ಚಳ್ಳಕೆರೆ : ಗ್ರಾಮ ಪಂಚಾಯತಿ ಪಿಡಿಒಗಳು ಕಿರಾಣಿ ಅಂಗಡಿಯ ಸರಕು ಅಲ್ಲ, ಯಾರೋ ಇಬ್ಬರು ಸದಸ್ಯರ ಗುಂಪು ಕಟ್ಟಿಕೊಂಡು ಬಂದು ಪಿಡಿಓರವರನ್ನು ಬದಲಾಯಿಸಿ ಎಂದ ಕೂಡಲೆ ಬದಲಾಯಿಸಿದರೆ ಗ್ರಾಮದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಶಾಸಕ ಟಿ.ರಘುಮೂರ್ತಿ ಕಿಡಿಕಾರಿದರು.
ಅವರು ತಾಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರೀಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮದಲ್ಲಿ ಹಾದು ಹೊಗುವ ರಸ್ತೆಗಳಿಗೆ ಜಂಗಲ್ ಕಟ್ಟಿಂಗ್ ಮಾಡಿ ಹಾಗೂ ಹೊಲಗಳಿಗೆ ಹೋಗುವ ದಾರಿ ವ್ಯವಸ್ಥೆ ಮಾಡಿ. ಕೇವಲ ನೆಪ ಮಾತ್ರಕ್ಕೆ ಕಾರ್ಯ ಮಾಡದೆ ಜನಗಳಿಗೆ ಅನುಕೂಲ ವಾಗುವ ರೀತಿಯಲ್ಲಿ ಕೆಲಸ ಮಾಡಿ ಸಾರ್ವಜನಿಕರಿಗೆ ವ್ಯವಸ್ಥೆ ಕಲ್ಪಿಸಿ ಎಂದರು.
ಜಿಲ್ಲಾ ಪಂಚಾಯತ ಇಂಜಿನಿಯರಿAಗ್ ಇಲಾಖೆ ಎಇಇ ಕಾವ್ಯ ಸಭೆಯ ಗಮನಹರಿಸಿ ಈಗಾಗಲೇ ತಾಲೂಕಿನಲ್ಲಿ ಅಂಗನವಾಡಿಗಳ ರೀಪೇರಿ, ಶೌಚಾಲಯ ದುರಸ್ಥಿ ಕಾರ್ಯ ಈಗಾಗಲೇ ಪ್ರಾರಂಭದ ಹಂತದಲ್ಲಿದೆ ಎಂದು ಸಭೆಯ ಗಮನಹರಿಸಿದರು.
ತಾಲೂಕಿನಲ್ಲಿ ಹಲವೆಡೆ ಅಕ್ರಮ ಮಧ್ಯ ಮಾರಾಟ ಎಗ್ಗಿಲದೆ ನಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ ಅಬಕಾರಿ ಇಲಾಖೆ ಅದಿಕಾರಿಗಳು ನಿಮ್ಮ ಕೆಲಸವೇನು ಎಂದು ಶಾಸಕರು ಕಠಿಣವಾಗಿ ನುಡಿದರು.
ಇದಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿ ಅಕ್ರಮ ಮಧ್ಯವನ್ನು ನಾವೇ ಹಲವು ಹಳ್ಳಿಗಳಲ್ಲಿ ಸೀಜ್ ಮಾಡಿದ್ದೆವೆ ಆದರೆ ಇವರ ಮಾನದಂಡ ನೋಡಿದರೆ ನಾಲ್ಕು ಲೀಟರ್ ಮಧ್ಯ ಇರುವ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸುವಂತಿಲ್ಲ ಈಗಾದರೇ ಕಡಿವಾಣ ಸಾಧ್ಯವಿಲ್ಲ ಎಂದರು.

ಜಾಜೂರು ಗ್ರಾಮ ಪಂಚಾಯತಿಯಲ್ಲಿ ಕಳೆದ ತಿಂಗಳಲ್ಲಿ ನಾಲ್ಕು ದಿನಗಳಿಂದ ಧರಣಿ ಮಾಡಿರುವದು ಮಾಧ್ಯಮಗಳಲ್ಲಿ ಬಂದಿದೆ. ಇದರಿಂದ ಇಓ ಹನುಮಂತಪ್ಪ ಕ್ರಮವಹಿಸಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳಿ ಎಂದು ಶಾಸಕರು ಗರಂ ಆದರು.
ತಾಲೂಕಿನಲ್ಲಿ ಸುಮಾರು 138 ಸರಕಾರಿ ಶಾಲೆಗಳ ದುರಸ್ಥಿ ಕಾರ್ಯಕ್ಕೆ ಅನುಮೋದನೆ ನೀಡಿದೆ ಎಂದು ಬಿಇಓ ಕೆ.ಎಸ್.ಸುರೇಶ್ ಸಭೆಯ ಗಮನ ಸೇಳೆದರು. ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ವ್ಯಾಸಂಗಕ್ಕೆ ಬರುವ ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದAತೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿ ಸೀಟ್ ಇಲ್ಲ ಎಂದು ಸಬೂಬು ಹೇಳದೆ ವ್ಯವಸ್ಥೆ ಮಾಡಿ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಬಿಸಿಎಂ ಅಧಿಕಾರಿ ಜಗನ್ನಾಥ್ ರವರಿಗೆ ಸೂಚನೆ ನೀಡಿದರು. ಪೋಸ್ಟ್ ಮೆಟ್ರಿಕ್ ಬಾಲಕರ ಹಾಸ್ಟೆಲ್ ಅವಶ್ಯಕತೆ ಇದೆ ಎಂದು ಜಗನ್ನಾಥ್ ಮನವಿ ಮಾಡಿದರು.
ಬೆಳೆ ಪರಿಹಾರ ಹಾಗೂ ಬೆಳೆವಿಮೆ ಕಟ್ಟಲು ರೈತರಿಗೆ ಹೆಚ್ಚಿನ ಜಾಗೃತಿ ಮೂಡಿಸಿ, ವ್ಯಾಪಕ ಪ್ರಚಾರ ಪಡಿಸಿ ಮಾಧ್ಯಮಗಳಲ್ಲಿ ಜಾಹಿರಾತು ನೀಡಿ ಎಂದು ಕೃಷಿ ಸಹಾಯಕ ನಿದೇರ್ಶಕ ಜೆ.ಅಶೋಕ್ ರವರಿಗೆ ಸೂಚಿಸಿದರು.
ತಾಲೂಕಿನಲ್ಲಿ ತೋಟಾಗಾರಿಕೆ ಬೆಳೆ ಬೆಳೆಯಲು ತುಂಬಾ ಉತ್ಸಕದಿಂದ ರೈತರು ಮುಂದೆ ಬರುತ್ತಿದ್ದಾರೆ ನೂತನವಾಗಿ ಡ್ರಾಗನ್ ಪ್ರೂಟ್ಸ್, ಬೆಳೆ ತಾಲೂಕಿನಲ್ಲಿ 36 ಹೆಕ್ಟೆರ್ ಬೆಳೆಯುತ್ತಿದ್ದಾರೆ ಎಂದು ತೋಟಾಗಾರಿಕೆ ಅಧಿಕಾರಿ ಆರ್.ವಿರುಪಾಕ್ಷಪ್ಪ ಸಭೆಯ ಗಮನ ಸೇಳೆದರು.

ಕಲ್ಲು ಬಂಡೆ ಹೊಡೆದುಕೊಂಡು ಜೀವನ ನಡೆಸುವವರ ಮೇಲೆ ನೀವು ಕ್ರಮ ಕೈಗೊಳ್ಳಬೇಡಿ ಎಂದು ಶಾಸಕ ಟಿ.ರಘುಮೂರ್ತಿ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಹಿಂದೆ ಇದ್ದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಆದರೆ ನೀವು ಯಾಕೆ ತೋದರೆ ಮಾಡುತ್ತಿರಾ ಎಂದು ಹೇಳಿದರು.
ಬಾಕ್ಸ ಮಾಡಿ :
ತಾಲೂಕು ಪಂಚಾಯತಿ ಆಡಳಿತ ಅಧಿಕಾರಿ ಜಿಲ್ಲಾ ಕೃಷಿಜಂಟಿ ನಿರ್ದೇಶಕರವರಿಗೆ ಸಭೆಯ ಮಾಹಿತಿ ಇಲ್ಲ, ಹಲವು ತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಗೈರು ಎಂದರೆ ಹೇಗೆ ಇಓ ಹನುಮಂತಪ್ಪ ರವರ ಕಾರ್ಯ ವೈಪಲ್ಯ ಎದ್ದುಕಾಣುತ್ತಿದೆ, ನಮ್ಮ ತಾಲೂಕು ಪಂಚಾಯಿತಿ ಹ್ಯಾಂಡಿಕ್ಯಾಪ್ಟ್ ಹಾಗಿದೆ, ಇದರಿಂದ ತಾಲೂಕಿಗೆ ಕೊಡುಗೆ ಏನು..? ಒಂದು ಇಲ್ಲಿಯಾದರೆ ಕೆಲಸ ಮಾಡು ಇಲ್ಲ ಬೇರೆಯಡೆದಾರೂ ಕೆಲಸ ಮಾಡು ಎರಡು ನಿಬಾಯಿಸುವುದು ಕಷ್ಟವಾಗುತ್ತದೆ ಎಂದು ಶಾಸಕರು ಗರಂ ಹಾದ ಪ್ರಸಂಗ ನಡೆಯಿತು.

ಈ ಸಭೆಯಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ, ಇಓ ಹನುಮಂತಪ್ಪ, ಎಡಿ ಸಂತೋಶ್‌ಕುಮಾರ್, ಎಡಿ ಸಂಪತ್ ಕುಮಾರ್, ಬಿಇಓ ಸುರೇಶ್, ಪಶುಅಧಿಕಾರಿ ರೇವಣ್ಣ, ಬಿಸಿಎಂ.ಜಗನ್ನಾಥ್, ಕಂದಾಯ ಅಧಿಕಾರಿ ಲಿಂಗೇಗೌಡ, ಆರೋಗ್ಯ ಸಹಾಯಕ ಅಧಿಕಾರಿ ತಿಪ್ಪೆಸ್ವಾಮಿ, ಇತರ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೋಡಿದ್ದರು.

About The Author

Namma Challakere Local News
error: Content is protected !!