ಸಾರ್ವಜನಿಕರ ಸೇವೆ ಮಾಡಲು ಪೊಲೀಸರಿಗೂ, ವಾಹನಚಾಲಕರಿಗೆ ಖಾಕಿ ಬಟ್ಟೆ ನೀಡಲಾಗಿದೆ: ಡಿವೈಎಸ್ಪಿ ಸತ್ಯನಾರಾಯಣರಾವ್


ಚಳ್ಳಕೆರೆ: ಪ್ರತಿದಿನ ರಸ್ತೆ ಸಂಚಾರ ನಿಯಮಗಳನ್ನೂ ಪಾಲನೆ ಮಾಡಿ ಸಾರ್ವಜನಿಕರ ರಕ್ಷಣೆ ಮಾಡುವ ಪೊಲೀಸರಿಗೆ, ವಾಹನಚಾಲಕರಿಗೆ ಖಾಕಿ ಬಟ್ಟೆ ನೀಡಲಾಗಿದೆ. ಪೊಲೀಸರಿಗೆ ಸಾರ್ವಜನಿಕರ ತೆರಿಗೆ ಹಣದಿಂದ ಸರ್ಕಾರ ಸಂಭಳ ಕೊಟ್ಟರೆ, ವಾಹನ ಚಾಲಕರ ಸಾರ್ವಜನಿಕ ಸೇವೆಗೆ ಪ್ರಯಾಣಿಕರೇ ಸಂದಾಯದ ಮೂಲಕ ಹಣ ನೀಡುತ್ತಾರೆ, ಎಂದು ಡಿವೈಎಸ್ಪಿ ಸತ್ಯನಾರಾಯಣರಾವ್

ನಗರದ ಪೊಲೀಸ್ ಠಾಣೆ ಮುಂಭಾಗದಲ್ಲಿ ಪೋಲಿಸ್ ಇಲಾಖೆಯಿಂದ ಆಟೋ ಚಾಲಕರು, ಬಸ್ ಚಾಲಕರು ಹಾಗೂ ವಾಹನ ಮಾಲೀಕರಿಗೆ ಆಯೋಜಿಸಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನೆಹರು ವೃತ್ತದಿಂದ ಬೆಂಗಳೂರು ರಸ್ತೆ, ಚಿತ್ರದುರ್ಗ ರಸ್ತೆ, ಬಳ್ಳಾರಿ ರಸ್ತೆ, ಪಾವಗಡ ರಸ್ತೆಯ ನಾಲ್ಕು ದಿಕ್ಕಿನ ಮಾರ್ಗಗಳಲ್ಲಿ 75 ರಿಂದ 100 ಮೀಟರ್ ದೂರ ಹೆಚ್ಚಾಗಿ ಟ್ರಾಫಿಕ್ ಜಾಮ್ ಆಗುತ್ತಿದೆ, ಇದು ಸುಧಾರಿಸಲು ಆಟೋ ಚಾಲಕರು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ.ಯಾವುದೇ ಚಾಲಕ ಗಾಡಿ ಹತ್ತಿ ಚಾಲಕನ ಸ್ಥಳದಲ್ಲಿ ಕುಳಿತಾಗ ತನ್ನ ಹೆಂಡತಿ ಮಕ್ಕಳು ತಂದೆ ತಾಯಿ ಕುಟುಂಬದ ಸದಸ್ಯರ ಬಗ್ಗೆ ಗಮನ ಇಟ್ಟುಕೊಂಡಾಗ ಮಾತ್ರ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯ, ನಗರದಲ್ಲಿ ರಾತ್ರಿ ಸಮಯದಲ್ಲಿ ಜನತೆ ನೆಮ್ಮದಿಯಿಂದ ನಿದ್ದೆ ಮಾಡಲು ಪೋಲಿಸರು ಅಲರ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ, ಹಾಗೂ ಖಾಕಿ ಬಟ್ಟೆ ಧರಿಸಿದ ಆಟೋ ಚಾಲಕರು ಮೋಸ ಮಾಡುವುದಿಲ್ಲ ಎಂಬ ನಂಬಿಕೆ ಹೊರಗಿನಿಂದ ಬರುವ ಜನತೆಗೆ ಇದೆ.ಆಟೋ ಚಾಲಕರು ಡಿಎಲ್, ಆರ್. ಸಿ ಬುಕ್, ಇತರೆ ದಾಖಲಾತಿಗಳನ್ನೂ ನೋಂದಣಿ ಮಾಡಿ ಪೊಲೀಸ್ ಇಲಾಖೆಯಿಂದ ನೀಡುವ ನಂಬರ್ ಹಾಕಿಸಬೇಕು ಇಲ್ಲವಾದಲ್ಲಿ ಆಟೋಗಳನ್ನು ಸೀಜ್ ಮಾಡಿ ಕಾನೂನು ಕ್ರಮ ಕೈಗೊಳ್ಳುತೇವೆ ಎಂದರು.

ಪೊಲೀಸ್ ಇನ್ಸ್ಪೆಕ್ಟರ್ ಕೆ ಕುಮಾರ್ ಮಾತನಾಡಿ ಹಿರಿಯ ಆಟೋ ಚಾಲಕರು ಶಿಸ್ತು ಬದ್ಧವಾಗಿ ರಸ್ತೆ ಸಂಚಾರ ನಿಯಮ ಪಾಲನೆ ಮಾಡುತ್ತಿದ್ದಾರೆ. ಆದರೆ ಕೆಲ ಯುವಕರು ಸರಿಯಾದ ರೀತಿಯಲ್ಲಿ ಅಟೋ ನಿಲ್ದಾಣ ಮಾಡಿಕೊಳ್ಳದೆ ಕಾನೂನು ನಿಯಮ ಪಾಲನೆ ಮಾಡುತ್ತಿಲ್ಲ, ಅದರಲು ಬಸ್ ನಿಲ್ದಾಣ ಆಸ್ಪತ್ರೆ ಮುಂಭಾಗ ಹೆಚ್ಚಾಗಿ ಟ್ರಾಫಿಕ್ಜಾಮ್ ಆಗುತ್ತಿದೆ.ಇದರಿಂದ ರಸ್ತೆ ನಿಯಮ ಪಾಲನೆ ಮಾಡುತ್ತಿಲ್ಲ ಕಂಡು ಬರುತ್ತಿದೆ. ಕೆಲವರು ಸಂಘಕ್ಕೆ ಬೆಲೆ ಕೊಡದೆ ಮಧ್ಯ ಮಧ್ಯ ಪ್ರದೇಶ ಮಾಡಿಕೊಂಡು ಹೋಗುತ್ತಾರೆ. ಸಂಘವನ್ನು ನೋಂದಣಿ ಮಾಡಿಸದೆ ನಿಮ್ಮ ಹೊಟ್ಟೆಯ ಮೇಲೆ ನೀವೇ ಕಲ್ಲು ಹಾಕಿ ಕೊಳ್ಳುತ್ತೀರಾ. ಕಳೆದ ಒಂದು ತಿಂಗಳಿಂದ ಟ್ರಾಪಿಕ್ ಕಿರಿಕಿರಿ ತಪ್ಪಿಸಲು ಪೊಲೀಸ್ ಇಲಾಖೆಯಿಂದ ಸುಧಾರಣೆ ಮಾಡಿ. ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡದ ಬಿಸಿ ನೀಡಲಾಗಿದೆ. ರಸ್ತೆ ಸುರಕ್ಷತಾ ಬಗ್ಗೆ ಸಂಚಾರ ನಿಯಮ ಬಗ್ಗೆ ಅಪಘಾತ ನಿಯಂತ್ರಣ ಮಾಡುವ ಬಗ್ಗೆ ಎಲ್ಲಾ ಚಾಲಕರು ತಿಳಿಯಬೇಕು ಎಂದರು.

ಅಟೋ ಚಾಲಕರಿಂದ ದೂರು: ರಸ್ತೆ ಸಂಚಾರ ನಿಯಮ ಪಾಲನೆ ಮಾಡಲು ಸಾರಿಗೆ ಬಸ್ ನಿಲ್ದಾಣದ ಒಳಗಡೆ ಯಾವುದೇ ಆಟೋ ಒಗದಂತೆ ಕ್ರಮ ವಹಿಸಿ. ನಗರದಲ್ಲಿ 3 ಸಾವಿರಕ್ಕೂ ಹೆಚ್ಚು ಆಟೋ ಇದ್ದಾವೆ, ದುಡಿಮೆ ಬಹಳ ಕಡಿಮೆ ಆಗುತ್ತಿದ್ದು ವಾಹನಗಳ ರೆಕಾರ್ಡ್ಸ್ ಪರಿಶೀಲನೆ ನಡೆಸಿ ದಾಖಲೆ ಇಲ್ಲದ ಆಟೋಗಳಿಗೆ ಕಡಿವಾಣ ಹಾಕಿ, ಮಂಜುನಾಥ ಬಸ್ ಮಾಲೀಕರು ರಸ್ತೆಯ ಎರಡು ಕಡೆ ಆಟೋ ನಿಲ್ದಾಣ ಮಾಡಿದರೆ ಅನುಕೂಲ ವಾಗುವಂತೆ ಎಂದು ದೂರು ನೀಡಿದರು.

ಈ ಸಂದರ್ಭದಲ್ಲಿ ಪಿಎಸ್ಐ ದರೆಪ್ಪ, ಈರೇಶ್, ಸಿಬ್ಬಂದಿಗಳು. ವಿವಿಧ ಆಟೋ ಚಾಲಕ ಸಂಘದವರು, ಬಸ್ ಮಾಲೀಕರು, ಇದ್ದರು.

About The Author

Namma Challakere Local News
error: Content is protected !!