ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯುವುದೆ ಪ್ರತಿಭಾ ಕಾರಂಜಿ : ಎಚ್.ಹನುಮಂತಪ್ಪ

ಚಳ್ಳಕೆರೆ : ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯುವ ಮೂಲಕ ಅವರ ಜ್ಞಾನದ ಮಟ್ಟವನ್ನು ಹೆಚ್ಚಿಸುವ ಅನಿವಾರ್ಯತೆ ಕೂಡ ಈ ಪ್ರತಿಭೆಯಲ್ಲಿ ಅನಾವರಣವಾಗುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್.ಹನುಮಂತಪ್ಪ ಹೇಳಿದರು.


ಅವರು ತಾಲೂಕಿನ ನನ್ನಿವಾಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನನ್ನಿವಾಳ ಶಾಲಾ ಆವರಣದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವರ್ಷದ ಕೊನೆಯ ಘಟ್ಟದಲ್ಲಿ ಮಕ್ಕಳ ಮಾನಸೀಕ ಅಭಿವ್ಯಕ್ತ ಪಡಿಸುವ ಒಂದು ವೇದಿಕೆ ಇದಾಗಿದೆ, ಆದ್ದರಿಂದ ಮಕ್ಕಳ ಪ್ರಬುದ್ದತೆಯನ್ನು ಹೊರ ಹಾಕುವ ಮೂಲಕ ಪ್ರತಿಭೆ ಅನಾವರಣ ಮಾಡಲಾಗುತ್ತದೆ ಎಂದರು.


ಕಸಬಾ ಹೋಬಳಿ ಶಿಕ್ಷಣ ಸಂಯೋಜಕರಾದ ಗಿರೀಶ್ ಬಾಬು ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಅನಾವರಣ ಮಾಡುವ ವೇದಿಕೆ ಪ್ರತಿಭಾ ಕಾರಂಜಿ, ಮಕ್ಕಳಲ್ಲಿ ನಾವಿನ್ಯ ರೀತಿಯ ಪ್ರತಿಭೆಗಳು ಹೊರಹೊಮ್ಮುತ್ತವೆ ಎಂದರು.

ಈದೇ ಸಂಧರ್ಭದಲ್ಲಿ ನಿರ್ದೇಶಕರಾದ ಎಸ್‌ಟಿ.ತಿಪ್ಪೇಸ್ವಾಮಿ, ರಾಜಣ್ಣ, ಕೊಟ್ರಪ್ಪ, ನನ್ನಿವಾಳ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ್‌ರೆಡ್ಡಿ, ಕ್ಲಸ್ಟರ್ ನ ಎಲ್ಲಾ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಶಾಲಾ ಮಕ್ಕಳು ಭಾಗವಹಿಸಿದ್ದರು.
ಅಭಿನಯ ಗೀತೆ ಕಂಠಪಾಠ ಸ್ಪರ್ಧೆ ಹಾಗೂ ಕ್ಲೇಮಾಡಲಿಂಗ್ ಇನ್ನಿತರೆ ಚಟುವಟಿಕೆಗಳನ್ನು ಬಹಳ ಅರ್ಥಪೂರ್ಣವಾಗಿ ನಡೆಸಲಾಯಿತು

Namma Challakere Local News
error: Content is protected !!