filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;

ಚಳ್ಳಕೆರೆ : ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘಗಳಿಂದ ರೈತರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ, ಆದ್ದರಿಂದ ಎಲ್ಲ ಸಹಕಾರಿಗಳು ಸೇರಿ
ಸಹಕಾರದಿಂದ ಸಹಕಾರ ಕ್ಷೇತ್ರದಲ್ಲಿ ಪ್ರಗತಿ ಕಾಣಬೇಕು ಎಂದು ಶಾಸಕ,
ಸಣ್ಣಕೈಗಾರಿಕೆ ಅಭಿವರದ್ದಿಮಂಡಳಿ ಅಧ್ಯಕ್ಷ, ಜಿಲ್ಲಾ
ಸಹಕಾರಿ ಕೇಂದ್ರ ಬ್ಯಾಂಕ್‌ ನಿರ್ದೇಶಕ ಟಿ.ರಘುಮೂರ್ತಿ
ತಿಳಿಸಿದರು.

ಅವರು ನಗರದ ಪಾವಗಡ ರಸ್ತೆಯ
ಸಾಯಿಬಾಬಾ ಮಂದಿರದಲ್ಲಿ ಸಹಕಾರಿ ಇಲಾಖೆ‌ ಹಮ್ಮಿಕೊಂಡಿದ್ದ 72ನೇ ಅಖಿಲಭಾರತ ಸಹಕಾರ
ಸಪ್ತಾಹದ ದಿನಾಚರಣೆಯ
ಸಮಾರಂಭವನ್ನು ಜ್ಯೋತಿ ಬೆಳಗುವಮೂಲಕ ಉದ್ಘಾಟಿಸಿ
ಮಾತನಾಡಿದರು.

ಸಹಕಾರಿ ಕ್ಷೇತ್ರ ಇಂದು ಎಲ್ಲರ
ಗಮನಸೆಳೆಯಲು ಆರಂಭಿಸಿದೆ. ಕಳೆದ ಕೆಲವು
ವರ್ಷಗಳಿಂದ `ಈ ಕ್ಷೇತ್ರವನ್ನು ಸಂಪೂರ್ಣವಾಗಿ
ನಿರ್ಲಕ್ಷ್ಯ ಮಾಡಲಾಗಿತ್ತು. ಆದರೆ,
ಬದಲಾದಕಾಲಪರಿಸ್ಥಿತಿಯಲ್ಲಿ
ಸಹಕಾರ ಕ್ಷೇತ್ರದ
ಕಾರ್ಯವೈಖರಿಯೂ ವಿಭಿನ್ನವಾಗಿದೆ.
ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕೃಷಿ ಪತ್ತಿನ ಸಹಕಾರ
ಸಂಘಗಳು, ಹಾಲುಉತ್ಪಾದಕರ ಸಂಘಗಳು ಲಕ್ಷಾಂತರ
ಜನರಿಗೆ ಬದುಕುಒದಗಿಸಿವೆ ಎಂದರು.
ಸಹಕಾರಿ
ಸಹಕಾರಿ ಕ್ಷೇತ್ರದ ಕಾರ್ಯಚಟುವಟಿಕೆಗಳನ್ನು
ಯಶಸ್ವಿಯಾಗಿ ನಡೆಸಲು ಸಹಕಾರ ಭವನ ನಿರ್ಮಾಣ
ಹಾಗೂ ಡಿಸಿಸಿ ಬ್ಯಾಂಕ್‌ನಲ್ಲೂ ಹಾಲುಉತ್ಪಾದಕ ಸಂಘಕ್ಕೆ
ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದೀರಿ ತಮ್ಮ
ಎರಡೂ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳು ಹಾಗೂ
ಸಹಕಾರಿದುರೀಣರೊಂದಿಗೆ
ಕಾರ್ಯಗತಗೊಳಿಸುವ ಭರವಸೆ
ನೀಡಿದರು.

ಸಿಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್‌ ಉಲ್ಲಾಶರೀಫ್‌
ಮಾತನಾಡಿ,
ಅಖಿಲಭಾರತ ಸಹಕಾರ ಸಪ್ತಾಹ ಚಳ್ಳಕೆರೆ ತಾಲ್ಲೂಕಿನಲ್ಲಿ
ಯಶಸ್ವಿಯಾಗಿ ನಡೆಯುತ್ತಿದೆ.ಈ
ಭಾಗದ
ಸಹಕಾರಿ ಕ್ಷೇತ್ರಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ.
ಇತ್ತೀಚಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ
ಹಲವಾರು ಯೋಜನೆಗಳನ್ನು
ಕ್ಷೇತ್ರದ ಬೆಳವಣಿಗೆಗೆ
ರೂಪಿಸಿದೆಎಂದರು.

ಸಹಕಾರಿಸಂಘಗಳ ಉಪನಿಬಂಧಕ
ಆರ್.ಎಸ್.ದಿಲೀಪ್‌ ಕುಮಾರ್, ಸಹಕಾರಿ ಕ್ಷೇತ್ರದ
ತತ್ವಾದರ್ಶಗಳು ಪಾಲಿಸಿದರೆ ಮಾತ್ರ ಈ ಕ್ಷೇತ್ರಭಿವೃದ್ಧಿಯತ್ತ
ಹೆಜ್ಜೆ ಇಡಲು ಸಾಧ್ಯವೆಂದರು.

ಶಿವಮೊಗ್ಗ ಹಾಲುಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ
ಎಸ್‌.ಜಿ.ಶೇಖರ್ ಮಾತನಾಡಿ, ರಾಜ್ಯದಲ್ಲಿಒಟ್ಟು 8.50ಲಕ್ಷ
ಸಹಕಾರಿಸಂಘಗಳಿವೆ, 3 ಕೋಟಿಗೂ ಹೆಚ್ಚು ಸದಸ್ಯರು ಇದ್ದಾರೆ. ಕರ್ನಾಟಕದಲ್ಲಿ ಹಾಲುಉತ್ಪಾದನೆಯಲ್ಲಿ ಕೆಎಂಎಫ್ 2ನೇ ಸ್ಥಾನದಲ್ಲಿದೆ. ಪ್ರತಿದಿನ8.46ಕೋಟಿ
ಹಣವನ್ನು ರೈತರಿಗೆ ನೀಡಲಾಗುತ್ತಿದೆ. ಹಾಲುಉತ್ಪಾದಕರ
ಸಹಕಾರ ಸಂಘಗಳು
ಯಶಸ್ವಿಯಾಗಿ
ಕಾರ್ಯನಿರ್ವಹಿಸುತ್ತಿವೆ.

ಪಶುವೈದ್ಯರಿಂದ ರಾಸುಗಳ
ತಪಾಸಣೆ ನಡೆಸಿ ಆರೋಗ್ಯ ರಕ್ಷಣೆಮಾಡಲಾಗುತ್ತಿದೆ
ಎಂದರು.

ಶಿವಮೊಗ್ಗ ಹಾಲುಒಕ್ಕೂಟದ ಜಿಲ್ಲಾ ನಿರ್ದೇಶಕ,
ಜಿಲ್ಲಾ ಸಹಕಾರಿಯೂನಿಯನ್ ನಿರ್ದೇಶಕ
ಬಿ.ಸಿ.ಸಂಜೀವಮೂರ್ತಿ ಮಾತನಾಡಿ, ಚಳ್ಳಕೆರೆ‌ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಕಳೆದ 12
ವರ್ಷಗಳಿಂದ ನಿರಂತರ ಶ್ರಮಿಸಿದ್ದಾರೆ. ಸಹಕಾರಿ ಕ್ಷೇತ್ರದಲ್ಲೂ ಅವರ ಕೊಡುಗೆಯನ್ನು ನಾವು
ನಿರೀಕ್ಷೆಮಾಡುತ್ತಿದ್ದೇವೆ. ಸಹಕಾರಿಕ್ಷೇತ್ರದ
ಕಾರ್ಯಕಲಾಪಗಳು ಯಶಸ್ವಿಯಾಗಿ ನಡೆಯಲು
ಸಹಕಾರಿಭವನ ನಿರ್ಮಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮ ಉದ್ದೇಶಿಸಿ ಸಹಕಾರಿ ಯೂನಿಯನ್
ಉಪಾಧ್ಯಕ್ಷ ಜೆ.ಆರ್.ರವಿಕುಮಾರ್, ಎಸ್.ಆರ್.ಗಿರೀಶ್‌,
ಜಿ.ಪಿ.ರೇವಣಸಿದ್ದಪ್ಪ ಮುಂತಾದವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ
ಯೂನಿಯನ್ ಅಧ್ಯಕ್ಷ ಎಚ್‌.ಎನ್.ತಿಪ್ಪೇಸ್ವಾಮಿ
ಮಾತನಾಡಿ, ಸಹಕಾರಿ ಕ್ಷೇತ್ರದ ಸರ್ವತೋಮುಖ
ಬೆಳವಣಿಗೆಗೆ ಕೇವಲ ಸಹಕಾರಿಸಂಘಗಳ ಸಹಕಾರದಿಂದ
ಆಗಬೇಕಿದೆ. ಎಲ್ಲರೂ ಕೈಜೋಡಿಸಿ ಈ ಕ್ಷೇತ್ರದ ಅಭಿವೃದ್ಧಿಗೆ ಸಂಕಲ್ಪಮಾಡಬೇಕಿದೆ. ಚಳ್ಳಕೆರೆ ವಿಧಾನಸಭಾ
ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿಯಾಗಿದ್ದು,
ಟಿ.ರಘುಮೂರ್ತಿಯವರಿಗೆ ಜಿಲ್ಲೆಯಲ್ಲಿ
ಸಚಿವಸ್ಥಾನದೊರೆತರೆ ಇಡೀ ಜಿಲ್ಲೆ ಅಭಿವೃದ್ಧಿಹೊಂದುತ್ತದೆ.
ಲಕ್ಷಾಂತರ ಜನರ ಬದುಕಿಗೆ ಆಸರೆಯಾಗಿರುವ ಸಹಕಾರ
ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ
ವಿಶ್ವಾಸವಿದ್ದು ಈ ವಿಶ್ವಾಸವನ್ನು ಸಾಕಾರಗೊಳಿಸುವಲ್ಲಿ
ತಾವೆಲ್ಲರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದರು.

ಕಾರ್ಯಕ್ರಮದಲ್ಲಿ ಸಹಕಾರರತ್ನ, ಸರಸ್ಕೃತ ಆ‌ರ್ ರಾಮರೆಡ್ಡಿ, ಆರ್.ಮಲ್ಲೇಶಪ್ಪ,
ಆರ್.ಮಲ್ಲೇಶಪ್ಪ, ಎಸ್.ಆರ್.ಗಿರೀಶ್,
ಜಿ.ಇ.ಅಜ್ಜಪ್ಪ, ಸಿ.ಬಿ.ಆದಿಭಾಸ್ಕರಶೆಟ್ಟಿ, ನಿರ್ದೇಶಕ ಕೆ.
ಜಗಣ್ಣ, ಎಚ್.ಎಂ.ಮಂಜುನಾಥಪ್ಪ, ಎ.ಚನ್ನಬಸಪ್ಪ,
ಜಿ.ಪಿ.ಗಂಗಾಧರಪ್ಪ,
ಎಂ.ಎಸ್.ಈರಲಿಂಗೇಗೌಡ,
ವಿನೋದಸ್ವಾಮಿ, ಮಂಜುಳಾ, ಜೆ.ಶಿವಪ್ರಕಾಶ್‌, ಬಿ.ಆರ್.
ರವಿಕುಮಾರ್, ಬಿ.ಮಲ್ಲಿಕಾರ್ಜುನಪ್ಪ, ಜಿ.ವಿ.ಉದಯ
ಕುಮಾರ್, ಸಹಕಾರ ಸಂಘಗಳ ಸಹಾಯಕ ನಿಬಂಧಕ
ಕೆ.ಶಿವಮೂರ್ತಿ, ಸಹಾಯಕ ನಿರ್ದೇಶಕಿ ಬಿ.ರೂಪ,
ಬಷೀರ್
ಖಾನ್,
ಎಂ.ಪುಟ್ಟರಾಜ್, ಜಿ.ಕೆ.ನವೀನ್,
ಟಿ.ಭರತ್ ಮುಂತಾದವರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!