ತಾಯಿ ಮತ್ತು ಮಗುವಿನ ಹಾರೈಕೆಗೆ ಪೋಷಣ್ ಅಭಿಯಾನ ವರದಾನ : ನ್ಯಾಯಾಧೀಶರಾದ ಗಾಯಿತ್ರಿ ಎಸ್ ಕಾಟೆ

ಚಳ್ಳಕೆರೆ : ಭಾರತ ಸರ್ಕಾರವು ಈ ಯೋಜನೆಯಡಿ ಸಮುದಾಯದ ಜನರಿಗೆ ವಿವಿಧ ಆಯಾಮಗಳ ಮುಖಾಂತರ ತಾಯಿ ಮತ್ತು ಮಗುವಿನ ಆರೈಕೆ ಮಾಡುವ ಕುರಿತು ಈ ಮಾಹಿತಿಯನ್ನು ನೀಡಲಾಗುತ್ತಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಗಾಯಿತ್ರಿ ಎಸ್ ಕಾಟೆ ಹೇಳಿದ್ದಾರೆ.


ಅವರು ನಗರದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಪೋಷಣ್ ಮಾಸಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಆಗಬೇಕಾದರೆ ಮೊದಲು ಶುಚಿತ್ವವನ್ನು ಕಾಪಾಡಿಕೊ¼್ಳÀಬೇಕು ಹಾಗೂ ಶುದ್ದವಾದ ನೀರನ್ನು ಕುಡಿಯಬೇಕು ಇದರಿಂದ ಮಕ್ಕಳ ಸಂಪೂರ್ಣಬೆಳವಣಿಗೆಗೆ ಸಹಾಯವಾಗುತ್ತದೆ ಎಂಬ ಮಾಹಿತಿಯನ್ನು ನೀಡಿದರು.
ಅಪರ ಸಿವಿಲ್ ನ್ಯಾಯಾಧೀಶರಾದ ಗೌಡ ಜಗದೀಶ್ ರುದ್ರೆ ಮಾತನಾಡಿ ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುವುದು ಅತಿಮುಖ್ಯವಾಗಿರುತ್ತದೆ. ಹಾಗೂ ಕಾಲ ಕಾಲಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ನಡೆಸುವುದು ಇದರೊಂದಿಗೆ ಪೌಷ್ಠಿಕವಾದ ಮತ್ತು ಆರೋಗ್ಯಕರವಾದ ಮಗುವನ್ನು ಸಮಾಜಕ್ಕೆ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಜಿ.ಎಂ ಆನಂದಪ್ಪ ಮಾತನಾಡಿ ಸರ್ಕಾರವು ಅಪೌಷ್ಠಿಕತೆಯನ್ನು ಹೋಗಲಾಡಿಸಲು ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು ಇದರ ಸÀದುಪಯೋಗವನ್ನು ಪಡೆದುಕೊಳ್ಳುವುದರ ಮೂಲಕ ಪೌಷ್ಠಿಕ ಸಮಾಜವನ್ನು ನಿರ್ಮಾಣ ಮಾಡಲು ಸಹಕರಿಸಬೇಂಕೆದು ಮಾಹಿತಿ ನೀಡಿದರು.

ಶಿಶು ಅಭಿವೃದ್ದಿ ಯೋಜನಾಧಿಕಾರಿ ಬಿ.ಹೆಚ್.ಕೃಷ್ಣಪ್ಪ, ಮಾತನಾಡಿ ಪೋಷಣ್ ಮಾಸಾಚರಣೆಯು ಸೆಪ್ಟೆಂಬರ್ ತಿಂಗಳಲ್ಲಿ 4 ವಾರಗಳ ಕಾರ್ಯಕ್ರಮವಾಗಿದ್ದು ಅಂಗನವಾಡಿ ಕೇಂದ್ರಗಳಲ್ಲಿ ವಿವಿಧ ಸಮುದಾಯ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಳ್ಳುವುರದ ಮೂಲಕ ಗರ್ಭಿಣಿಯರಿಗೆ, ಬಾಣಂತಿಯರಿಗೆ, ಮP್ಕÀಳಿಗೆ ಹಾಗೂ ಸಾರ್ವಜನಿಕರಿಗೆ ಪೌಷ್ಠಿಕತೆಯ ಬಗ್ಗೆ ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲ್ಲಿ ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷರು, ವಕೀಲರು, ಆರೋಗ್ಯ ಶಿಕ್ಷಣಾಧಿಕಾರಿ ಕುದಾಪುರ ತಿಪ್ಪೆಸ್ವಾಮಿ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿ ವಗÀðದವರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!