ಗುರು ವಂಧನೆ ಕಾರ್ಯಕ್ರಮಕ್ಕೆ ಸಾಕ್ಷಿಕರಿಸಿದ ಬೇಡರೆಡ್ಡಿಹಳ್ಳಿ ಶಾಲೆಯ ಹಳೆಯ ವಿದ್ಯಾರ್ಥಿಗಳು
ಚಳ್ಳಕೆರೆ : ಗುರು ಬ್ರಹ್ಮ, ಗುರುವಿಷ್ಣು ಗುರುದೇವೋ ಮಹೇಶ್ವರ, ಎನ್ನುವ ಮಾತನ್ನು ಸಾಬೀತು ಮಾಡಿದ ಗುರುವಿನ ಹರಿವು ಮತ್ತೆ ಯಾರು ಈ ಜಗದಲ್ಲಿ ಇಲ್ಲ ಎಂಬುದನ್ನು ಗುರುವೊಬ್ಬನೆ ಮಾತ್ರ ಹರಿತವನು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ಅವರು ತಾಲೂಕಿನ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮದ ಜಿ.ವಿ ಅಂಜಿನಪ್ಪ ಸ್ಮಾರಕ ಗ್ರಾಮಾಂತರ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಇಂದು ವಿದ್ಯಾ ಕಲಿಸಿದ ಗುರುಗಳಿಗೆ ಅಭಿನಂದನಾ ಕಾರ್ಯಕ್ರದಮಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಮಾರಯ್ಯ ರವರು ಮಾತನಾಡಿ, ಪ್ರತಿಯೊಬ್ಬರು ಕೂಡ ಗುರುವಿನ ಗುಲಾಮನಾಗಬೇಕು ಹಾಗ ಮಾತ್ರ ಮುಕ್ತಿ ಸಿಗುವುದು ಎಂಬ ಮಾತು ಇಂದಿಗೂ ಸತ್ಯವಾಗಿದೆ, ಆದ್ದರಿಂದ ಹುಟ್ಟಿದ ಪ್ರತಿಯೊಬ್ಬರು ಕೂಡ ಜ್ಞಾನವಂತರಾಗಲೂ ವಿದ್ಯಾವಂತರಾಗಲೂ ಗುರುವಿನ ಪಾಠ ಅವಶ್ಯ ಅಂತಹ ಪೂರಕವಾದ ಕಲಿಕೆ ಗುರುವಿನಲ್ಲಿ ಮಾತ್ರ ಕಾಣಲು ಸಾಧ್ಯ ಎಂದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ತಿಪ್ಪಾರೆಡ್ಡಿ (ವಿಜ್ಞಾನ), ತಿಪ್ಪೇಸ್ವಾಮಿ (ಸಮಾಜ ವಿಜ್ಞಾನ), ರೇವಣ್ಣ, ಸಿದ್ದಪ್ಪ (ಹಿಂದಿ), ಕೃಷ್ಣಗೌಡ(ಇಂಗ್ಲಿಷ್) ಇವರಿಗೆ ಸನ್ಮಾನವನ್ನು ಮಾಡಿ ಅಭಿನಂದನೆಗಳನ್ನು ಸಲ್ಲಿಸಿದರು ಹಾಗೂ ಎಲ್ಲಾ ಹಳೆಯ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ತಿಪ್ಪೇಸ್ವಾಮಿ ನಿವೃತ್ತ ಶಿಕ್ಷಕರು ಮಾತನಾಡಿ ಶಾಲೆಗೆ 1 ಲಕ್ಷ ಹಣವನ್ನು ದಾನ ಮಾಡಿದರು
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕ ಮಂಜುನಾಥ್, ಸಹ ಶಿಕ್ಷಕರು, ಉಮಾ, ಲಕ್ಷ್ಮಿ, ಅಶ್ವಥ್‌ರೆಡ್ಡಿ (ವಲಸೆ) ರಾಮಾಂಜಿನೇಯ, ರಾಮಪ್ಪ ಸೋಮಶೇಖರ್, ವಿದ್ಯಾರ್ಥಿಗಳು, ಊರಿನಗ್ರಾಮಸ್ಥರು ಉಪಸ್ಥಿತರಿದ್ದರು…