ಚಳ್ಳಕೆರೆ : ಮುರುಘಾ ಶ್ರೀಗಳ ಬಂಧನಕ್ಕೆ ಹೊತ್ತಾಯಿಸಿ ದಲಿತ ಸಂಘಟನೆಗಳ ಪ್ರತಿಭಟನೆ
ಚಳ್ಳಕೆರೆ : ಸಾಮಾನ್ಯ ಜನರಿಗೂ ಒಂದೇ ಕಾನೂನು ಪ್ರಬಲ ವ್ಯಕ್ತಿಗಳಿಗೂ ಒಂದೇ ಕಾನೂನು ಎಂಬುದರ ಈ ರಾಜ್ಯದ ಜನತೆಗೆ ಇದರ ಅರಿವು ಇರಲಿ, ದಲಿತ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಮುರುಘಾ ರಾಜೇಂದ್ರ ಸ್ವಾಮೀಯ ಮೇಲೆ ಪೋಕ್ಸೋ ಮತ್ತು ಎಸ್‌ಸಿ ಮತ್ತು ಎಸ್‌ಟಿ ದೌಜನ್ಯ ತಡೆ ಕಾಯ್ದೆ ಪ್ರಕರಣ ದಾಖಲಾದರೂ ಪೊಲೀಸ್ ಇಲಾಖೆ ಅವರು ಇನ್ನೂ ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಚಳ್ಳಕೆರೆ ತಾಲೂಕಿನ ವಿವಿಧ ದಲಿತ ಸಂಘಟನೆಗಳು ಇಂದು ತಾಲೂಕು ಕಛೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ.
ನಗರದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ದಲಿತ ಮುಖಂಡರುಗಳು ಆಕ್ರೋಶ ವ್ಯಕ್ತಪಡಿಸಿ ತಾಲೂಕು ಕಚೇರಿಗೆ ದೌಡಾಯಿಸಿ ನೂರಾರು ಮುಖಂಡರುಗಳು ಹಾಗೂ ವಿವಿಧ ಸಂಘಟನೆಗಳು ಸಾಥ್ ನೀಡುವ ಮೂಲಕ ಪ್ರತಿಭಟನೆ ಕಾವು ರಂಗೇರಿತ್ತು.
ಇನ್ನೂ ದಲಿತ ಸಂಘರ್ಷ ಸಮಿತಿಯ ಪಧಾಧಿಕಾರಿಗಳೂ ಹಾಗೂ ಅಂಬೇಡ್ಕರ್ ಸ್ವಾಭಿಮಾನಿ ಬಳಗ ಈಗೇ ವಿವಿಧ ಸಂಘಟನೆಗಳು ಬಾಗಿ ಯಾಗಿ ಮುರುಗಾ ಶರಣರ ಬಂಧನಕ್ಕೆ ಹೊತ್ತಾಯಿಸಿದ್ದಾರೆ.
ಮುರುಘಾ ರಾಜೇಂದ್ರ ಶಿವಮೂರ್ತಿ ಸ್ವಾಮಿಯನ್ನು ಈ ಕೂಡಲೇ ಬಂಧಿಸಬೇಕು ಪೊಲೀಸ್ ಇಲಾಖೆ ಆಡಳಿತ ಸರಕಾದ ಕಪಿ ಮುಷ್ಠಿಯಲ್ಲಿ ಇದೆ ಎಂಬುದು ಮೇಲ್ನೋಟಕ್ಕೆ ತೋಚುತ್ತದೆ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಈದೇ ಸಂಧರ್ಭದಲ್ಲಿ ನಗರಸಭಾ ಸದಸ್ಯ ಕೆ.ವೀರಭದ್ರಯ್ಯ, ದಲಿತ ಸಂಘರ್ಷ ಸಮಿತಿ ಸಂಚಾಲಕ ಟಿ.ವಿಜಯ್ ಕುಮಾರ, ಹಳೆ ನಗರದ ಭದ್ರಿ, ಹೊನ್ನುರಾಸ್ವಾಮಿ, ಶಿವಮೂರ್ತಿ, ಡಿ.ಚಂದ್ರು, ನವೀನ್ ಕುಮಾರ್, ಉಮೇಶ್ ಚಂದ್ರು ಬ್ಯಾನರ್ಜಿ, ನನ್ನಿವಾಳ ನಾಗರಾಜ್, ಶಿವಮೂರ್ತಿ, ರಂಗಸ್ವಾಮಿ,ಇನ್ನೂ ಹಲವು ಪಾಲ್ಗೊಂಡಿದ್ದರು.