ಸಮಾನತೆ ಎಲ್ಲಿ ಇರುವುದಿಲ್ಲವೋ, ಅಲ್ಲಿ ಶೋಷಣೆ ಇರುತ್ತದೆ : ಡಾ. ಶಿವಮೂರ್ತಿ ಮುರುಘಾ ಶರಣರು
ಚಿತ್ರದುರ್ಗ : ಸಮಾನತೆ ಎಲ್ಲಿ ಇರುವುದಿಲ್ಲವೋ ಅಲ್ಲಿ ಶೋಷಣೆ ಇರುತ್ತದೆ. ಬಸವಪ್ರಜ್ಞೆ ಅಭಿವೃದ್ಧಿಪರವಾದುದು, ಕಾಯಕ ಇರುವೆಡೆ ಉತ್ಪಾದನೆಯನ್ನು ಕಾಣಬಹುದು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.


ಚಿತ್ರದುರ್ಗ ನಗರದ ಸಮೀಪದ ಗೋನೂರಿನ ನಿರಾಶ್ರಿತ ಕೇಂದ್ರದಲ್ಲಿ ನಡೆದ ನಿತ್ಯ ಕಲ್ಯಾಣ; ಮನೆಮನೆಗೆ ಚಿಂತನ 22ನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಬಸವ ಪ್ರಜ್ಞೆ ವಿಷಯ ಕುರಿತು ಶ್ರೀಗಳು ಚಿಂತನ ನೀಡಿದರು.
ಬಸವಣ್ಣ ಕಾರುಣ್ಯ ಮೂರ್ತಿಗಳು. ಮಹಾ ಮಾನವತಾವಾದಿಗಳು. ಅವರದು ಜೀವಪರ ಕಾಳಜಿ. ದೇವರ ಹೆಸರಿನಲ್ಲಿ ಪ್ರಾಣಿವಧೆ ಮಾಡಬಾರದು.

ಅನುಭವ ಮಂಟಪದಲ್ಲಿ ಜ್ಞಾನದಾಸೋಹ, ಬಸವಣ್ಣನವರ ಮಹಾಮನೆಯಲ್ಲಿ ಅನ್ನದಾಸೋಹ ನಡೆಯುತ್ತಿತ್ತು. ಅಲ್ಲಿ ಅನೇಕ ರೀತಿಯ ಜನರಿದ್ದರು. ಮಹಾಮನೆಯಲ್ಲಿ ಬಂದ ಭಕ್ತರಿಗೆ ಹಾಲು-ಮಜ್ಜಿಗೆ ವಿತರಿಸಲು ನೂರಾರು ಹಸುಗಳನ್ನು ಸಾಕಿದ್ದರು.

ಬಸವಣ್ಣನವರಿಗೆ ಪ್ರಾಣಿಗಳ ಮೇಲೂ ಅಂತಃಕರಣ ಹರಿಸಿದರು ಎಂದು ತಿಳಿಸಿದರು.
ಬಸವಾದಿ ಶರಣರು ಕಾಯಕದಲ್ಲಿ ಕೈಲಾಸ ನೋಡುತ್ತಿದ್ದರು. ಅಲ್ಲಿ ಬೇಡುವವರಿರಲಿಲ್ಲ. ಬಡತನ ಎನ್ನುವುದು ವಿಶ್ವವ್ಯಾಪಿಯಾದುದು. ಶರಣರು ಉತ್ಪಾದನೆ ಜೊತೆಗೆ ವಿತರಣೆ ಮಾಡಿದರು. ಇಂದು ಮಠಗಳು ದುಡಿಯುವ ಕೈಗಳಿಗೆ ಕೆಲಸ ಕೊಟ್ಟಿವೆ. ಬಸವಣ್ಣನವರದು ಪ್ರಗತಿಪರ, ವೈಚಾರಿಕ ಚಿಂತನೆ. ಪ್ರಶ್ನಿಸುವ ಎದೆಗಾರಿಕೆ ಎಲ್ಲಿರುತ್ತದೋ ಅಲ್ಲಿ ಬಸವಣ್ಣ ಇರುತ್ತಾರೆ ಎಂದು ನುಡಿದರು.


ಮುಖ್ಯಅತಿಥಿ ಹೊಳಲ್ಕೆರೆಯ ಶಿಕ್ಷಕ ಸಿದ್ಧವ್ವನಹಳ್ಳಿ ವೀರೇಶ್, ದೊಡ್ಡಮೇಟಿಕುರ್ಕಿ ವಿರಕ್ತಮಠದ ಶ್ರೀ ಶಶಿಶೇಖರ ಸಿದ್ಧಬಸವ ಸ್ವಾಮಿಗಳು, ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಪತ್ರಕರ್ತ ಬಿ. ಚಿತ್ರಲಿಂಗಪ್ಪ ಸ್ವಾಗತಿಸಿದರು. ಶ್ರೀಮತಿ ಪ್ರತಿಭಾ ನಿರೂಪಿಸಿದರು.

Namma Challakere Local News
error: Content is protected !!