನು ಬೇಡಿಕೊಂಡರು.
ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಲು ಸುಮಾರು 1 ಗಂಟೆಗಳ ಕಾಲ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಸಂಬAಧಿಕರು ಆರೋಪವಾಗಿದೆ.
ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನು ಆಸ್ಪತ್ರೆಯ ಮುಂಭಾಗದಲ್ಲಿಟ್ಟು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ತೆ, ಆರೋಗ್ಯ ಕೇಂದ್ರದಲ್ಲಿ ಸ್ವಚ್ಚತೆ ಮತ್ತು ಅವ್ಯವಸ್ಥೆಯನ್ನು ಖಂಡಿಸಿ ಪಟ್ಟಣದ ಜನರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.
ಈ ವೇಳೆ ಮುಖಂಡ ಪಟೇಲ್ ಜಿಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಮಾತನಾಡಿದರು. ಪಪಂ ಸದಸ್ಯ ಸೈಯದ್ ಅನ್ವರ್, ತಿಪ್ಪೇಸ್ವಾಮಿ, ಪಪಂ ಮಾಜಿ ಸದಸ್ಯ ಟಿ.ಬಸಣ್ಣ, ಮನ್ಸೂರ್, ಕೌಸರ್, ಜಾಕೀರ್ ಹುಸೇನ್, ಬೋರಸ್ವಾಮಿ, ಪಂಚಾಕ್ಷರಯ್ಯ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಸೇರಿದಂತೆ ಹೋಬಳಿಯ ಸಾರ್ವಜನಿಕರು ಮುಂತಾದವರು ಇದ್ದರು.