ಚಳ್ಳಕೆರೆ : ಜನ ಸಾಮಾನ್ಯರು ಒಂದಾದರೆ ಜನ ಶಕ್ತಿಮುಂದೆ ಯಾವುದು ಇಲ್ಲ ಅದನ್ನು ತೋರಿಸಿ ಕೊಟ್ಟ ಸರಕಾರ ದೆಹಲಿ ಸರ್ಕಾರ ಎಂದು ಜಿಲ್ಲಾ ವೀಕ್ಷಕರಾದ ಗುರುಮೂರ್ತಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಗ್ರಾಮ ಸಂಪರ್ಕ ಅಭಿಯಾನ ಸಭೆಯಲ್ಲಿ ಭಾವಹಿಸಿ ಮಾತನಾಡಿದರು. ಈ ರಾಜಾಕೀಯ ಚರಿತ್ರೆಯಲ್ಲಿ, ಪ್ರಪಂಚದ ಚರಿತ್ರೆಯಲ್ಲಿ ಯಾವುದೇ ಪಕ್ಷ ಸಾಮಾಜದಲ್ಲಿ ಬದಲಾವಣೆ ತಂದಿಲ್ಲ ಎಂದರು.
ತಾಲೂಕು ಅಧ್ಯಕ್ಷ ಬಿ.ಪಾಪಣ್ಣ ಮಾತನಾಡಿ, ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು ಆದ್ದರಿಂದ ಈಗಾಗಲೇ ತಾಲೂಕಿನಲ್ಲಿ ನಿರಂತರವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದೆವೆ ಆದ್ದರಿಂದ ಗ್ರಾಮ ಸಂಪರ್ಕ ಅಭಿಯಾನ ಕಾರ್ಯಕ್ರಮದ ಮಾಡುತ್ತಿದ್ದೆವೆ ಎಂದರು.
ಈ ಸಂಧರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ವೀಕ್ಷಕರು ಗುರುಮೂರ್ತಿ ಹಾಗೂ ಉಮಾಶಂಕರ್. ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ರೆಡ್ಡಿಹಳ್ಳಿ ವೀರಣ್ಣ, ತಾಲೂಕು ಅಧ್ಯಕ್ಷÀ ಬಿ.ಪಾಪಣ್ಣ, ತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀಕಂಠಮೂರ್ತಿ, ಹಾಗೂ ಪಕ್ಷದ ಮುಖಂಡರು ಜಾಜೂರು ವೀರೇಶ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷಲತೀಫ್, ವೆಂಕಟೇಶ್, ಅಲ್ಲಾಭಕ್ಷಿ, ಶಿವಕುಮಾರ್, ಶ್ರೀನಿವಾಸ್, ಓಬಳೇಶ್, ಸುರೇಶ್, ಮಂಜುನಾಥ್, ಸಾಗರ್‌ಕುಮಾರ್ , ಚಿದಾನಂದ ಬಾಬು, ಮೊಳಕಾಲ್ಮೂರು ತಾಲೂಕು ಅಧ್ಯಕ್ಷ ತಮ್ಮಣ್ಣ, ಚಳ್ಳಕೆರೆ ಅಂಬೇಡ್ಕರ್ ನಗರ ಓಬಳೆಶ್, ಇತರರು ಪಾಲ್ಗೊಂಡಿದ್ದರು.