ಚಳ್ಳಕೆರೆ : ಪ್ರತಿ ವರ್ಷವು ಸ್ವಾತಂತ್ರ‍್ಯ ದಿನಾಚರಣೆ ಆಚರಣೆ ಮಾಡುತ್ತಿದ್ದೆವೆ ಆದರೆ ಈ ಬಾರಿ ಅಮೃತ ಮಹೋತ್ಸವ ಸಂಭ್ರಮದ ಹೊಸ್ತಿಲಲ್ಲಿ ಇರುವುದು ನಮ್ಮ ಭಾಗ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಆವರಣದಲ್ಲಿ ಆಯೊಜಿಸಿದ್ದ 76ನೇ ಸ್ವಾತಂತ್ರö್ಯ ದಿನಾಚರಣೆ ಸಂಭ್ರಮದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾತಂತ್ರö್ಯ ದಿನಾಚರಣೆ ಎಂದರೆ ಶಿಸ್ತಿನ ಆಚರಣೆ. ಶಿಸ್ತನ್ನು ಸಂತೋಷವಾಗಿ ಆಚರಿಸುವುದು ಈ ದಿವಸವಾಗಿದೆ, ಆದರೆ ಈ ಭಾರಿ ಶಾಲಾ ಮಕ್ಕಳು ಅತೀ ಹೆಚ್ಚಿನದಾಗಿ ಸೇರಿರುವುದು ಸಂತಸ ತಂದಿದೆ. ಅಮೃತ ಮಹೋತ್ಸವ ಸ್ವಾತಂತ್ರö್ಯ ದಿನಾಚರಣೆಯನ್ನು ಇಂದು ನಾವು ಆಚರಣೆ ಮಾಡುತ್ತಿದ್ದೆವೆ ಬೇರೆ ಬೇರೆ ಜಿಲ್ಲೆಗಿಂತ ನಮ್ಮ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ವಿಶೇಷವಾಗಿ ದಿನಾಚರಣೆ ಆಚರಿಸುತ್ತಿದ್ದೆವೆ,
ಕಳೆದ ಆಗಸ್ಟ್ 13 ರಂದು ನಗರದಲ್ಲಿ ಬೃಹತ್ ಗಾತ್ರದ 1500 ಮೀಟರ್ ಉದ್ದದ ತ್ರಿವರ್ಣ ಧ್ವಜ ಜಾಗೃತಿ ಜಾಥ ಈಡೀ ನಗರದಲ್ಲಿ ದೇಶ ಭಕ್ತಿ ಹೆಚ್ಚಿಸಿದೆ, ಇನ್ನೂ ಬೈಕ್ ಜಾಥ, ರಂಗೊಲಿ ಸ್ಪರ್ಧೆ, ಈಗೇ ವಿವಿಧ ಕಾರ್ಯಕ್ರಮಗಳ ಮೂಲಕ ಅಮೃತ ಮಹೋತ್ಸವವನ್ನು ಆಚರಿಸಿದ್ದೆವೆ ಎಂದರು.
ಇAದು ಪ್ರತಿಯೊಬ್ಬರು ವಿದ್ಯಾವಂತರಾಗಬೇಕು. ಶಿಕ್ಷಣ ಎಲ್ಲ ರಂಗದಲ್ಲೂ ಇರಬೇಕು. ಪ್ರತಿಯೊಬ್ಬರಿಗೂ ಅವಕಾಶಗಳು ದೊರೆತು ಪ್ರಾಮಾಣಿಕತೆಯಿಂದ ಅವುಗಳನ್ನು ನಿಭಾಯಿಸುವಂತಾಗಬೇಕು, ಬಿಜೆಪಿ ನೇತೃತ್ವದ ಸರಕಾರ ರಾಜ್ಯದಲ್ಲಿ ಇದ್ದರು ಚಳ್ಳಕೆರೆ ಕ್ಷೇತ್ರ ಮಾತ್ರ ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ ಕಾರಣ ಹೊಂದಾಣಿಕೆ ಹಾಗೂ ಸ್ವ ಪ್ರತಿಷ್ಠೆಯ ಇಲ್ಲದೆಯಿರುವುದರಿಂದ ನಮ್ಮ ಕ್ಷೇತ್ರ ಅಭಿವೃದ್ದಿ ಹಾದಿಯಲ್ಲಿ ಸಾಗುತ್ತಿದೆ ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ತಹಶೀಲ್ದಾರ್ ಎನ್.ರಘುಮೂರ್ತಿ ಅಮೃತ ಮಹೋತ್ಸವ ದಿನಾಚರಣೆಗೆ ಅರ್ಥ ಸಿಗಬೇಕಾದರೆ ಅಮೃತ ಮಹೋತ್ಸವ ಆಚರಣೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಂತಹ ಒಂದು ಸುಂದರ ಆಡಳಿತ ಅವಕಾಶವನ್ನು ನಮ್ಮ ಸ್ವಾತಂತ್ರ‍್ಯ ಚಳವಳಿಯ ಹರಿಕಾರರು ನಮಗೆ ಕಟ್ಟಿಕೊಟ್ಟಿದ್ದಾರೆ. ಮಹಾತ್ಮ ಗಾಂಧಿಜೀ, ಅಂಬೇಡ್ಕರ್, ಬಾಲ್‌ಗಂಗಾಧರ್ ತಿಲಕ್, ನೆಹರು, ಕಿತ್ತೂರು ರಾಣಿ ಚೆನ್ನಮ್ಮ, ಜಾನ್ಸಿ ರಾಣಿ ಲಕ್ಷಿö್ಮ ಬಾಯಿ, ಈಗೇ ಅನೇಕ ಮಹಾನಿಯರು ಸ್ವತಂತ್ರö್ಯ ತಂದು ಕೊಟ್ಟ ದಿಮಂತ ವ್ಯಕ್ತಿಗಳ ನೆನೆಯುವ ಸುದೀನವಾಗಬೇಕಿದೆ.
ಇಂತಹ ದಿಗ್ಗಜರುಗಳ ಹೆರುಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಅದು ಭಾರತದಷ್ಟೇ ಬೃಹತ್ ಪಟ್ಟಿಯಾಗುತ್ತದೆ. ಅವರ ಬೆವರು ಮತ್ತು ರಕ್ತ ತರ್ಪಣಗಳಿಂದಾಗಿಯೇ ಇವತ್ತು ನಾವು ಸಮೃದ್ಧ ಮತ್ತು ಶಾಂತಿಯುತ ಜೀವನ ನಡೆಸುವಂತಾಗಿದೆ. ಸಾಮರಸ್ಯದ ನಡೆಗೆ ಪ್ರೇರಣೆಯಾಗಿದೆ . ಜಗತ್ತಿನ ಜನ ಹುಬ್ಬೇರಿಸುವಂತೆ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಾಗಿದೆ . ಮೊದಲ ಸ್ವಾತಂತ್ರೋತ್ಸವದ ತ್ರಿವರ್ಣ ಧ್ವಜವನ್ನು ಹಾರಿಸುವ ಗಳಿಗೆಯವರೆಗೆ ನಡೆದ ಎಲ್ಲ ಘಟನೆಗಳೂ, ಪ್ರಯತ್ನಗಳೂ ರಾಷ್ಟ್ರೀಯ ಚಳವಳಿಯ ಭಾಗಗಳೇ ಆಗಿವೆ. ಸ್ವಾತಂತ್ರ‍್ಯ ಹೋರಾಟದ ಕಾಲಗತಿಯಲ್ಲಿ ಹುತಾತ್ಮ, ಮಹಾತ್ಮರುಗಳು ಮಾಡಿರುವ ತ್ಯಾಗ ಬಲಿದಾನಗಳು ಜನಮಾನಸದಿಂದ ಮರೆಯಾಗದಂತೆ ನೋಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ಇನ್ನೂ ಪೊಲೀಸ್ ಇನ್ಸಪೆಕ್ಟೆರ್ ಉಮೇಶ್ ಮಾತನಾಡಿ, ಸ್ವಾತಂತ್ರö್ಯದಿನಾಚರಣೆ ದೇಶದ ತುಂಬೆಲ್ಲ ಮನೆಮಾಡಿದೆ ಅಂದು ಬ್ರಿಟೀಷರು ಭಾರತಕ್ಕೆ ಬಂದು, ನಮ್ಮವರ ಸಾಮಾಜಿಕ ಸ್ಥಿತಿಗತಿಯನ್ನು ಅಧ್ಯಯಿಸಿ ಭಾರತಕ್ಕೆ ಬೇಕಾದ ಒಡೆದು ಆಳುವ ತಂತ್ರವನ್ನು ಅನ್ವಯಿಸುತ್ತ ಹೋದರು. ಅದರಿಂದ ದೇಶವು ಅಭದ್ರವಾಯಿತು. ಹಂತ ಹಂತವಾಗಿ ನಾವು ಪರಕೀಯರಿಗೆ ಗುಲಾಮರಾದೆವು. ದೇಶವನ್ನು ಅಭದ್ರಗೊಳಿಸಲು ನಮ್ಮೊಳಗಿನ ಪಟ್ಟಭದ್ರ ಹಿತಾಸಕ್ತಿಯನ್ನು ಬಳಸಿಕೊಂಡರು. ನಮ್ಮಲ್ಲಿ ಎರಡು ವಿಧವಾದ ಕಾನೂನು. ಧಾರ್ಮಿಕ ಕಾನೂನು. ಅವರವರ ಧರ್ಮವನ್ನು ಪಾಲಿಸುವ ಸ್ವಾತಂತ್ರö್ಯವು ಪ್ರತಿಯೊಬ್ಬ ಪ್ರಜೆಗೂ ಎಂದರು. ನಮ್ಮ ಸಂವಿಧಾನವೇ ನಮಗೆ ಮೊದಲ ಧರ್ಮ ಗ್ರಂಥವಾಗಿ , ಅದರ ಬೆಳಕಿನಲ್ಲಿ ನಾವು ಒಟ್ಟಾಗಿ ಬಾಳುವ ಮೂಲಕ ಜಗತ್ತಿಗೆ ಮಾದರಿಯಾಗೋಣ ಮತ್ತು ಅಮೃತ ಮಹೋತ್ಸವದ ಆಶಯಕ್ಕೆ ಅರ್ಥ ಬರುವಂತೆ ಬಾಳೋಣ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ನಗರಸಭೆ ಸದಸ್ಯರಾದ ಬಿ.ಟಿ.ರಮೇಶ್‌ಗೌಡ, ವಿಶುಕುಮಾರ್, ಕೆ.ವೀರಭದ್ರಪ್ಪ, ವಿಜಯಲಕ್ಷಿö್ಮÃ, ಪ್ರಶಾಂತ್, ವಿರುಪಾಕ್ಷ, ರಾಘವೇಂದ್ರ, ನಿರ್ಮಲ, ಪ್ರಕಾಶ್‌ವೈ, ಕವಿತಾ, ಶಿವಕುಮಾರ್, ಸುಜಾತ್, ನಾಗಮಣಿ, ಚಳ್ಳಕೆರೆಪ್ಪ, ಗಾಯಕ ಮುತ್ತುರಾಜ್, ಇಓ. ಹೊನ್ನಪ್ಪ, ಡಿವೈಎಸ್‌ಪಿ ರಮೇಶ್, ವೃತ್ತ ನಿರೀಕ್ಷಕ ಸಮಿವುಲ್ಲಾ, ಇನ್ಸೆಪೆಕ್ಟೆರ್ ಉಮೇಶ್, ಪೌರಾಯುಕ್ತ ಸಿ.ಚಂದ್ರಪ್ಪ, ಬಿಇಓ.ಕೆ.ಎಸ್.ಸುರೇಶ್, ಪಿಡ್ಲೂ ಇಂಜಿನಿಯಾರ್ ವಿಜಯ್ ಬಾಸ್ಕರ್, ಸತ್ಯರಾಯಣ್, ಆದರ್ಶ ರಾಜ್, ರೈತ ಮುಖಂಡ ಕೆ.ಪಿ.ಭೂತಯ್ಯ, ರೆಡ್ಡಿಹಳ್ಳಿ ವಿರಣ್ಣ, ಇತರರು ಇದ್ದರು.
ವಿವಿಧ ಕ್ಷೇತ್ರದಲ್ಲಿ ಅವಿರತ ಸಾಧನೆ ಮಾಡಿದ ವಿವಿಧ ಗಣ್ಯರನ್ನು ಸನ್ಮಾನ ಮಾಡಲಾಯಿತು.
ಪೊಟೋ, 1.ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಪ್ರೌಡಶಾಲಾ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ 76ನೇ ಸ್ವಾತಂತ್ರö್ಯ ದಿನಾಚರಣೆಯಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿದರು.
ಪೊಟೋ,2 ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಪ್ರೌಡಶಾಲಾ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ 76ನೇ ಸ್ವಾತಂತ್ರö್ಯ ದಿನಾಚರಣೆಯಲ್ಲಿ ವಿವಿಧ ಸಾಧಕರಿಗೆ ಸನ್ಮಾನ ಮಾಡಿದರು.
ಪೊಟೋ,3 ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಪ್ರೌಡಶಾಲಾ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ 76ನೇ ಸ್ವಾತಂತ್ರö್ಯ ದಿನಾಚರಣೆಯಲ್ಲಿ ಬಾಗಿಯಾಗಲು ಎತ್ತಿನ ಬಂಡಿ ಮೂಲಕ ಶಾಸಕ ಟಿ.ರಘುಮೂರ್ತಿಯರವರನ್ನು ಕರೆ ತರಲಾಯಿತು.