ಭಕ್ತರ ಭಾವನೆಗಳಿಗೆ ದಕ್ಕೆ ಬಾರದ ರೀತಿಯಲ್ಲಿ ಗೌರಸಮುದ್ರ ಮಾರಮ್ಮ ಜಾತ್ರೆ ನಡೆಸಲು ತಿರ್ಮಾನ : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ
ಚಳ್ಳಕೆರೆ : ಕೊವಿಡ್ ಇನ್ನೂ ನಮ್ಮನ್ನು ಬಿಟ್ಟು ಸಂಪೂರ್ಣವಾಗಿ ಹೊಗಿಲ್ಲ, ಆದ್ದರಿಂದ ಪ್ರತಿಯೊಬ್ಬರು ಮುನ್ನೆಚ್ಚರಿಕೆ ಕ್ರಮಗಳಾಗಿ ಮಾಸ್ಕ ಧರಿಸಬೇಕು, ಆದರೆ ಭಕ್ತರ ಭಾವನೆಗಳಿಗೆ ದಕ್ಕೆ ಬಾರದ ರೀತಿಯಲ್ಲಿ ಈ ಬಾರಿ ಜಾತ್ರೆ ನಡೆಸಲು ತಿರ್ಮಾನ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದ್ದಾರೆ.


ಇಂದು ಗೌರಸಮುದ್ರ ಮಾರಮ್ಮ ದೇವಸ್ಥಾನದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಗೌರಸಮುದ್ರ ಮಾರಮ್ಮದೇವಿ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳನ್ನು ಕುರಿತು ಅವರು ಮಾತನಾಡಿದರು.
ಈ ಬಾರಿ ಅದ್ದೂರಿಯಾಗಿ ಆಚರಣೆಗೆ ಸಿದ್ಧತೆ ನಡೆದಿದ್ದು ಮಾರಮ್ಮ ದೇವಿ ಜಾತ್ರೆಗೆ ಸುಮಾರು ಐದರಿಂದ ಏಳು ಲಕ್ಷ ಜನ ಹೆಚ್ಚು ಭಕ್ತಾದಿಗಳು ಜಾತ್ರೆಗೆ ಆಗಮಿಸಲಿದ್ದು ಮೊದಲಿನಂತೆ ಈಗಲೂ ಸಹ ಜಾತ್ರೆ ಯಶಸ್ವಿಗೆ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗುತ್ತದೆ


ಜಾತ್ರೆಗೆ ಬರುವಂತಹ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ರಿಪೇರಿ, ವಿದ್ಯುತ್, ತಾತ್ಕಾಲಿಕ ಪಶು ಆಸ್ಪತ್ರೆ, ಪೋಲೀಸ್ ಬಂದೋಬ¸್ಘû, ಸಾರಿಗೆ ವ್ಯವಸ್ಥೆ ಈ ಎಲ್ಲ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಬೇಕು, ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೆ ತೊಂದರೆಯಾಗದAತೆ, ಪೋಲೀಸ್ ಬಂದೂಬಸ್ತ್ ಮಾಡಬೇಕು. ಜಾತ್ರೆಗೆ ಆಗಮಿಸುವಂತಹ ಭಕ್ತರಿಗೆ ಯಾವುದೇ ಕೊರತೆ ಕಾಡಬಾರದು ಎಂದರು.


ಜಿಲ್ಲಾ ಎಸ್ಪಿ ಕೆ.ಪರಶುರಾಮ ಮಾತನಾಡಿ ಜಾತ್ರೆ ಬಂದ್ ಬಸ್ತ್ಗಾಗಿ ಸುಮಾರು ೧೦೦೦ ಹೆಚ್ಚುವರಿ ಪೋಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುವುದು, ಜಾತ್ರೆಯಲ್ಲಿ ಬರುವ ಹೋಗುವ ಎಲ್ಲಾ ವಾಹನಗಳ ಬಗ್ಗೆ ಎಚ್ಚರಿಕೆ ವಹಿಸಲಾಗುವುದು, ತುಮುಲುನಲ್ಲಿ ಮೂರು ಕಡೆ ವಾಚ್ ಟವರ್, ಸಿಸಿ ಕ್ಯಾಮರಾ ಅಳವಡಿಕೆ, ಬ್ಯಾರೆಕೆಡ್ ವ್ಯವಸ್ಥೆ ಮಾಡಲಾಗಿವುದು, ಜಾತ್ರೆಗೆ ಅತಿ ಹೆಚ್ಚು ಭಕ್ತರು ಬರುವ ಹಿನ್ನೆಲೆಯಲ್ಲಿ ಭಕ್ತರಿಗೆ ಅವಶ್ಯಕತೆಗೆ ತಕ್ಕಂತೆ ಅನುಕೂಲ ಮಾಡಿಕೊಡಲಾಗುವುದು ಎಂದರು.


ತಹಶೀಲ್ದಾರ್ ಎನ್ ರಘುಮೂರ್ತಿ ಮಾತನಾಡಿ ಶ್ರೀ ಮಾರಮ್ಮ ದೇವಿ ಜಾತ್ರೆಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದು ಭಕ್ತಾದಿಗಳಿಗೆ ತೊಂದರೆಯಾಗದAತೆ ಮುಖ್ಯವಾಗಿ ೫೦ಟ್ಯಾಂಕರ್‌ಗಳಿAದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಜಾತ್ರೆಗೆ ಬರುವಂತಹ ಭಕ್ತರಿಗೆ ಅನುಕೂಲಕ್ಕಾಗಿ ಗೌರಸಮುದ್ರ ಗ್ರಾಮ ಹಾಗೂ ತುಮುಲಿಗೆ ಸೇರುವ ಸುಮಾರು ೧೭ರಸ್ತೆ ದುರಸ್ತಿ, ರಸ್ತೆಗೆ ಅಡ್ಡಲಾಗಿರುವ ಗಿಡಗಂಟೆ ತೆರವಿನ ಕಾರ್ಯ, ರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚಬೇಕು, ಜಾತ್ರೆಯ ತಾತ್ಕಾಲಕವಾಗಿ ನಿರ್ಮಿಸಲಾದ ಅಂಗಡಿಗಳು ಗಾಡಿಗಳು ಮತ್ತು ವಾಹನಗಳ ನಿಲ್ದಾಣ ಹಾಗೂ ಇದೇ ರೀತಿಯಲ್ಲಿ ಅಂಗಡಿ ಮಾಲೀಕರಿಂದ ನೇಯಮಾನುಸಾರ ನಿಗದಿತ ಶುಲ್ಕ ವಸೂಲಿ ಪಂಚಾಯತಿಗೆ ಜಮಾ ಮಾಡುವಂತೆ ಮತ್ತು ಪಂಚಾಯತಿ ವತಿಯಿಂದ ಬಿದಿ ದೀಪಗಳ ವ್ಯವಸ್ಥೆ, ಚರಂಡಿ ಶುದ್ಧಗೊಳಿಸುವ ವ್ಯವಸ್ಥೆ, ಹಾಗೂ ತುಂಬಲು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲು ಕ್ರಮ ವಹಿಸುವಂತೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಸ್ವಚ್ಛತಾ ಕಾರ್ಯಕ್ಕೆ ಸಂಬAಧಿಸಿದAತೆ ಈ ಬಾರಿ ಅನುದಾನ ಕೊರತೆ ಇರುವುದರಿಂದ ಈ ಬಾರಿ ೫ಲಕ್ಷ ರೂಪಾಯಿ ಅನುದಾನವನ್ನು ಕಂದಾಯ ಇಲಾಖೆ ವತಿಯಿಂದ ಬರಿಸುವಂತೆ ಸೂಚನೆ ಮಾಡಲಾಯಿತು
ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂಬ ಅಂಶವನ್ನು ತಹಶೀಲ್ದಾರ್ ಅಧ್ಯಕ್ಷರ ಗಮನಕ್ಕೆ ತಂದರು
ಇನ್ನು ಜಾತ್ರೆಯಲ್ಲಿ ನಿರಂತರ ವಿದ್ಯುತ್ ಸರಬರಾಜು ಅವಶ್ಯಕತೆ ಇರುವುದರಿಂದ ಈ ಕುರಿತಂತೆ ಸಹಾಯಕ ಕಾರ್ಯ ಪಾಲಕ ಅಭಿಯಂತರ ಬೆಸ್ಕಾಂ ತಾಲೂಕು ಇವರು ೧೦ ಟ್ರಾನ್ಸ್ಫಾರ್ಮರ್ ಗಳನ್ನು ಪೂರ್ವ ಸಿದ್ಧತೆ ಮಾಡಿಕೊಂಡಿರುವುದಾಗಿ ಹಾಗೂ ಗ್ರಾಮಸ್ಥರು ಮನವಿ ಮೇರೆಗೆ ಜಾತ್ರೆ ಮಹೋತ್ಸವ ಶುರುವಾದ ಐದು ದಿನದಿಂದ ವಿದ್ಯುತ್ ನಿರಂತರ ಸಂಪರ್ಕವನ್ನು ಕಲ್ಪಿಸುವಂತೆ ಸೂಚನೆ ನೀಡಿದರು.


ಈದೇ ಸಂಧರ್ಭದಲ್ಲಿ ಕಾರ್ಯನಿರ್ವಾಹಣಧಿಕಾರಿ ಹೊನ್ನಯ್ಯ, ಸಹಾಯಕ ನಿದೇರ್ಶಕ ಸಂತೋಶ್‌ಕುಮಾರ್, ಡಿವೈಎಸ್‌ಪಿ ಶ್ರೀನಿವಾಸ್, ವೃತ್ತ ನೀರಿಕ್ಷ ಕೆ.ಸಮಿವುಲ್ಲಾ, ಗ್ರಾಮ ಪಂಚಾಯಿತ್ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸದಸ್ಯರು ಹಾಗೂ ಗ್ರಾಮದ ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!