ಚಳ್ಳಕೆರೆ : ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ರಾಜ್ಯದ ಹಲವೇಡಿ ಜನ ಜೀವನ ಅಸ್ತವ್ಯಸ್ತವಾಗಿದೆ.

ಅದರಂತೆ ಹಳ್ಳ ಕೊಳ್ಳಗಳು ಭರ್ತಿಯಾಗಿ ರೈತನ ಮೊಗದಲ್ಲಿ ಮಂದಾಹಾಸ ಕಾಣುತ್ತಿದೆ.

ಮಳೆಯಿಂದ ವೇದಾವತಿ ನದಿಯಲ್ಲಿ ನೀರಿನ ಒಳ ಹರಿವು ಹೆಚ್ಚಿದ್ದರಿಂದ ಇನ್ನೂ ಕೆಲವೆ ದಿನಗಳಲ್ಲಿ ಕೋಡಿ ಬೀಳುವ ಸಾಧ್ಯತೆಗಳು ಹೆಚ್ಚಿವೆ ಆದ್ದರಿಂದ ವೇದಾವತಿ ಇಕ್ಕೆಲಗಳಲ್ಲಿ ವಾಸಿಸುವ ಜನ ವಸತಿ ಪ್ರದೇಶಗಳಿಗೆ ಈಗಾಗಲೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೂಡ ಸೂಚಿಸಲಾಗಿದೆ.

ಇನ್ನೂ ಚಳ್ಳಕೆರೆ ತಾಲೂಕಿನಲ್ಲಿ ವೇದಾವತಿ ನದಿ ತೀರದ ಜನ ವಸತಿ ಪ್ರದೇಶದ ಹಲವು ಗ್ರಾಮಗಳ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.

ಇದರಿಂದ ಜನರ ರಕ್ಷಣೆ ಮಾಡಬೇಕಾದ ಕಂದಾಯ ಇಲಾಖೆ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ರಾತ್ರೊ ರಾತ್ರಿ ಜನಗಳ ಆಸ್ರಯಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದೆ.

ತಾಲೂಕಿನ ಕೋನಿಗರಹಳ್ಳಿ, ಬೊಮ್ಮನಕುಂಟೆ, ಹಾಗೂ ಹಾಲಗೊಂಡನಹಳ್ಳಿ ಗ್ರಾಮದಲ್ಲಿ ಮೂರು ಮನೆಗಳಿಗೆ ನೀರು ನುಗ್ಗಿ ಕುಟುಂಬಗಳು ಹಾನಿಗೀಡಾಗಿರುವ ಸ್ಥಳಕ್ಕೆ ಕ್ಷೇತ್ರದ ಶಾಸಕ‌ ಟಿ.ರಘುಮೂರ್ತಿ, ತಾಲೂಕಿನ ತಹಶೀಲ್ದಾರ್ ಎನ್ ರಘುಮೂರ್ತಿ ಬೇಟಿ ನೀಡಿ ಅಗತ್ಯ ಸೌಕರ್ಯ ಕಲ್ಪಿಸುವ ಮೂಲಕ ಗಂಜಿ ಕೇಂದ್ರಗಳನ್ನು ತೆರೆದು ಆಶ್ರಯ ನೀಡಿದ್ದಾರೆ.

ಇನ್ನೂ ಮಾಧ್ಯಮದೊಂದಿಗೆ ಮಾತನಾಡಿದ ತಹಶೀಲ್ದಾರ್ ಎನ್ ರಘುಮೂರ್ತಿ,
ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಸರ್ಕಾರ ಮತ್ತು ಇಡೀ ಆಡಳಿತ ವ್ಯವಸ್ಥೆ ನಿಮ್ಮ ಜೊತೆಯಲ್ಲಿ ಇರುತ್ತೆ, ಹಾಗಾಗಿ ಇಂತಹ ಮನೆಗಳಲ್ಲಿರುವಂತ ಸಾರ್ವಜನಿಕರನ್ನು ತಕ್ಷಣ ಆಶ್ರಯ ತಾಣಗಳಿಗೆ ಸ್ಥಳಾಂತರ ಮಾಡಲಾಗುವುದು, ಮುಂದೆಯೂ ಕೂಡ ವಿವಿ ಸಾಗರ ಕೋಡಿ ಬೀಳುವ ಅಂತಕ್ಕಿರುವುದರಿಂದ ಈ ನೀರು ಸೇರಿದರೆ ನೀರಿನ ಪ್ರಮಾಣ ಹೆಚ್ಚಾಗಬಹುದು, ಆದ್ದರಿಂದ ಜಿಲ್ಲಾಧಿಕಾರಿಗಳು ಮತ್ತು ಸ್ಥಳಿಯ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಆಸೆಯಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ

ಈ ರೀತಿ ನೀರು ಹೆಚ್ಚಾದಲ್ಲಿ ಕುಟುಂಬಗಳು ಮತ್ತು ಎಷ್ಟು ಜನರಿಗೆ ಪುನರ್ ವಸತಿ ಕಲ್ಪಿಸಬಹುದು ಎಂಬ ಬಗ್ಗೆ ಸಂಬಂಧಿಸಿದ ಪಿಡಿಒ ಮತ್ತು ರಾಜಸ್ಥನಿ ರೀಕ್ಷಕರಿಗೆ ಸೂಚನೆ ನೀಡಲಾಗಿದೆ

ಪ್ರಸ್ತುತವಾಗಿ ಇಲ್ಲಿ ಅಂತಹ ಗಭೀಂರವಾದ ಪರಿಸ್ಥಿತಿ ಏನೂ ಇಲ್ಲ ಮುಂದೆ ಈ ರೀತಿ ನೀರು ಹೆಚ್ಚಾದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಇಡೀ ತಾಲೂಕು ಆಡಳಿತ ಸಾರ್ವಜನಿಕರ ಜೊತೆಗಿದ್ದು ನೆರವು ನೀಡುವುದರ ಜೊತೆಗೆ ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ ಯಾವುದೇ ಸಾರ್ವಜನಿಕರು ಏನೇ ತೊಂದರೆ ಇದ್ದರೂ ತಕ್ಷಣ ನನ್ನನ್ನು ಸಂಪರ್ಕಿಸ ಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತಿ ಸದಸ್ಯ ಗುಜ್ಜರಪ್ಪ, ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಪಿಡಿಒ ಗುಂಡಪ್ಪ , ಗ್ರಾಮ ಲೆಕ್ಕಾಧಿಕಾರಿ ಹಿರಿಯಣ್ಣ ಮತ್ತು ಗ್ರಾಮಸ್ಥರು ಹಾಜರಿದ್ದರು

About The Author

Namma Challakere Local News
error: Content is protected !!