ಚಳ್ಳಕೆರೆ : ರಾಷ್ಟ್ರೀಯ ಮತದಾರರ ದಿನಾಚರಣೆ- 2026. ಪ್ರಯುಕ್ತ ಉತ್ತಮ ಮತಗಟ್ಟೆ ಅಧಿಕಾರಿ ಎಂದು ಪರಿಗಣಿಸಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಾದಲಗಟ್ಟೆ ಗೊಲ್ಲರಟ್ಟಿ ಶಾಲೆಯ ಮುಖ್ಯ ಶಿಕ್ಷಕರಾದ ರಾಜು ಟಿ ಇವರಿಗೆ ಭಾರತ ಚುನಾವಣಾ ಆಯೋಗ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಚಿತ್ರದುರ್ಗ ಇವರು ಉತ್ತಮ ಮತಗಟ್ಟೆ ಅಧಿಕಾರಿಯೆಂದು ಪ್ರಶಸ್ತಿಯನ್ನು ನೀಡಿರುತ್ತಾರೆ.
ಇನ್ನೂ ಪ್ರಶಸ್ತಿ ಸ್ವೀಕರಿಸಿದ ಮುಖ್ಯ ಶಿಕ್ಷಕ ರಾಜು, ಮಾತನಾಡಿ, ನಾವು ಮಾಡುವ ಕೆಲಸದಲ್ಲಿ ಶ್ರದ್ದೆಯಿಂದ ಮಾಡಿದರೆ ಇಂತಹ ಪ್ರಶಸ್ತಿಗಳು ಪ್ರತಿಯೊಬ್ಬರಿಗೂ ಸಿಗುತ್ತವೆ ಎಂದರು.

