ಚಳ್ಳಕೆರೆ :

ಹಾಲು ಉತ್ಪಾದಕರ ಸಹಕಾರ ಸಂಘದಿಂದ ರೈತರಿಗೆ ವರದಾನವಾಗಲಿದೆ, ಅದರಂತೆ‌ ಹೈನುಗಾರಿಕೆ ಮೂಲಕ ರೈತರ‌ಜೀವನ ಹಸಲು ಮಾಡಿಕೊಳ್ಅಲಬಹುದು ಎಂದು ಶಿಮುಲ್ ನಿರ್ದೇಶಕರಾದ ಬಿಸಿ. ಸಂಜೀವ ಮೂರ್ತಿ ಹೇಳಿದರು.

ಅವರು ನಗರದ ಚಳ್ಳಕೆರೆ ಉಪ ವಿಭಾಗದ ಕ್ಯಾಂಪ್ ಆಫೀಸ್ನ ಕುರಿಯನ್ ಸಭಾಂಗಣದಲ್ಲಿ ನಂದಿನಿ ಹಾಲು ಹಾಗೂ ಹಾಲು ಉತ್ಪನ್ನಗಳ ಮಾರಾಟಗಾರರ ಡೀಲರ್ಸ್ ಹಾಗೂ ರಾಸುಗಳ ಕೃತಕ ಗರ್ಭಧಾರಣೆ ವರ್ಕರ್ಸ್ ಕುಂದು ಕೊರತೆಗಳ ವಿಭಾಗವಾಗಿ ಹಾಗೂ ಹೊಸ ವರ್ಷದ ಕ್ಯಾಲೆಂಡರ್ ವಿತರಿಸುವ ಸಲುವಾಗಿ ಮತ್ತು ಗನ್ನಾಯಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಪರಿಕ್ಷಕರಾಗಿದ್ದ ಜಿ. ಉಮೇಶ್ ರವರು ಇತ್ತೀಚೆಗೆ ನಿವೃತ್ತಿ ಹೊಂದಿದ ಕಾರಣ ಅವರಿಗೆ ಒಕ್ಕೂಟದಿಂದ 2,25,000 ಚೆಕ್ ಅನ್ನು ವಿತರಿಸಿ ಮಾತನಾಡಿದರು,
ರೈತರು ಸಹಕಾರ ಸಂಘದಿಂದ ಉತ್ತಮ ಲಾಭವನ್ನು ಪಡೆದು ಆರ್ಥಿಕವಾಗಿ ಸಬಲರಾಗಬೇಕು ಹೈನುಗಾರಿಕೆ ಯಿಂದ ಕುಟುಂಬದ ನಿರ್ವಹಣೆ ಮೂಲಕ ಮನುಷ್ಯನ ಆರ್ಥಿಕ ವ್ಯವಸ್ಥೆ ಸುಧಾರಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾರ್ಕೆಟಿಂಗ್ ಜಿಲ್ಲಾ ವ್ಯವಸ್ಥಾಪಕರಾದ ಹಾಗೂ ತಾಲೂಕು ಮಾರ್ಕೆಟಿಂಗ್ ಆಫೀಸರ್ ಇರ್ಫಾನ್ಸರ್ ಹಾಗೂ ಮಾರ್ಗವಿಸ್ತರ್ಣ ಅಧಿಕಾರಿಗಳಾದ ನಯಾಜ್ ಬೇಗ್, ಪಶು ವೈದ್ಯರುಗಳಾದ ಡಾ. ಪುನೀತ್ ಡಾ. ಸತ್ಯನಾರಾಯಣ ಡಾ. ನರೇಶ, ಗನ್ನಾಯಕನಹಳ್ಳಿ ಹಾಲಿ ಮುಖ್ಯ ಕಾರ್ಯದರ್ಶಿ ರಾಮಕೃಷ್ಣ, ಕಚೇರಿ ಸಿಬ್ಬಂದಿ ವರ್ಗದವರು ಹಾಜರಿದ್ದರು.

About The Author

Namma Challakere Local News
error: Content is protected !!