ಗಣೇಶ ವಿಸರ್ಜನಾ ಮೆರವಣಿಗೆಗೆೆ ಡಿಜೆಗೆ ಅವಕಾಶವಿಲ್ಲ : ಡಿವೈಎಸ್‌ಪಿ. ರಮೇಶ್ ಕುಮಾರ್
ಚಳ್ಳಕೆರೆ: ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪಿಸುವ ಯುವಕರು ವಿವಿಧ ಇಲಾಖೆಗಳಲ್ಲಿ ಪರವಾನಿಗೆ ಪಡೆದ ಬಳಿಕ ಗಣೇಶ ಪ್ರತಿಷ್ಠಾಪನೆ ಮಾಡಬೇಕು ಎಂದು ಡಿವೈಎಸ್‌ಪಿ. ರಮೇಶ್ ಕುಮಾರ್ ಹೇಳಿದ್ದಾರೆ.


ನಗರದ ಪಾವಗಡ ರಸ್ತೆಯ ಗುರುರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಗಣೇಶ ಪ್ರತಿಸ್ಠಾಪನಾ ಸಂಘಗಳ ಮುಖಂಡರ ಜೊತೆ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು, ಗಣೇಶ ಪ್ರತಿಷ್ಠಾಪಿಸುವ ಸಂಘವು ಪೊಲೀಸ್ ಠಾಣೆಯಲ್ಲಿ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು, ಗಣೇಶ ಕುರಿಸುವ ಸ್ಥಳವನ್ನು ಪೊಲೀಸ್ ಸಿಬ್ಬಂದಿಗೆ ತೋರಿಸಬೇಕು ಎಂದರು.


ಠಾಣಾ ಇನ್ಸೆಪೆಕ್ಟೆರ್ ಉಮೇಶ್ ಮಾತನಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಹಾಗೂ ಜನಸಂದಣಿ ಇಲ್ಲದೆ ಪ್ರದೇಶದಲ್ಲಿ ಪ್ರತಿಷ್ಠಾಪಿಸಿಬೇಕು, ಬೆಸ್ಕಾಂ ಇಲಾಖೆ, ನಗರಸಭೆ, ಗ್ರಾಪಂ. ಹಾಗೂ ಪರಿಸರ ನೈರ್ಮಲ್ಯ ಇಲಾಖೆಯಿಂದ ಪರವಾನಿಗೆ ಪಡೆದ ನಂತರ ಒಪ್ಪಂದದ ಪ್ರಕಾರ ಗಣೇಶ ಕುರಿಸಿ ವಿರ್ಸಜನೆ ಮಾಡಬೇಕು ಎಂದರು.

ಪ್ರಾಸ್ತವಿಕವಾಗಿ ಮಾತನಾಡಿದ ತಳಕು ವೃತ್ತ ನಿರೀಕ್ಷ ಕೆ.ಸಮೀವುಲ್ಲಾ ಮಾತನಾಡಿ, ಸಾರ್ವಜನಿಕವಾಗಿ ಗಣೇಶ ಕುರಿಸುವವರು ಕಡಿಮೆ ಎತ್ತರದಲ್ಲಿ, ಸಾರ್ವಜನಿಕವಾಗಿ ಯಾವುದೇ ಅಡಚಣೆ ಉಂಟಾಗದAತೆ ಗಣೇಶ ವಿರ್ಸಜನೆ ಮಾಡಬೇಕು, ಸಾರ್ವಜನಿಕ ರಸ್ತೆ, ಹೊಣಿಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದAತೆ ಗಣೇಶ ಕೂರಿಸಬೇಕು ಮೆರವಣಿಗೆಗೆ ಡಿಜೆ ಅವಕಾಶ ಇಲ್ಲ, ಇಲಾಖೆ ನಿಗಧಿ ಪಡಿಸದ ಸ್ಥಳದಲ್ಲೆ ವಿಸರ್ಜನೆ ಮಾಡಬೇಕು, ಗಣೇಶ ಪ್ರತಿಷ್ಠಾಪಿಸುವ ಸ್ಥಳದ ಪರವಾನಿಗೆ ಇಲಾಖೆಯ ಮೂಲಕ ಪಡೆಯಬೇಕು ಎಂದರು.

ಪೌರಾಯುಕ್ತ ಸಿ.ಚಂದ್ರಪ್ಪ ಮಾತನಾಡಿ, ಸಾರ್ವಜನಿಕವಾಗಿ ಪ್ರಸಾಧ ನೀಡಬಾರದು, ಸ್ಥಳದಲ್ಲೆ ಯಾವುದೇ ಗಲಭೆಗಳು ನಡೆದರು ಸಂಘವೇ ನೆರಹೊಣೆ ಹೋರಬೇಕು, ಅನ್ಯಚಟುವಟಿಕೆಗಳು, ಗುಂಪು ಘರ್ಟಣೆಗಳಿಗೆ ಅವಕಾಶ ಕೊಡದೆ ಹಬ್ಬವನ್ನು ಆಚರಿಸಬೇಕು ಎಂದರು.

ಈ ಸಂದರ್ಭದಲ್ಲಿ ಪಿಎಸ್‌ಐಗಳಾದ ಬಸವರಾಜ್, ತಿಮ್ಮಣ್ಣ, ಪರುಶುರಾಂಪುರ ಠಾಣೆಯ ಪಿಎಸ್‌ಐ ಕಾಂತರಾಜ್, ತಳಕು ಠಾಣಾ ಪಿಎಸ್‌ಐ ಮಾರುತಿ, ನಾಯಕನಹಟ್ಟಿ ಠಾಣಾ ಪಿಎಸ್‌ಐ ಶಿವರಾಜ್, ಅರಣ್ಯ ಇಲಾಖೆ ಅಧಿಕಾರಿ ನವೀನ್ ಕುಮಾರ್, ಬಾಬು, ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳಾದ ಮುಡುಕಿ, ಹಾಗೂ ಇತರರ ಸಂಘ ಸಂಸ್ಥೆಯವರು ಇತರರು ಇದ್ದರು.

About The Author

Namma Challakere Local News
error: Content is protected !!