ಚಳ್ಳಕೆರೆ : ಬುಡಕಟ್ಟು ಸಂಪ್ರದಾಯ ಹಾದುಹೊದ್ದ ನನ್ನಿವಾಳ ಗ್ರಾಮದ ಹಲವು ಹಟ್ಟಿ ಮನೆಗಳನ್ನು ಹೊಂದಿದ ಪೆತ್ತಮ್ಮನವರಹಟ್ಟಿ ಹಾಗೂ ಎತ್ತನಗೌಡರಹಟ್ಟಿಯ ಮ್ಯಾಸಬೇಡ ಜನಾಂಗದವರ ಆರಾಧ್ಯ ದೈವ ಹಾಗೂ ಗ್ರಾಮ ದೇವತೆಯಾದ ಶ್ರೀ ಮಹಾ ಚೌಡೇಶ್ವರಿ ದೇವಿ ದೇವಸ್ಥಾನದ ರಾಜಗೋಪುರ ಕಳಶರೋಹಣ ಹಾಗೂ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ನೆರೆವೆರಿಸಲಾಯಿತು.
ನಂತರ ಗಂಗೆ ಪೂಜೆಯ ನಂತರ ದೇವರನ್ನು ಗುಡಿ ತುಂಬಿಸುವ ಕಾರ್ಯಕ್ರಮವನ್ನು ಅದ್ದೂರಿಯಿಂದ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮ್ಯಾಸಬೇಡ ಕುಲಕ್ಕೆ ಸೇರಿದ ಸಾವಿರ ಕುಲದವರು ಉಪಸ್ಥಿತರಿದು ಈ ಗ್ರಾಮಗಳ ಐತಿಹಾಸಿಕತೆಯಲ್ಲಿ ಪ್ರಥಮ ವರ್ಷದ ಅದ್ದೂರಿ ವಿಜೃಂಭಣೆಯ ಆಚರಣೆಯಾಗಿದ್ದು, ಮ್ಯಾಸಬೇಡರ ಸಾವಿರ ಕುಲದವರು ದೇವರ ಹೆಸರಿನಲ್ಲಿ ಟ್ರಸ್ಟ್ ನೋಂದಣಿ ಮಾಡಿಸಿ ನಂತರ ವರ್ಷಕ್ಕೊಮ್ಮೆ ಅದ್ದೂರಿಯಾಗಿ ಜಾತ್ರೆ ನಡೆಸುವ ಮೂಲಕ ಗ್ರಾಮ ಸಮುದಾಯದ ಒಗ್ಗೂಡಿಕೆಗೆ ಸದಾ ಮುಂದಾಗೋಣ ಎಂದು ಸಭೆ ಸೇರಿ ತೀರ್ಮಾನಿಸಿದರು.
ಮ್ಯಾಸ ಬೇಡರ ಉಪಕುಲದ ಬುಲುಡ್ಲು ವಂಶದ ಬುಳ್ಳೋಬಯ್ಯ ಇವರು ಕಳಶವನ್ನು ಪ್ರತಿಷ್ಟಾಪಿಸಿದರು ನಂತರ ಇವರ ಮಗನಾದ ಬೈಯಣ್ಣ, ಸಾವಿರ ಕುಲದವರ ತೀರ್ಮಾನದಂತೆ ಪೂಜಾರಿ ಪಟ್ಟ ಕಟ್ಟಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಯಜಮಾನರುಗಳಾದ ಗೊಂಚಿಕಾರ ಪಾಪಯ್ಯ, ಉಡೇದ ಬೋರಯ್ಯ, ಸೆಂಚಯ್ಯ, ದೊರೆ ಪಾಲಯ್ಯ, ಭೂ ದಾನಿಗಳಾದ ಜೋಗವ್ವನವರ ಪಾಪಯ್ಯ, ಡಾ. ಎಸ್ ಪಾಪಣ್ಣ ದೊರೆ, ಗ್ರಂಥಪಾಲಕ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ, ಪಾಪಯ್ಯ ವೈ, ನನ್ನಿವಾಳ ಗ್ರಾಮಪಂಚಾಯಿತಿ ವಿಷಯ ನಿರ್ವಾಹಕರು, ಎತ್ತಿನಗೌಡರ ತಿಪ್ಪೇಸ್ವಾಮಿ ಪಿ, ಪ್ರಹ್ಲಾದ ಪಿ, ನನ್ನಿವಾಳ ಗ್ರಾಮಪಂಚಾಯಿತಿ ಗಣಕಯಂತ್ರ ನಿರ್ವಾಹಕರು, ಬಾಲು , ಯರಯ್ಯನವರ ಪಾಲಯ್ಯ, ಪಾಲಮ್ಮನವರ ಯರಯ್ಯ, ಕೆಳಗಲು ಮನೆ ಚಿನ್ನಯ್ಯ, ಪೆದ್ದ ಪಾಪಯ್ಯ, ದಡ್ಡಿ ಓಬಯ್ಯ, ಡಾ. ದೇವಪ್ಪ ಎಂ.ಕೆ., ಪ್ರಾಂಶುಪಾಲ, ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆ ಡಾ. ರಘುನಾಥ ಡಿ.ಎನ್, ಸಹ ಪ್ರಾಧ್ಯಾಪಕ, ದೊರೆ ಭೈಯಣ್ಣ, ಮತ್ತು ಊರಿನ ಸಮಸ್ಥ ಗ್ರಾಮಸ್ಥರು ಉಪಸ್ಥಿತರಿದ್ದರು..

